ಯುಎಸ್​ ಓಪನ್ ಸೇರಿದಂತೆ 2021ರ ಎಲ್ಲಾ ಸ್ಪರ್ಧೆಯಿಂದಲೂ ರಾಫೆಲ್ ನಡಾಲ್ ಔಟ್​

author img

By

Published : Aug 21, 2021, 8:05 PM IST

Nadal out of US Open

ಆ ಕ್ಷಣದಲ್ಲಿ ವೈದ್ಯರು ನನ್ನ ಭವಿಷ್ಯದ ವೃತ್ತಿಜೀವನದ ಬಗ್ಗೆ ಋಣಾತ್ಮಕವಾಗಿ ತಿಳಿಸಿದ್ದರು. ಆದರೆ, ನಾನು ಕನಸು ಕಾಣಲು ಸಾಧ್ಯವಾಗದ ವೃತ್ತಿಯನ್ನು ಹೊಂದಲು ಸಾಧ್ಯವಾಯಿತು. ಹಾಗಾಗಿ, ಮತ್ತೆ ಚೇತರಿಸಿಕೊಳ್ಳುವ ವಿಶ್ವಾಸ ನನಗಿದೆ..

ಮ್ಯಾಡ್ರಿಡ್ ​: ಲೆಜೆಂಡರಿ ಟೆನಿಸ್ ಪ್ಲೇಯರ್​ ರಾಫೆಲ್ ನಡಾಲ್ ಯುಎಸ್​ ಓಪನ್​ನಿಂದ ಹೊರ ಬಂದಿರುವುದಾಗಿ ಶುಕ್ರವಾರ ಘೋಷಣೆ ಮಾಡಿದ್ದಾರೆ. ಜೊತೆಗೆ ಪಾದದ ಗಾಯದಿಂದ ಬಳಲುತ್ತಿರುವುದರಿಂದ ಈ ವರ್ಷದ ಯಾವುದೇ ಟೂರ್ನಿಗಳಲ್ಲಿ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಫ್ರೆಂಚ್​ ಓಪನ್​ ಸೆಮಿಫೈನಲ್​ನಲ್ಲಿ ನೊವಾಕ್ ಜೋಕೊವಿಕ್​ ವಿರುದ್ಧ ಸೋಲು ಕಂಡ ಬಳಿಕ ವಿಂಬಲ್ಡನ್ ಮತ್ತು ಒಲಿಂಪಿಕ್ಸ್​ನಲ್ಲಿ ಆಡಿರಲಿಲ್ಲ​. ಇದೀಗ ಗಾಯದ ಕಾರಣದಿಂದ ಮತ್ತೊಂದು ಪ್ರಮುಖ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಇದನ್ನು ಘೋಷಿಸುತ್ತಿರುವುದಕ್ಕೆ ದಯವಿಟ್ಟು ಕ್ಷಮೆಯಿರಲಿ, 2021ರಲ್ಲಿ ನಾನು ಟೆನಿಸ್​ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ನಿಮಗೆ ಗೊತ್ತಿದೆ. ನಾನು ಕಳೆದ ವರ್ಷದಿಂದಲೂ ನನ್ನ ಪಾದದ ನೋವಿನಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ ಮತ್ತು ಕೆಲವು ಪ್ರಮುಖ ಟೂರ್ನಮೆಂಟ್​ಗಳನ್ನು ಕಳೆದುಕೊಂಡಿದ್ದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ ಬಹುಕಾಲದಿಂದಲೂ ಪಾದದ ನೋವು ತುಂಬಾ ಹೆಚ್ಚಾಗಿದೆ ಎಂದು 35 ವರ್ಷದ ನಡಾಲ್ ಹೇಳಿದ್ದಾರೆ. ಆದರೆ, ನನಗೆ ಗಾಯ ಹೊಸದೇನಲ್ಲ. 2005ರಿಂದ ನಾನು ಅನುಭವಿಸುತ್ತಿರುವ ಅದೇ ಗಾಯವಾಗಿದೆ.

ಆ ಕ್ಷಣದಲ್ಲಿ ವೈದ್ಯರು ನನ್ನ ಭವಿಷ್ಯದ ವೃತ್ತಿಜೀವನದ ಬಗ್ಗೆ ಋಣಾತ್ಮಕವಾಗಿ ತಿಳಿಸಿದ್ದರು. ಆದರೆ, ನಾನು ಕನಸು ಕಾಣಲು ಸಾಧ್ಯವಾಗದ ವೃತ್ತಿಯನ್ನು ಹೊಂದಲು ಸಾಧ್ಯವಾಯಿತು. ಹಾಗಾಗಿ, ಮತ್ತೆ ಚೇತರಿಸಿಕೊಳ್ಳುವ ವಿಶ್ವಾಸ ನನಗಿದೆ ಎಂದು ನಡಾಲ್​ ತಿಳಿಸಿದ್ದಾರೆ.

ಇದನ್ನು ಓದಿ: ಆರ್​ಸಿಬಿಗೆ ಆನೆಬಲ.. ಹಸರಂಗ ಸೇರಿದಂತೆ ಬೆಂಗಳೂರು ತಂಡಕ್ಕೆ ಮೂವರ ಸೇರ್ಪಡೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.