ETV Bharat / sports

Watch: ಡೆವೊನ್​ ಕಾನ್ವೆ 'ಕ್ಯಾಚ್​ ಆಫ್​ ದಿ ಟೂರ್ನಮೆಂಟ್'

author img

By

Published : Oct 27, 2021, 8:50 AM IST

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್​ನ ಡೆವೊನ್​ ಕಾನ್ವೆ ಅದ್ಭುತ ಕ್ಯಾಚ್​ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

WATCH: Devon Conway takes a screamer to get rid of Mohammad Hafeez
ಡೈವ್​ ಮೂಲಕ ಡೆವೊನ್​ ಕಾನ್ವೆ ಅದ್ಭುತ ಕ್ಯಾಚ್

ಶಾರ್ಜಾ: ಟಿ20 ವಿಶ್ವಕಪ್​ ಟೂರ್ನಿಯ 19ನೇ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ದ ಪಾಕಿಸ್ತಾನವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕಿವೀಸ್​ ಸೋಲುಂಡರೂ ಕೂಡ, ತಂಡದ ಆಟಗಾರ ಡೆವೊನ್​ ಕಾನ್ವೆ ಅದ್ಭುತ ಕ್ಯಾಚ್​ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದರು.

ನ್ಯೂಜಿಲೆಂಡ್​ ತಂಡವು ಮೊದಲಿನಿಂದಲೂ ಕೂಡ ಅದ್ಭುತ ಕ್ಷೇತ್ರರಕ್ಷಣೆಗೆ ಹೆಸರುವಾಸಿಯಾಗಿದೆ. ತಂಡದಲ್ಲಿ ಪ್ರತಿಯೊಬ್ಬರೂ ಕೂಡ ಫೀಲ್ಡಿಂಗ್​​ನಲ್ಲಿ ಚಾತುರ್ಯತೆ ಹೊಂದಿದ್ದು, ಎದುರಾಳಿಗಳ ರನ್​ ವೇಗಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಅಂತೆಯೇ ಇತ್ತೀಚೆಗೆ ಸ್ಥಿರ ಪ್ರದರ್ಶನದಿಂದ ಕ್ರಿಕೆಟ್‌ಪ್ರಿಯರ ಗಮನ ಸೆಳೆದಿರುವ ನ್ಯೂಜಿಲೆಂಡ್​ನ ಡೆವೊನ್​ ಕಾನ್ವೆ ನಿನ್ನೆಯ ಪಂದ್ಯದಲ್ಲಿ ಚತುರ ಕ್ಷೇತ್ರರಕ್ಷಣೆಯಿಂದ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದರು.

ಮಿಚೆಲ್​ ಸ್ಯಾಂಟ್ನರ್​ ಎಸೆದ 16ನೇ ಓವರ್​ನ ಕೊನೆಯ ಎಸೆತವನ್ನು ಮೊಹಮದ್​ ಹಫೀಜ್ ಮುಂದೆ​ ಬಂದು ಲಾಂಗ್​ ಆಫ್​ನತ್ತ ಬಲವಾಗಿ ಬಾರಿಸಿದ್ದರು. ಲಾಂಗ್ ಆಫ್​​ನಲ್ಲಿದ್ದ ಕಾನ್ವೆ, ಡೀಪ್​ ಕವರ್​ನತ್ತ ಓಡಿಬಂದು ಡೈವ್​ ಮೂಲಕ ಕ್ಯಾಚ್​​ ಪಡೆಯುವಲ್ಲಿ ಯಶಸ್ವಿಯಾದರು. ಕಾನ್ವೆ ಕ್ಷೇತ್ರ ರಕ್ಷಣೆ ಶೈಲಿಗೆ ಬೆರಗಾದ ವೀಕ್ಷಕ ವಿವರಣೆಕಾರರು, 'ಕ್ಯಾಚ್​ ಆಫ್​ ದಿ ಟೂರ್ನಮೆಂಟ್' ಎಂದು ಬಣ್ಣಿಸಿದರು.

ಅಲ್ಲದೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಟಿ-20 ವಿಶ್ವಕಪ್​ನ ಅತ್ಯುತ್ತಮ ಕ್ಯಾಚ್ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಂಟ್ವಾಳದಲ್ಲಿ ಬಿಜೆಪಿ ಮುಖಂಡನ ಕೊಲೆ ಯತ್ನ: 'ಹಲ್ಲೆ ತಡೆಯಲು ಬಂದವರಿಗೆ ಜೀವ ಬೆದರಿಕೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.