ಪ್ಯಾರಿಸ್: ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 5-7, 6-4, 6-1 ಸೆಟ್‌ಗಳಿಂದ ಸೋಲಿಸಿದ ಮೂರನೇ ಶ್ರೇಯಾಂಕಿತ ರಷ್ಯನ್ ಆಟಗಾರ ಡೆನಿಯಲ್ ಮೆಡ್ವೆಡೆವ್ ಮೊದಲ ಬಾರಿಗೆ ಪ್ಯಾರಿಸ್ ಮಾಸ್ಟರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಮಡ್ವೆಡೆವ್ ತಮ್ಮ ವೃತ್ತಿಜೀವನದ ಎಂಟನೇ ಮತ್ತು ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಮೂರನೇ ಪ್ರಶಸ್ತಿಯನ್ನು ಗೆದ್ದುಕೊಂಡರು. ಸಲೆಕ್ಸಾಂಡರ್ ಜ್ವರೆವ್ ವಿರುದ್ಧ ಗೆಲುವು ಸಾಧಿಸುವುದು ಸುಲಭದ ಮಾತಾಗಿರಲಿಲ್ಲ.
ಪಂದ್ಯ ಆರಂಭವಾಗುತ್ತಿದ್ದಂತೆ ಮೇಲುಗೈ ಸಾಧಿಸಿದ ಜ್ವೆರೆವ್ ಮೊದಲ ಸೆಟ್ನಲ್ಲಿ ಜಯ ಗಳಿಸಿದ್ರು. ನಂತರದ 2 ಸೆಟ್ಗಳಲ್ಲಿ ಕಂಬ್ಯಾಕ್ ಮಾಡಿದ ಮಡ್ವೆಡೆವ್ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ಗೆ ಸೋಲುಣಿಸಿ ಪ್ಯಾರಿಸ್ ಮಾಸ್ಟರ್ಸ್ಗೆ ಮುತ್ತಿಕ್ಕಿದರು.
ಗೆಲುವಿನ ಬಳಿಕ ಮಾತನಾಡಿದ ಅವರು, ಈ ಪಂದ್ಯಾವಳಿಗೂ ಮೊದಲು ನಾನು ಪ್ಯಾರಿಸ್ ಅನ್ನು ಪ್ರೀತಿಸುತ್ತಿದ್ದೆ, ಈಗ ಇನ್ನಷ್ಟು ಹೆಚ್ಚು ಪ್ರೀತಿಸಬಹುದು ಎಂದು ಹೇಳಿದ್ದಾರೆ.