ETV Bharat / sports

ಟೋಕಿಯೋ ಒಲಿಂಪಿಕ್ಸ್​: ಎರಡನೇ ಪಂದ್ಯದಲ್ಲೂ ಸೋಲುಂಡ ಭಾರತದ ಮಹಿಳಾ ಹಾಕಿ ತಂಡ

author img

By

Published : Jul 26, 2021, 7:58 PM IST

ಟೋಕಿಯೋ ಒಲಿಂಪಿಕ್ಸ್​ನ ಎರಡನೇ ಪಂದ್ಯದಲ್ಲೂ ಭಾರತೀಯ ಮಹಿಳಾ ತಂಡ ಸೋಲು ಕಂಡಿದ್ದು, ಮುಂದಿನ ಹಂತಕ್ಕೆ ತಲುಪುವ ಹಾದಿ ಮತ್ತಷ್ಟು ಕಠಿಣ ಮಾಡಿಕೊಂಡಿದೆ.

Tokyo Olympics
Tokyo Olympics

ಟೋಕಿಯೋ: ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ನೀರಸ ಪ್ರದರ್ಶನ ಮುಂದುವರೆದಿದೆ. ಈಗಾಗಲೇ ತಾವಾಡಿದ್ದ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲು ಕಂಡಿದ್ದ ಹಾಕಿ ತಂಡ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದೆ.

ಜರ್ಮನಿ ವಿರುದ್ಧ ನಡೆದ ಗ್ರೂಪ್​ ಹಂತದ ಎರಡನೇ ಪಂದ್ಯದಲ್ಲಿ 0-2 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಕಳೆದ ಎರಡು ದಿನಗಳ ಹಿಂದೆ ನೆದರ್ಲೆಂಡ್ಸ್​ ವಿರುದ್ಧ 5-1 ಅಂತರದಲ್ಲಿ ಸೋಲು ಕಂಡು ನಿರಾಸೆಗೊಳಗಾಗಿದ್ದ ಭಾರತ, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಇರಾದೆ ಇಟ್ಟುಕೊಂಡಿತ್ತು. ಆದರೆ ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿರುವುದು ತಂಡದ ಮನೋಬಲ ಮತ್ತಷ್ಟು ಕುಗ್ಗಿಸಿದೆ.

ಇದನ್ನೂ ಓದಿ: ಮಗುವಿನ ಮೈಮೇಲೆ ಹರಿಯಿತು ಕಾರು: ಚಾಲಕನ​ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿ

ಭಾರತ ಮಹಿಳಾ ತಂಡ ಜುಲೈ 28ರಂದು ಗ್ರೇಟ್​ ಬ್ರಿಟನ್, ಜುಲೈ 30ರಂದು ಐರ್ಲೆಂಡ್​ ಮತ್ತು ಜುಲೈ 31ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಪುರುಷರ ಹಾಕಿ ತಂಡ ಕೂಡ ಈಗಾಗಲೇ ತಾನು ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ. ಇದೀಗ ಸ್ಪೇನ್​ ವಿರುದ್ಧ ಸೆಣಸಾಟ ನಡೆಸಲಿದೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದು, ಅತಿ ಹೆಚ್ಚು(8 ಚಿನ್ನ, 3 ಬೆಳ್ಳಿ ಹಾಗೂ 3 ಕಂಚು) 14 ಪದಕ ಗೆದ್ದಿರುವ ಜಪಾನ್​ ಮೊದಲನೇ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.