ETV Bharat / state

ಸಿದ್ದರಾಮಯ್ಯನವರು ಎಲ್ಲಿಗೆ ಹೋದ್ರೂ ಅಲ್ಲಿ ವಿರೋಧವೇ : ಸಚಿವ ಬಿ. ಶ್ರೀರಾಮಲು

author img

By

Published : Jan 1, 2022, 7:02 PM IST

ಸಿದ್ದರಾಮಯ್ಯ ಯಾರ ಜೊತೆಗೂ ನಂಬಿಕಸ್ತರಾಗಿಲ್ಲ. ಸಿದ್ದರಾಮಯ್ಯನವರ ಪರ ಯಾರೂ ಇರುವುದಿಲ್ಲ, ಅವರಿಗೆ ವಿರೋಧವೇ ಹೆಚ್ಚು..

minister b shriramulu
ಸಚಿವ ಬಿ ಶ್ರೀರಾಮಲು

ಬಾಗಲಕೋಟೆ : ವಿಪಕ್ಷ ನಾಯಕ ಸಿದ್ದರಾಮಯ್ಯನವರು ಎಲ್ಲಿಗೆ ಹೋದ್ರೂ ಅಲ್ಲಿ ವಿರೋಧವೇ.. ಸಿದ್ದರಾಮಯ್ಯನವರ ಪರ ಯಾರೂ ಇರುವುದಿಲ್ಲ. ಅವರಿಗೆ ವಿರೋಧವೇ ಹೆಚ್ಚು ಎಂದು ಸಚಿವ ಬಿ. ಶ್ರೀರಾಮಲು ಟೀಕಿಸಿದರು.

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಸಚಿವ ಬಿ. ಶ್ರೀರಾಮಲು ಟೀಕಿಸಿರುವುದು..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರ ಜೊತೆಗೂ ನಂಬಿಕಸ್ತರಾಗಿಲ್ಲ. ಅವರಿಗೆ ಅಧಿಕಾರ ಬೇಕು ಅಷ್ಟೇ.. ಅಂದು ಚಿಮ್ಮನಕಟ್ಟಿ, ಎಸ್.ಆರ್ ಪಾಟೀಲ್ ಬೇಕಿದ್ದರು. ಇಂದು ಅವರ ಕೈಬಿಟ್ಟರು ಎಂದು ವ್ಯಂಗ್ಯವಾಡಿದರು.

ಪಕ್ಷದ ತೀರ್ಮಾನಕ್ಕೆ ಬದ್ಧ : ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿ, ನೋಡೋಣ ಅದು ಪಕ್ಷದ ನಿರ್ಧಾರ. ರಾಜಕಾರಣದಲ್ಲಿ ನಾನು ಯಾವುದನ್ನು ಅಂದುಕೊಳ್ಳಲ್ಲ. ಬಿಜೆಪಿ ಪಕ್ಷದಲ್ಲಿ ನಾನೊಬ್ಬ ಶಿಸ್ತಿನ ಸಿಪಾಯಿ ಇದ್ದಂಗೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಪಕ್ಷ ಹೇಳಿದ್ರೆ ನಾನು ರೆಡಿ ಎಂದರು.

ಸಿದ್ದು ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ : ಮತಾಂತರ ಕಾಯ್ದೆ ಕುರಿತು ಕಾಂಗ್ರೆಸ್​ ವಿರೋಧಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಒಬ್ಬ ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ ಎಂದು ಕಿಡಿ ಕಾರಿದರು. ಈ ಹಿಂದೆ ಅದೇ ಮಸೂದೆಗೆ ಸಹಿ ಹಾಕಿದ್ದೇ ಸಿದ್ದರಾಮಯ್ಯ. ಈಗ ಸಹಿ ಮಾಡಿಲ್ಲ ಅಂತಾ ಹೇಳಿ, ಮತ್ತೆ ಮಾಡಿದ್ದೇನೆ ಏನು ಮಾಡ್ತೀರಿ ಅಂತಾರೆ. ನಾವೇನು ಅವರೊಂದಿಗೆ ಜಗಳ ಮಾಡುತ್ತೇವಾ? ಬೇಕಾಬಿಟ್ಟಿ ಮಾತನಾಡೋ ಸಿದ್ದರಾಮಯ್ಯ ಒಬ್ಬ ಭಂಡ ವ್ಯಕ್ತಿ ಎಂದು ಹೇಳಿದರು.

ಎಸ್.ಆರ್. ಪಾಟೀಲ್ ಪರ ಬ್ಯಾಟಿಂಗ್ : ವಿಧಾನ ಪರಿಷತ್​ನ ವಿರೋಧ ಪಕ್ಷದ ನಾಯಕ‌ ಎಸ್.ಆರ್. ಪಾಟೀಲ್ ಪರ ಶ್ರೀರಾಮುಲು ಭರ್ಜರಿ ಬ್ಯಾಟಿಂಗ್ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಎಲ್ಲ ನಾಯಕರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜನರು ಎಂದು ಎದ್ದು ನಿಲ್ಲುತ್ತಾರೋ ಗೊತ್ತಿಲ್ಲ. ಜಿಲ್ಲೆ ಬಿಟ್ಟು ತೊಲಗಬೇಕು ಅನ್ನೋ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬರಬಹುದೇನೋ..

ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿದಿದ್ದರೆ ಅದು ಎಸ್.ಆರ್ ಪಾಟೀಲ್ ಅವರಿಂದ ಮಾತ್ರ. ಆದ್ರೆ, ಅವರಿಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದ್ದು ಸಿದ್ದರಾಮಯ್ಯ. ಮತ್ತೊಂದು ಕಡೆ ಚಿಮ್ಮನಕಟ್ಟಿ ಅವರನ್ನ ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇನ್ನು ಮುಂದೆ ಇಲ್ಲಿ ನಿಲ್ಲೋದು ಬೇಡ ಅಂತಾ ಚಿಮ್ಮನಕಟ್ಟಿ ಹೇಳಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೇನೆ.

ಒಟ್ಟಾರೆ ಈ ಜಿಲ್ಲೆಗೆ ಅನ್ಯಾಯ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರದಲ್ಲೇ ಸಿದ್ದರಾಮಯ್ಯನವರು ಜಿಲ್ಲೆಯನ್ನು ಬಿಡಬೇಕು ಅಂತಾ ಪ್ರತಿಭಟನೆ ಕೂಡ ಆಗಬಹುದು ಎಂದು ತಿಳಿಸಿದರು.

ಡಿಕೆಶಿ ಹಗಲುಗನಸು ಕಾಣುತ್ತಿದ್ದಾರೆ : ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಡಿಕೆಶಿ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದರು. ಮೇಕೆದಾಟು ಪಾದಯಾತ್ರೆ ಮಾಡಬೇಕು ಅಂತಾ ಹೇಳಿ ಪಾಪ ಎಲ್ಲೋ ಶೂಟಿಂಗ್ ಮಾಡ್ತಿದ್ದರಂತೆ. ಫೇಸ್​ಬುಕ್, ವಾಟ್ಸ್‌ಆ್ಯಪ್​ನಲ್ಲಿ ಟ್ರೋಲ್ ಮಾಡಿಕೊಂಡು ಲಾಭ ಪಡೆಯಬೇಕು ಅಂತಾ ಶೂಟಿಂಗ್​​ನಲ್ಲಿ ಬ್ಯುಸಿ ಆಗಿದ್ದಾರೆ. ಕೆಲಸ ಇಲ್ಲದ ಟೈಮ್​​ನಲ್ಲಿ, 2023ಕ್ಕೆ ಅಧಿಕಾರಕ್ಕೆ ಬರಬೇಕೆಂದು ಹಗಲುಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಈಗ ಪರದೇಸಿ ಪಕ್ಷ : ಒಂದು ಕಡೆ ಶೂಟಿಂಗ್ ಮಾಡೋರು ಶೂಟಿಂಗ್ ಮಾಡ್ತಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿ ಆಗ್ತೀನಿ ಅನ್ನೋರು ಯೋಜನೆಗಳ ಮೇಲೆ ಯೋಜನೆ ಘೋಷಣೆ ಮಾಡ್ತಿದ್ದಾರೆ. ಅದು ಮಾಡ್ತೀವಿ, ಇದು ಮಾಡ್ತೀವಿ ಅಂತಾ ಎಂದು ಹೇಳುತ್ತಾ ಮುಖ್ಯಮಂತ್ರಿ ಆಗಿದ್ದೀನಿ ಅಂತಲೇ ಭ್ರಮೆಯಲ್ಲಿದ್ದಾರೆ. ಏನೇ ನಾಟಕ ಮಾಡಿದ್ರೂ ಕೂಡ ಎಲ್ಲ ವ್ಯರ್ಥ ಆಗುತ್ತವೆ. ಪ್ರದೇಶ್ ಕಾಂಗ್ರೆಸ್ ಪಕ್ಷ ಅಲ್ಲ, ಈಗ ಪರದೇಸಿ ಕಾಂಗ್ರೆಸ್ ಆಗಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡ್ತಿದೆ : ಸಚಿವ ಅಶ್ವತ್ಥ್‌ ನಾರಾಯಣ

ಪರದೇಸಿ ಕಾಂಗ್ರೆಸ್ ಪಕ್ಷಕ್ಕೆ ನಾಯಕ ಯಾರು? ಒಂದು ಕಡೆ ದುಡ್ಡು ಇರೋ ಡಿಕೆಶಿ, ಅವರು ಕೇವಲ ಫೋಸ್ ಕೊಟ್ಟು ಅಲ್ಲೆಲ್ಲೋ ರೈತರ ಜೊತೆ ಫೋಟೋ ತೆಗಿಸಿ ಅಲ್ಲಿಂದ ಪಬ್ಲಿಸಿಟಿ ತೆಗೆದುಕೊಳ್ಳುತ್ತಾರೆ. ಮತ್ತೊಬ್ಬರು ಮುಖ್ಯಮಂತ್ರಿ ಆಗಿದ್ದೀನಿ ಅಂತಾ ತಿಳಿದು ಯೋಜನೆಗಳನ್ನು ಘೋಷಣೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.