ETV Bharat / sports

ಸೆಮಿಫೈನಲ್​ನಲ್ಲಿ ಸೋತ ಯುವ ರೆಸ್ಲರ್​ ದೀಪಕ್​, ಮುಂದಿನ ಪಂದ್ಯದಲ್ಲಿ ಕಂಚಿಗಾಗಿ ಪೈಪೋಟಿ

author img

By

Published : Aug 4, 2021, 4:14 PM IST

22 ವರ್ಷದ ಕುಸ್ತಿಪಟು ಸೆಮಿಫೈನಲ್​ ಬೌಟ್​ನಲ್ಲಿ 0-10ರ ಅಂತರದಲ್ಲಿ ಮಾಜಿ ವಿಶ್ವ ಚಾಂಪಿಯನ್​ ಅಮೆರಿಕಾದ ಡೇವಿಡ್​ ಟೇಲರ್​ ವಿರುದ್ಧ ಸೋಲು ಕಂಡರು. ದೀಪಕ್​ಗಿಂತಲೂ ಟೇಲರ್​ ಹೆಚ್ಚು ತೂಕ ಮತ್ತು ಬಲಾಡ್ಯರಾಗಿದ್ದರಿಂದ ಯುವ ರೆಸ್ಲರ್​ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.

ದೀಪಕ್ ಪೂನಿಯಾಗೆ ಸೋಲು
ದೀಪಕ್ ಪೂನಿಯಾಗೆ ಸೋಲು

ಟೋಕಿಯೋ: ಭಾರತದ ಯುವ ರೆಸ್ಲರ್​ ದೀಪಕ್​ ಪೂನಿಯಾ 86 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು, ಚಿನ್ನದ ಕನಸು ಭಗ್ನಗೊಂಡಿದೆ, ಆದರೆ, ಕಂಚಿನ ಪದಕದ ಪಡೆಯುವ ಅವಕಾಶ ಇನ್ನೂ ಉಳಿದಿದೆ.

22 ವರ್ಷದ ಕುಸ್ತಿಪಟು ಸೆಮಿಫೈನಲ್​ ಬೌಟ್​ನಲ್ಲಿ 0-10ರ ಅಂತರದಲ್ಲಿ ಮಾಜಿ ವಿಶ್ವ ಚಾಂಪಿಯನ್​ ಅಮೆರಿಕದ ಡೇವಿಡ್​ ಟೇಲರ್​ ವಿರುದ್ಧ ಸೋಲು ಕಂಡರು. ದೀಪಕ್​ಗಿಂತಲೂ ಟೇಲರ್​ ಹೆಚ್ಚು ತೂಕ ಮತ್ತು ಬಲಾಢ್ಯರಾಗಿದ್ದರಿಂದ ಯುವ ರೆಸ್ಲರ್​ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.

ದೀಪಕ್​ ಕಂಚಿನ ಪದಕಕ್ಕಾಗಿ ಆಡುವ ಅವಕಾಶವನ್ನು ಹೊಂದಿದ್ದಾರೆ. ಟೇಲರ್​ ಈ ಹಿಂದಿನ ಎರಡು ಸುತ್ತುಗಳಲ್ಲಿ ಸೋಲಿಸಿರುವ ಇಬ್ಬರು ಕುಸ್ತಿಪಟುಗಳ ನಡುವಿನ ಹಣಾಹಣಿಯಲ್ಲಿ ಗೆದ್ದು ಬರುವವರ ವಿರುದ್ಧ ದೀಪಕ್​ ಕಂಚಿನ ಪದಕಕ್ಕೆ ಕಾದಾಡಲಿದ್ದಾರೆ.

ಇದಕ್ಕೂ ಮುನ್ನ ನಡೆದ 57 ಕೆಜಿ ವಿಭಾಗದಲ್ಲಿ ರವಿ ಕುಮಾರ್ ದಹಿಯಾ ಕಜಕಸ್ತಾನದ ರೆಸ್ಲರ್​ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಒಲಿಂಪಿಕ್ಸ್​ ಇತಿಹಾಸದಲ್ಲಿ ಈ ಹಿಂದೆ ಸುಶೀಲ್ ಕುಮಾರ್​ ಮಾತ್ರ ಫೈನಲ್ ಪ್ರವೇಶಿಸಿದ್ದರು.

ಇದನ್ನು ಓದಿ: ಫೈನಲ್​ ಪ್ರವೇಶಿಸಿ ಮತ್ತೊಂದು ಪದಕ ಖಚಿತಪಡಿಸಿದ ರವಿ ಕುಮಾರ್ ದಹಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.