ETV Bharat / sports

Tokyo Olympics Boxing: ಸೆಮೀಸ್‌ನಲ್ಲಿ ಸೋತರೂ ಭಾರತಕ್ಕೆ 3ನೇ ಪದಕ ತಂದುಕೊಟ್ಟ ಲವ್ಲಿನಾ

author img

By

Published : Aug 4, 2021, 11:31 AM IST

Updated : Aug 4, 2021, 11:49 AM IST

ಭಾರತದ ಲವ್ಲಿನಾ ಬೋರ್ಗಹೈನ್ ಅವರು ಟೋಕಿಯೋ ಒಲಿಂಪಿಕ್ಸ್‌ ಬಾಕ್ಸಿಂಗ್‌ನ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಟರ್ಕಿ ಆಟಗಾರ್ತಿ ವಿರುದ್ಧ ನಡೆದ ಪೈಪೋಟಿಯಲ್ಲಿ ಲವ್ಲಿನಾ 0-5 ಪಾಯಿಂಟುಗಳಲ್ಲಿ ನಿರಾಶೆ ಅನುಭವಿಸಿದ್ದಾರೆ.

indian boxer lovlinas in  tokyo olympic
ಭಾರತದ ಬಾಕ್ಸರ್​​​ ಲವ್ಲಿನಾ ಬೋರ್ಗಹೈನ್ ಅವರಿಗೆ ಕಂಚಿನ ಪದಕ

ಟೋಕಿಯೋ(ಜಪಾನ್): ಒಲಿಂಪಿಕ್ಸ್ ಮಹಿಳಾ ವಿಭಾಗದ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಪಡೆಯಲು ಹೋರಾಡುತ್ತಿದ್ದ ಭಾರತದ ಲವ್ಲಿನಾ ಬೋರ್ಗಹೈನ್ ಅವರಿಗೆ ಕಂಚಿನ ಪದಕ ಒಲಿದಿದೆ. ಟರ್ಕಿ ಸ್ಪರ್ಧಿಯ ವಿರುದ್ಧ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಅವರು ಸೋಲು ಅನುಭವಿಸಿದ್ದಾರೆ.

ಮೋದಿ ಮೆಚ್ಚುಗೆಯ ಟ್ವೀಟ್‌:

  • Well fought @LovlinaBorgohai! Her success in the boxing ring inspires several Indians. Her tenacity and determination are admirable. Congratulations to her on winning the Bronze. Best wishes for her future endeavours. #Tokyo2020

    — Narendra Modi (@narendramodi) August 4, 2021 " class="align-text-top noRightClick twitterSection" data=" ">

ಟರ್ಕಿಯ ಬುಸೆನಾಜ್ ಸುರ್ಮನೆಲಿ ಅವರ ವಿರುದ್ಧ 64-69 ಕೆಜಿ ವಿಭಾಗದಲ್ಲಿ ಸೆಮಿಫೈನಲ್​​ನಲ್ಲಿ ಸ್ಪರ್ಧಿಸಿದ್ದ ಲವ್ಲಿನಾ 0-5 ಅಂಕಗಳಿಂದ ಪರಾಭವಗೊಂಡರು. ಇದರಿಂದ ಕಂಚಿನ ಪದಕಕ್ಕೆ ಅವರು ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕೇಂದ್ರ ಕ್ರೀಡಾ ಸಚಿವರಿಂದ ಪ್ರಶಂಸೆ:

ಈವರೆಗಿನ ಒಲಿಂಪಿಕ್ ಬಾಕ್ಸಿಂಗ್ ಇತಿಹಾಸದಲ್ಲಿ ಮೂರನೇ ಪದಕ ಇದಾಗಿದ್ದು, ಇದಕ್ಕೂ ಮೊದಲು ಮೇರಿ ಕೋಮ್ ಮತ್ತು ವಿಜೇಂದರ್ ಸಿಂಗ್ ಪದಕಗಳನ್ನು ಗೆದ್ದಿದ್ದರು. ಈಗ ಭಾರತದ ಕುಸ್ತಿಪಟುಗಳಾದ ರವಿಕುಮಾರ್ ದಹಿಯಾ ಮತ್ತು ದೀಪಕ್ ಪೂನಿಯಾ ಅವರ ಸೆಮಿಫೈನಲ್ ಸ್ಪರ್ಧೆಗಳು ನಡೆಯಲಿದ್ದು, ಪದಕದ ಮೇಲೆ ಭಾರತೀಯ ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Last Updated : Aug 4, 2021, 11:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.