ETV Bharat / sports

Tokyo Olympics: ಇಂದು ಪುರುಷರ ಹಾಕಿ ಸೆಮೀಸ್​ ಸೇರಿ ಈ ಎಲ್ಲ ಭಾರತೀಯರು ಕಣಕ್ಕೆ

author img

By

Published : Aug 3, 2021, 5:14 AM IST

ಎಲ್ಲರ ಗಮನ ಭಾರತೀಯ ಪುರುಷರ ಹಾಕಿ ತಂಡದ ಮೇಲೆ ನೆಟ್ಟಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು 41 ವರ್ಷಗಳ ಒಲಿಂಪಿಕ್ ಪದಕದ ಬರಕ್ಕೆ ಅಂತ್ಯಹಾಡಲು ಸುವರ್ಣಾವಕಾಶವಿದೆ.

tokyo-olympics-day-12-indian-athletes-to-watch-out-for
Tokyo Olympics: ಇಂದು ಪುರುಷರ ಹಾಕಿ ಸೆಮೀಸ್

ಟೋಕಿಯೊ: ಟೋಕಿಯೋ ಒಲಿಂಪಿಕ್ಸ್​ನ 12ನೇ ದಿನವಾದ ಇಂದು ಭಾರತದ ಪುರುಷರ ಹಾಕಿ ತಂಡವು ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಸೆಣೆಸಲಿದೆ. ಬೆಲ್ಜಿಯಂ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಟೋಕಿಯೊ ಒಲಿಂಪಿಕ್ಸ್​ನಲ್ಲಿ ಅಜೇಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಮತ್ತೊಂದು ಪದಕವು ಖಾತ್ರಿಯಾಗಲಿದೆ.

ಇಂದು ಭಾಗಿಯಾಗಲಿರುವ ಭಾರತದ ತಂಡ ಮತ್ತು ಕ್ರೀಡಾಪಟುಗಳ ವಿವರ:

ಭಾರತೀಯ ಪುರುಷರ ತಂಡ - ಹಾಕಿ:

ಎಲ್ಲರ ಗಮನ ಭಾರತೀಯ ಪುರುಷರ ಹಾಕಿ ತಂಡದ ಮೇಲೆ ನೆಟ್ಟಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು 41 ವರ್ಷಗಳ ಒಲಿಂಪಿಕ್ ಪದಕದ ಬರಕ್ಕೆ ಅಂತ್ಯಹಾಡಲು ಸುವರ್ಣಾವಕಾಶವಿದೆ. ಮನ್​ಪ್ರೀತ್ ಸಿಂಗ್ ನೇತೃತ್ವದ ತಂಡವು 1972ರ ಬಳಿಕ ಸೆಮಿಸ್​ ತಲುಪಿದೆ.

ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ಅವರ ಗೋಲುಗಳ ನೆರವಿನಿಂದ ಭಾರತವು ಕ್ವಾರ್ಟರ್ ಫೈನಲ್‌ನಲ್ಲಿ 3-1 ಅಂತರದಿಂದ ಗ್ರೇಟ್ ಬ್ರಿಟನ್ ಅನ್ನು ಮಣಿಸಿತ್ತು.

ಅನು ರಾಣಿ - ಜಾವೆಲಿನ್ ಥ್ರೋ:

ಮಹಿಳಾ ಜಾವೆಲಿನ್ ಥ್ರೋನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅನು ರಾಣಿ ಇಂದು ಎ ಗುಂಪಿನ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಅವರು ಒಲಿಂಪಿಕ್ಸ್ ಟಿಕೆಟ್​​ ಗಿಟ್ಟಿಸಿಕೊಂಡಿದ್ದರು.

ತಜಿಂದರ್ ಪಾಲ್ ಸಿಂಗ್ ಟೂರ್ - ಡಿಸ್ಕಸ್ ಥ್ರೋ:

ಶಾಟ್ ಪುಟರ್ ತಜಿಂದರ್ ಪಾಲ್ ಸಿಂಗ್ ತೂರ್ ಕೂಡ ಇಂದು ಕಣಕ್ಕಿಳಿಯಲಿದ್ದು, ಫೈನಲ್ಸ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಕುಸ್ತಿ:

ಮಹಿಳೆಯರ ಫ್ರೀಸ್ಟೈಲ್ 62 ಕೆಜಿ 16ನೇ ಸುತ್ತು : ಸೋನಮ್ ಮಲಿಕ್ - ಬೊಲೊರ್ಟುಯಾ ಖುರೆಲ್ಖು ಸೆಣೆಸಾಟ

ಮಹಿಳೆಯರ ಫ್ರೀಸ್ಟೈಲ್ 62 ಕೆಜಿ ಕ್ವಾರ್ಟರ್ ಫೈನಲ್: ಸೋನಮ್ ಮಲಿಕ್ ಅರ್ಹತೆ ಪಡೆದರೆ

ಮಹಿಳೆಯರ ಫ್ರೀಸ್ಟೈಲ್ 62 ಕೆಜಿ ಸೆಮಿಫೈನಲ್: ಸೋನಮ್ ಮಲಿಕ್ ಅರ್ಹತೆ ಪಡೆದರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.