ETV Bharat / sports

6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೊಸಬರ ಮುಡಿಗೇರಲಿದೆ ಯುಎಸ್​ ಓಪನ್​ ಕಿರೀಟ !

author img

By

Published : Sep 13, 2020, 8:17 PM IST

2020ರ ಯುಎಸ್​ ಓಪನ್​ನಲ್ಲಿ ರೋಜರ್ ಫೆಡೆರರ್​ ಹಾಗೂ ರಾಫೆಲ್ ನಡಾಲ್​ ಹಿಂದೆ ಸರಿದಿದ್ದರು. ಜೋಕೊವಿಕ್​ ಕ್ವಾರ್ಟರ್​ ಫೈನಲ್​ ವೇಳೆ ಅನರ್ಹಗೊಂಡಿದ್ದರು. ಈ ಮೂವರ ಅನುಪಸ್ಥಿತಿಯಲ್ಲಿ 2014ರ ಬಳಿಕ ಹೊಸ ಟೆನ್ನಿಸ್​ ಪ್ಲೇಯರ್​ ಗ್ರ್ಯಾಂಡ್​ಸ್ಲಾಮ್​ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ..

ಯುಎಸ್​ ಓಪನ್​ ಫೈನಲ್​
ಯುಎಸ್​ ಓಪನ್​ ಫೈನಲ್​

ನ್ಯೂಯಾರ್ಕ್​ : ಆಸ್ಟ್ರೀಯಾದ ಡೊಮೆನಿಕ್ ಥೀಮ್​ ಮತ್ತು ಜರ್ಮನಿಯ ಅಲೆಕ್ಸಾಂಡರ್​ ಜ್ವರೆವ್​ ಭಾನುವಾರ ಯುಎಸ್​ ಓಪನ್​ ಫೈನಲ್​ನಲ್ಲಿ ಚಾಂಪಿಯನ್​ ಪಟ್ಟಕ್ಕೆ ಕಾದಾಡಲಿದ್ದಾರೆ. ಈ ಇಬ್ಬರಲ್ಲಿ ಯಾರೇ ಗೆದ್ದರು 6 ವರ್ಷಗಳ ಬಳಿಕ ಯುಎಸ್​ ಓಪನ್​ ಗೆದ್ದ ಹೊಸ ಟೆನ್ನಿಸ್​ ಪ್ಲೇಯರ್​ ಎನಿಸಿಕೊಳ್ಳಲಿದ್ದಾರೆ.

ಟೂರ್ನಿಯಲ್ಲಿ 2ನೇ ಶ್ರೇಯಾಂಕ ಪಡೆದಿರುವ ಥೀಮ್​ ಕಳೆದ ಮೂರು ಗ್ರ್ಯಾಂಡ್​ಸ್ಲಾಮ್​ ಫೈನಲ್​ನಲ್ಲಿ ಸೋಲು ಕಂಡಿದ್ದಾರೆ. 2 ಬಾರಿ ನಡಾಲ್ ವಿರುದ್ಧದ ಫ್ರೆಂಚ್​ ಓಪನ್​ನಲ್ಲಿ, ಒಮ್ಮೆ ಜೋಕೊವಿಕ್​ ವಿರುದ್ಧ ಆಸ್ಟ್ರೇಲಿಯಾ ಓಪನ್​ನಲ್ಲಿ ಸೋಲು ಕಂಡಿದ್ದಾರೆ.

2020ರ ಯುಎಸ್​ ಓಪನ್​ನಲ್ಲಿ ರೋಜರ್ ಫೆಡೆರರ್​ ಹಾಗೂ ರಾಫೆಲ್ ನಡಾಲ್​ ಹಿಂದೆ ಸರಿದಿದ್ದರು. ಜೋಕೊವಿಕ್​ ಕ್ವಾರ್ಟರ್​ ಫೈನಲ್​ ವೇಳೆ ಅನರ್ಹಗೊಂಡಿದ್ದರು. ಈ ಮೂವರ ಅನುಪಸ್ಥಿತಿಯಲ್ಲಿ 2014ರ ಬಳಿಕ ಹೊಸ ಟೆನ್ನಿಸ್​ ಪ್ಲೇಯರ್​ ಗ್ರ್ಯಾಂಡ್​ಸ್ಲಾಮ್​ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.

ಈ ಮೂವರನ್ನು ಹೊರೆತುಪಡಿಸಿ 2014ರಲ್ಲಿ ಮರಿನ್ ಸಿಲಿಕ್​ ಜಪಾನ್ ಕೀ ನಿಶಿಕೋರಿಯನ್ನು ಮಣಿಸಿ ಯುಎಸ್ ಓಪನ್​ ಗೆದ್ದಿದ್ದರು. ಈ ಇಬ್ಬರು ಆಟಗಾರರಲ್ಲಿ ಯಾರೇ ಗೆದ್ದರೂ ಇದು ಅವರಿಗೆ ಚೊಚ್ಚಲ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.