ETV Bharat / sports

ಎಟಿಪಿ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

author img

By

Published : Nov 16, 2020, 1:07 PM IST

Updated : Nov 16, 2020, 2:50 PM IST

ಎಟಿಪಿ ಟೆನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ನಡಾಲ್ ನಿರಾಯಾಸವಾಗಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದ್ದಾರೆ. ನಾಳೆ ನಡೆಯಲಿರುವ ಫೈನಲ್​ನಲ್ಲಿ ಅಮೆರಿಕ ಓಪನ್ ಟೆನಿಸ್ ವಿನ್ನರ್ ಡೊನಮಿಕ್ ಥೀಮ್​ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

ರಾಫೆಲ್ ನಡಾಲ್
ರಾಫೆಲ್ ನಡಾಲ್

ಲಂಡನ್: ಎಟಿಪಿ ಟೆನಿಸ್ ಚಾಂಪಿಯನ್​ಶಿಪ್​​​​ನ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ರಾಫೆಲ್ ನಡಾಲ್ ಸುಲಭವಾಗಿ ಜಯಗಳಿಸಿ ಫೈನಲ್ ಪ್ರವೇಶಿಸಿದ್ದಾರೆ.

ರಷ್ಯಾದ ಆ್ಯಂಡ್ರೆ ರುಬ್ಲೆವ್ ವಿರುದ್ಧ 6-3, 6-4 ನೇರ ಸೆಟ್​ಗಳ ಮೂಲಕ 18ನೇ ನಿಮಿಷದಲ್ಲಿಯೇ ಜಯ ದಾಖಲಿಸಿದ್ದಾರೆ. ಈ ಮೂಲಕ ಎಟಿಪಿ ಟೂರ್ನಿಯಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಗೆಲುವಿನ ಬಳಿಕ ಮಾತನಾಡಿರುವ ನಡಾಲ್ ‘ಉತ್ತಮ ಆರಂಭ ಸಿಗುವುದು ಒಳ್ಳೆಯದೆ ಹಾಗೂ ನೇರ ಸೆಟ್​ಗಳಿಂದ ಜಯ ದಾಖಲಿಸುವುದು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ನನ್ನ ಸರ್ವ್​ಗಳ ಮೂಲಕ ಉತ್ತಮ ಪ್ರದರ್ಶನ ಬಂದಿದೆ. ನಾನೇನು ಅಷ್ಟೊಂದು ಕಷ್ಟ ಪಡಲಿಲ್ಲ. ಇದು ನನ್ನ ವಾಪಸಾತಿಗೆ ಹೆಚ್ಚು ಸಹಕಾರಿಯಾಗಲಿದೆ’ ಎಂದಿದ್ದಾರೆ.

ಈ ಬಾರಿಯ ಮೊದಲ ಗ್ರೂಪ್ ಹಂತದ ಪಂದ್ಯವು ಕಳೆದ ಬಾರಿಯ ರನ್ನರ್ ಅಪ್ ಆಗಿದ್ದ ಡೊನಮಿಕ್​​ ಥೀಮ್​ ಮತ್ತು ವಿಜೇತ ಸ್ಟೆಫಾನೊಸ್​​ ಸಿಟ್ಸಿಪಾಸ್ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಥೀಮ್​​​​ 7-6, 4-6, ಮತ್ತು 6-3ರ ಸೆಟ್​​ನಲ್ಲಿ ಗ್ರೀಕ್ ಆಟಗಾರನ ಸೋಲಿಸಿ ಕಳೆದ ಬಾರಿಯ ಸೋಲಿನ ಪ್ರತೀಕಾರ ತೀರಿಸಿಕೊಂಡರು.

ಈ ಹಿನ್ನೆಲೆ ನಡಾಲ್​ ನಾಳೆ ನಡೆಯಲಿರುವ ಎರಡನೇ ಗುಂಪಿನ ಫೈನಲ್​​ ಪಂದ್ಯದಲ್ಲಿ ಡೊನಮಿಕ್ ಥೀಮ್ ಅವರನ್ನು ಎದುರಿಸಲಿದ್ದಾರೆ.

Last Updated :Nov 16, 2020, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.