ETV Bharat / sports

ನಡಾಲ್-ಜೋಕೊವಿಕ್​ರನ್ನು ಮಣಿಸಿ ಫೈನಲ್ ಪ್ರವೇಶಿಸಿದ ಮೆಡ್ವೆಡೆವ್​​-ಥೀಮ್

author img

By

Published : Nov 22, 2020, 3:55 PM IST

Updated : Feb 23, 2021, 12:34 PM IST

ಮೂರನೇ ಸೆಟ್​ನ ಟೈಬ್ರೇಕರ್​ನಲ್ಲಿ 0-4ರಲ್ಲಿ ಹಿನ್ನಡೆಯಲ್ಲಿದ್ದರು, ಒತ್ತಡವನ್ನು ಮೀರಿ ಕೊನೆಗೂ ಜೋಕೊವಿಕ್​ರನ್ನು ಮಣಿಸಿದರು. ಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್​​ ಮತ್ತು ಥೀಮ್​ ಎದುರಾಗಲಿದ್ದಾರೆ. ಈ ಇಬ್ಬರು ಆಟಗಾರರು 5ನೇ ಬಾರಿಗೆ ಮುಖಾಮುಖಿಯಾಗಲಿದ್ದಾರೆ..

ಎಟಿಪಿ ಫೈನಲ್ಸ್​
ಎಟಿಪಿ ಫೈನಲ್ಸ್​

ಲಂಡನ್ ​: ವಿಶ್ವದ ನಂಬರ್​ 1 ಶ್ರೇಯಾಂಕದ ನೊವಾಕ್​ ಜೋಕೋವಿಕ್‌ರನ್ನು 3ನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಮತ್ತು 2ನೇ ಶ್ರೇಯಾಂಕದ ರಾಫೆಲ್ ನಡಾಲ್​ರನ್ನು 4ನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೆವ್​ ಅಚ್ಚರಿಯ ಗೆಲುವು ಸಾಧಿಸಿ ಎಟಿಪಿ ಫೈನಲ್ ಪ್ರವೇಶಿಸಿದ್ದಾರೆ.

ನಡಾಲ್​ ಮೊದಲ ಸೆಟ್​ ವಶಪಡಿಸಿಕೊಂಡಿದ್ದ ಸಂದರ್ಭದಲ್ಲಿ ಸತತ 71 ಪಂದ್ಯಗಳ ಜಯದ ನಿರೀಕ್ಷೆಯಲ್ಲಿದ್ದರು. ಶನಿವಾರ ನಡೆದ ಪಂದ್ಯದಲ್ಲಿ ನಡಾಲ್​ ಮೊದಲ ಸೆಟ್​ಅನ್ನು 6-3ರಲ್ಲಿ ಗೆದ್ದು, 2ನೇ ಸೆಟ್​ನಲ್ಲಿ 5-4ರಲ್ಲಿ ಮುನ್ನಡೆ ಸಾಧಿಸಿ ಫೈನಲ್​ ದಾರಿಯಲ್ಲಿದ್ದರು. ಆದರೆ, ಮಡ್ವೆಡೆವ್​ ಅಚ್ಚರಿಯ ರೀತಿ ತಿರುಗಿಬಿದ್ದು 3 ಸರ್ವ್​ಗಳನ್ನು ಬ್ರೇಕ್​ ಮಾಡಿ 7-6(4)ರಲ್ಲಿ ಸೆಟ್​ ಗೆದ್ದು ಸಮಬಲ ಸಾಧಿಸಿದರು.

ನಂತರ ಕೊನೆಯ ಸೆಟ್​ನಲ್ಲೂ ಪ್ರಾಬಲ್ಯ ಸಾಧಿಸಿ 6-3ರಲ್ಲಿ ಗೆಲ್ಲುವ ಮೂಲಕ ಫೈನಲ್​ ಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ಡೊಮಿನಿಕ್ ಥೀಮ್ ರೋಚಕ ಕದನದಲ್ಲಿ ಅಗ್ರ ಶ್ರೇಯಾಂಕದ ನೊವಾಕ್​ ಜೋಕೊವಿಕ್​ರನ್ನು 7-5,7-6(10)7-6 ಸೆಟ್​ಗಳ ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು. ಮೂರನೇ ಸೆಟ್​ನ ಟೈಬ್ರೇಕರ್​ನಲ್ಲಿ 0-4ರಲ್ಲಿ ಹಿನ್ನಡೆಯಲ್ಲಿದ್ದ ಥೀಮ್​, ಒತ್ತಡವನ್ನು ಮೀರಿ ಕೊನೆಗೂ ಜೋಕೊವಿಕ್​ರನ್ನು ಮಣಿಸಿದರು.

ಇಂದು 11:30ಕ್ಕೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್​ ಮತ್ತು ಥೀಮ್​ ಎದುರಾಗಲಿದ್ದಾರೆ. ಈ ಇಬ್ಬರು ಆಟಗಾರರು 5ನೇ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಥೀಮ್ ಯುಎಸ್​ ಸೆಮಿಫೈನಲ್​ ಸೇರಿದಂತೆ ಮೆಡ್ವೆಡೆವ್​ ವಿರುದ್ಧ 3-1ರಲ್ಲಿ ಮುನ್ನಡೆ ಸಾಧಿಸಿದ್ದಾರೆ.

Last Updated :Feb 23, 2021, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.