ETV Bharat / sports

ICC T20 ವಿಶ್ವಕಪ್.. ಆಂಗ್ಲರ ದಾಳಿಗೆ ಬಾಂಗ್ಲಾ ತತ್ತರ.. ಇಂಗ್ಲೆಂಡ್​ಗೆ 125 ರನ್​ಗಳ ಸಾಧಾರಣ ಗುರಿ..

author img

By

Published : Oct 27, 2021, 5:33 PM IST

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾ ತಂಡ ನಿರೀಕ್ಷಿತ ಪ್ರದರ್ಶನ ತೋರದೆ ಕೇವಲ 124 ರನ್ ಗಳಿಸಿದೆ. ಇಂಗ್ಲೆಂಡ್ ಪರವಾಗಿ ಟೈಮಲ್ ಮಿಲ್ಸ್​ 3 ವಿಕೆಟ್ ಪಡೆದು ಮಿಂಚಿದ್ದು, ಬಾಂಗ್ಲಾ ಆಟಗಾರರನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ..

england-restricted-bangla-for-124-runs
ICC T20 ವಿಶ್ವಕಪ್: ಆಂಗ್ಲರ ದಾಳಿಗೆ ಬಾಂಗ್ಲಾ ತತ್ತರ

ದುಬೈ : ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​​-12 ಗ್ರೂಪ್​ 1ರ ಇಂಗ್ಲೆಂಡ್ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ಬಾಂಗ್ಲಾ ಪಡೆ ಮೊದಲ ಬ್ಯಾಟಿಂಗ್ ನಡೆಸಿ ಆಂಗ್ಲರಿಗೆ ಸಾಧಾರಣ ಮೊತ್ತದ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ನಿಗದಿತ 20 ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 124 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ಲಿಟನ್ ದಾಸ್ 9 (8), ಮೊಹಮ್ಮದ್ ನಯೀಮ್ 5 (7) ರನ್​ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿದರು.

ನಂತರ ಕ್ರೀಸ್​​ಗಿಳಿದ ಆಟಗಾರರು ರನ್ ಕಲೆ ಹಾಕಲು ಪರದಾಡಿದರು. ಮುಸ್ತಫಿಕುರ್ ರಹಿಮ್ 30 ಬಾಲ್​​ನಲ್ಲಿ 29 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರ ಸಹ ಕ್ರೀಸ್​ನಲ್ಲಿ ರನ್​ಗಳಿಸಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು.

ಶಕಿಬ್ ಅಲ್ ಹಸನ್ 4(7), ಮಹಮದುಲ್ಲಾ 19 (24), ಆಸಿಫ್ ಹುಸೈನ್ 5 (6), ಮೆಹದಿ ಹಸನ್ 11 (10), ನೂರುಲ್ ಹಸನ್ 16 (18) ನಸೂಮ್ ಅಹಮ್ಮದ್ 19 (9) ಔಟಾಗದೆ ತಂಡ 124 ರನ್ ಗಳಿಸುವಲ್ಲಿ ನೆರವಾದರು. ಇಂಗ್ಲೆಂಡ್ ಪರವಾಗಿ ಟೈಮಲ್ ಮಿಲ್ಸ್​ 3, ಮೋಯಿನ್ ಅಲಿ, ಲಿವಿಂಗ್​ಸ್ಟೋನ್ ತಲಾ 2 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.