ETV Bharat / sports

ಯುಎಸ್ ಓಪನ್: ಅಲೆಕ್ಸಾಂಡರ್ ಜ್ವೆರೆವ್-ಡೊಮೆನಿಕ್ ಥೈಮ್ ಫೈನಲ್​ ಪ್ರವೇಶ

author img

By

Published : Sep 12, 2020, 12:31 PM IST

ಯುಎಸ್ ಓಪನ್​ ಸೆಮಿಫೈನಲ್​ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಡೊಮೆನಿಕ್​ ಥೈಮ್ ಮತ್ತು ಅಲೆಕ್ಸಾಂಡರ್ ಜ್ವೆರೆವ್‌ ಭಾನುವಾರ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.

Zverev reaches US Open final
ಅಲೆಕ್ಸಾಂಡರ್ ಜ್ವೆರೆವ್-ಡೊಮೆನಿಕ್ ಥೈಮ್

ನ್ಯೂಯಾರ್ಕ್: ಯುಎಸ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ 5ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ 3-6, 2-6, 6-3, 6-4, 6-3 ಸೆಟ್​ಗಳಿಂದ ಪ್ಯಾಬ್ಲೊ ಕ್ಯಾರೆನೋ ಬುಸ್ಟಾ ವಿರುದ್ಧ ಜಯ ಗಳಿಸಿ ಫೈನಲ್ ತಲುಪಿದ್ದಾರೆ.

ಯುಎಸ್ ಓಪನ್

ಸುಮಾರು 3 ಗಂಟೆ 23 ನಿಮಿಷ ನಡೆದ ರೋಚಕ ಹಣಾಹಣಿಯಲ್ಲಿ ಜ್ವರೆವ್ ಗೆಲುವಿನ ನಗೆ ಬೀರಿದ್ದಾರೆ. ಮೊದಲ 2 ಸೆಟ್​ಗಳಲ್ಲಿ ಹಿನ್ನಡೆ ಅನುಭವಿಸಿದ ಜ್ವೆರೆವ್ ನಂತರ ಕಂಬ್ಯಾಕ್ ಮಾಡಿದ್ರು. ಮೂರು ಸೆಟ್​​ಗಳಲ್ಲಿ ಪ್ರಾಬಲ್ಯ ಮೆರೆಯುವ ಮೂಲಕ ಗೆಲುವು ಸಾಧಿಸಿದ್ರು.

Zverev reaches US Open final
ಅಲೆಕ್ಸಾಂಡರ್ ಜ್ವೆರೆವ್

ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಆಸ್ಟ್ರೀಯದ ಡೊಮಿನಿಕ್ ಥೈಮ್ ಯುಎಸ್ ಓಪನ್ ಟೂರ್ನಮೆಂಟ್‌ನಲ್ಲಿ ಫೈನಲ್ ತಲುಪಿದ್ದಾರೆ.

Zverev reaches US Open final
ಡೊಮೆನಿಕ್ ಥೈಮ್

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೊಮೆನಿಕ್​ ಥೈಮ್, ಅಲೆಕ್ಸಾಂಡರ್ ಜ್ವೆರೆವ್‌ರನ್ನು ಎದುರಿಸಲಿದ್ದಾರೆ. ಥೈಮ್ ಹಾಗೂ ಜ್ವೆರೆವ್ ಇಬ್ಬರೂ ಚೊಚ್ಚಲ ಗ್ರ್ಯಾಂಡ್​​​‌ಸ್ಲಾಮ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.