ETV Bharat / state

ಶಾಕಿಂಗ್​: ಅಮಾವಾಸ್ಯೆಯ ದಿನ ಹೊಲದಲ್ಲಿ ಹೂತಿದ್ದ ಶವ ಕದ್ದೊಯ್ದ ಕಿರಾತಕರು...!

author img

By

Published : Jul 22, 2020, 3:55 PM IST

5 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯೋರ್ವನ ಶವವನ್ನು ಕದ್ದೊಯ್ದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಭೀಮನ ಅಮಾವಾಸ್ಯೆ ದಿನವೇ ಈ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

A dead body theft by unknown peoples in new moon day at Baglakot
ಅಮಾವಾಸ್ಯೆಯ ದಿನ ಹೊಲದಲ್ಲಿ ಹೂತಿದ್ದ ಶವ ಕದ್ದೊಯ್ದ ದುಷ್ಕರ್ಮಿಗಳು

ಬಾಗಲಕೋಟೆ: ಹೂತಿದ್ದ ಶವವೊಂದನ್ನು ದುಷ್ಕರ್ಮಿಗಳು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ನಡೆದಿದೆ. ರಾಮಣ್ಣ ತುಮ್ಮರಮಟ್ಟಿ 5 ತಿಂಗಳ ಹಿಂದೆ ಶಿವರಾತ್ರಿ ಶಿವಯೋಗದ ದಿನ ಮೃತಪಟ್ಟಿದ್ದರು.

ಫೆಬ್ರವರಿ 21ರಂದು ಮೃತಪಟ್ಟಿದ್ದು, ಫೆಬ್ರವರಿ 22 ರಂದು ಅಂತ್ಯಸಂಸ್ಕಾರ ‌ನೆರವೇರಿಸಲಾಗಿತ್ತು. ಮೃತ ವ್ಯಕ್ತಿ ಕ್ಯಾನ್ಸರ್​​ನಿಂದ ಬಳಲಿ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಇನ್ನೂ ಮೊನ್ನೆ ನಾಗರ(ಭೀಮನ) ಅಮಾವಾಸ್ಯೆ ದಿನ ಖದೀಮರು ಶವ ಹೊತ್ತೊಯ್ದಿದ್ದು ವಾಮಾಚಾರ, ನಿಧಿಗಾಗಿ ಶವ ಹೊರತೆಗೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

Ramanna thammarmatti
ಕ್ಯಾನ್ಸರ್​​​ನಿಂದ ಮೃತಪಟ್ಟಿದ್ದ ರಾಮಣ್ಣ ತುಮ್ಮರಮಟ್ಟಿ

ಮೃತ ರಾಮಣ್ಣರ ಹೊಲದಲ್ಲೇ ಶವ ಹೂಳಲಾಗಿತ್ತು. ಶವ ಸಂಸ್ಕಾರವಾಗಿ 5 ತಿಂಗಳು ಕಳೆದಿರುವ ಹಿನ್ನೆಲೆ ಶವ ಅಸ್ಥಿಪಂಜರವಾಗಿರುವ ಸಾಧ್ಯತೆ ಇದೆ. ಇದೇ ಕಾರಕ್ಕಾಗಿ ಶವ ತೆಗೆಯಲಾಗಿದೆ ಎಂಬ ಅನುಮಾನವಿದೆ.

ದುಷ್ಕರ್ಮಿಗಳು ಅಮಾವಾಸ್ಯೆಯ ರಾತ್ರಿ ಶವ ಹೊತ್ತೊಯ್ದಿರುವ ರಹಸ್ಯವೇನು? ವಾಮಾಚಾರ, ನಿಧಿಗಾಗಿ ಹೊತ್ತೊಯ್ದಿರಬಹುದೆ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದ್ದು, ರೂಗಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಘಟನೆ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.