ETV Bharat / sports

PAK vs AUS : ಆಸೀಸ್​ ವಿರುದ್ಧದ ಸೆಮೀಸ್​ಗೂ ಮುನ್ನ ಎರಡು ದಿನ ICUನಲ್ಲಿ ಚಿಕಿತ್ಸೆ ಪಡೆದಿದ್ದ ರಿಜ್ವಾನ್!

author img

By

Published : Nov 12, 2021, 3:25 PM IST

ಎದೆಯಲ್ಲಿ ಸೋಂಕು ಕಾಣಿಸಿದ್ದರಿಂದ ನವೆಂಬರ್​​ 9ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಎರಡು ದಿನಗಳ ಕಾಲ ಐಸಿಯು(ICU)ನಲ್ಲಿ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದರು. ನಿನ್ನೆಯ ಪಂದ್ಯದಲ್ಲಿ ಕ್ಯಾಪ್ಟನ್​ ಬಾಬರ್ ಆಜಂ ಜೊತೆ ಕಣಕ್ಕಿಳಿದಿದ್ದ ರಿಜ್ವಾನ್​​ 52 ಎಸೆತಗಳಲ್ಲಿ 4 ಸಿಕ್ಸರ್​​​ ಮೂರು ಬೌಂಡರಿ ಸೇರಿದಂತೆ 67ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದರು..

Mohammad rizwan
Mohammad rizwan

ದುಬೈ : ಐಸಿಸಿ ಟಿ-20 ವಿಶ್ವಕಪ್(ICC T20 World Cup)ನ ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 5 ವಿಕೆಟ್​ಗಳ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

ಟೂರ್ನಿ ಉದ್ದಕ್ಕೂ ಅಭೂತ ಪೂರ್ವ ಪ್ರದರ್ಶನ ನೀಡಿದ್ದ ಪಾಕ್​ನ ಆರಂಭಿಕ ಆಟಗಾರ ಮೊಹಮ್ಮದ್​ ರಿಜ್ವಾನ್(Mohammad rizwan)​​ ಸೆಮಿಫೈನಲ್​ ಪಂದ್ಯಕ್ಕೂ ಮುಂಚಿತವಾಗಿ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ವಿಷಯ ಬಹಿರಂಗಗೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ತಂಡದ ವೈದ್ಯ ನಜೀಬ್​ ಸೊಮ್ರೂ ಈ ವಿಷಯ ಬಹಿರಂಗಪಡಿಸಿದ್ದಾರೆ.

ಎದೆಯ ಸೋಂಕಿನಿಂದಾಗಿ ತೊಂದರೆಗೊಳಗಾಗಿದ್ದ ಮೊಹಮ್ಮದ್ ರಿಜ್ವಾನ್ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದಿದ್ದಾರೆ. ಜೊತೆಗೆ ಅವರು ಸೆಮಿಫೈನಲ್​ನಲ್ಲಿ ಆಡುವ ಇರಾದೆ ವ್ಯಕ್ತಪಡಿಸಿದ್ದರಿಂದ ಅವಕಾಶ ನೀಡಲಾಗಿತ್ತು ಎಂದಿದ್ದಾರೆ.

ಎದೆಯಲ್ಲಿ ಸೋಂಕು ಕಾಣಿಸಿದ್ದರಿಂದ ನವೆಂಬರ್​​ 9ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಎರಡು ದಿನಗಳ ಕಾಲ ಐಸಿಯು(ICU)ನಲ್ಲಿ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದರು.

ನಿನ್ನೆಯ ಪಂದ್ಯದಲ್ಲಿ ಕ್ಯಾಪ್ಟನ್​ ಬಾಬರ್ ಆಜಂ ಜೊತೆ ಕಣಕ್ಕಿಳಿದಿದ್ದ ರಿಜ್ವಾನ್​​ 52 ಎಸೆತಗಳಲ್ಲಿ 4 ಸಿಕ್ಸರ್​​​ ಮೂರು ಬೌಂಡರಿ ಸೇರಿದಂತೆ 67ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದರು. ಪಾಕಿಸ್ತಾನ ಬೃಹತ್​ ರನ್​ ಹೊರತಾಗಿ ಕೂಡ ಸೋಲು ಕಂಡಿತು.

ಇದನ್ನೂ ಓದಿರಿ: IND vs NZ: ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟ; ಅಜಿಂಕ್ಯ ರಹಾನೆ ನಾಯಕ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್​​ ಶೋಯೆಬ್​ ಅಖ್ತರ್(Shoaib Akhtar) ಕೂಡ ಟ್ವೀಟ್ ಮಾಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದು, ದೇಶಕ್ಕಾಗಿ ಆಡಿರುವ ಈ ವ್ಯಕ್ತಿಯ ಕೊಡುಗೆ ನೀವು ಊಹಿಸಲು ಸಾಧ್ಯವೇ? ಎಂದು ಬರೆದುಕೊಂಡಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಪಾಕ್​ ವಿರುದ್ಧ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ವಿರುದ್ಧ ಗೆದ್ದಿರುವ ನ್ಯೂಜಿಲ್ಯಾಂಡ್​ ಫೈನಲ್​​ನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.