ETV Bharat / sports

Tokyo Olympics : ನಾಳೆ ಬಾಕ್ಸರ್​​ ಸತೀಶ್ ಕುಮಾರ್, ಪಿವಿ ಸಿಂಧು ಕಣಕ್ಕೆ.. ಗೆದ್ದರೆ ಪದಕ ಖಚಿತ

author img

By

Published : Jul 31, 2021, 10:02 PM IST

ಭಾರತದ ಭರವಸೆಯ ಬ್ಯಾಡ್ಮಿಂಟನ್​ ತಾರೆ​ ಪಿ ವಿ ಸಿಂಧು ಸೆಮಿಫೈನಲ್‌ನಲ್ಲಿ ತೈ ಜು-ಯಿಂಗ್ ವಿರುದ್ಧ 18-21, 12-21 ಸೋಲನುಭವಿಸಿದ್ದಾರೆ. ನಾಳೆ ಕಂಚಿನ ಪದಕ್ಕಾಗಿ ಚೀನಾದ ಹೀ ಬಿಂಗ್ ಜಿಯಾವೊ ವಿರುದ್ಧ ಆಡಲಿದ್ದಾರೆ..

ನಾಳೆ ಬಾಕ್ಸರ್​​ ಸತೀಶ್ ಕುಮಾರ್, ಪಿವಿ ಸಿಂಧು ಕಣಕ್ಕೆ
ನಾಳೆ ಬಾಕ್ಸರ್​​ ಸತೀಶ್ ಕುಮಾರ್, ಪಿವಿ ಸಿಂಧು ಕಣಕ್ಕೆ

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​​ನ 10ನೇ ದಿನ ಇಂದು ನಡೆದ ಮಹಿಳೆಯರ ಸಿಂಗಲ್ಸ್​​ನ ಸೆಮಿಫೈನಲ್​ನಲ್ಲಿ ತೈ ಜು ಯಿಂಗ್​ ವಿರುದ್ಧ ಭಾರತದ ಭರವಸೆಯ ಬ್ಯಾಡ್ಮಿಂಟನ್​ ತಾರೆ​ ಪಿ ವಿ ಸಿಂಧು ಸೋಲುಂಡಿದ್ದಾರೆ. ಸೆಮಿಫೈನಲ್​ನಲ್ಲಿ ಸೋಲು ಕಂಡಿರುವ ಕಾರಣ ಇದೀಗ ಪಿವಿ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಆಟಗಾರ್ತಿ ವಿರುದ್ಧ ಹೋರಾಟ ನಡೆಸಲಿದ್ದಾರೆ.

11ನೇ ದಿನ ಭಾರತದ ಅಭಿಯಾನ :

ಸತೀಶ್ ಕುಮಾರ್ - ಬಾಕ್ಸಿಂಗ್

ಭಾರತದ ಬಾಕ್ಸರ್ ಸತೀಶ್ ಕುಮಾರ್ ಅವರು ಬಾಕ್ಸಿಂಗ್ (91 ಕೆಜಿ) ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡುವುದರ ಮೂಲಕ ತಮ್ಮ ಮೊದಲನೇ ಒಲಿಂಪಿಕ್ಸ್‌ನಲ್ಲಿಯೇ ಸದ್ದು ಮಾಡುತ್ತಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಅಂತರದಿಂದ ಸೋಲಿಸುವ ಮೂಲಕ ಭಾರತದ ಬಾಕ್ಸರ್ ಸತೀಶ್ ಕುಮಾರ್ ಅವರು 91 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ನಾಳೆ ಸತೀಶ್ ಉಜ್ಬೇಕಿಸ್ತಾನದ ಬಖೋಡಿರ್ ಜಲೋವ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಲಿದೆ.

ಪಿವಿ ಸಿಂಧು - ಬ್ಯಾಡ್ಮಿಂಟನ್

ಭಾರತದ ಭರವಸೆಯ ಬ್ಯಾಡ್ಮಿಂಟನ್​ ತಾರೆ​ ಪಿ ವಿ ಸಿಂಧು ಸೆಮಿಫೈನಲ್‌ನಲ್ಲಿ ತೈ ಜು-ಯಿಂಗ್ ವಿರುದ್ಧ 18-21, 12-21 ಸೋಲನುಭವಿಸಿದ್ದಾರೆ. ನಾಳೆ ಕಂಚಿನ ಪದಕ್ಕಾಗಿ ಚೀನಾದ ಹೀ ಬಿಂಗ್ ಜಿಯಾವೊ ವಿರುದ್ಧ ಆಡಲಿದ್ದಾರೆ.

ಭಾರತ ಪುರುಷರ ತಂಡ - ಹಾಕಿ

ಭಾನುವಾರ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಪುರುಷರ ಹಾಕಿ ತಂಡವು ಗ್ರೇಟ್ ಬ್ರಿಟನ್ ಅನ್ನು ಎದುರಿಸಲಿದೆ. ಶುಕ್ರವಾರ ಭಾರತವು ಪೂಲ್ ಎನಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಜಪಾನ್ ತಂಡವನ್ನ 5-3 ರಿಂದ ಸೋಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.