ETV Bharat / sports

ಅಂಪೈರ್‌ ಕುಳಿತಿದ್ದ ಕುರ್ಚಿಗೆ ರಾಕೆಟ್‌ನಿಂದ ಹೊಡೆತ ; ವಿಶ್ವದ ನಂ.3 ಟೆನಿಸಿಗ ಜ್ವೆರೆವ್‌ಗೆ $40 ಸಾವಿರ ದಂಡ

author img

By

Published : Feb 25, 2022, 6:05 PM IST

ಸೋತ ಹತಾಶೆಯಲ್ಲಿ ಅಂಪೈರ್‌ ಕುಳಿತಿದ್ದ ಕುರ್ಚಿಗೆ ರಾಕೆಟ್‌ನಿಂದ ಹೊಡೆದು ಕ್ರೀಡಾ ನಿಮಯಗಳನ್ನು ಉಲ್ಲಂಘಿಸಿದ್ದ ವಿಶ್ವದ ನಂ.3 ಟೆನಿಸಿಗ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ಗೆ 40 ಸಾವಿರ ಡಾಲರ್‌ ದಂಡ ವಿಧಿಸಲಾಗಿದ್ದು, ಮೆಕ್ಸಿಕನ್ ಓಪನ್‌ನಿಂದ ಬಂದಿದ್ದ 30 ಸಾವಿರ ಡಾಲರ್‌ಗಿಂತ ಹೆಚ್ಚು ಮೊತ್ತದ ಬಹುಮಾನದ ಹಣ, ಎಲ್ಲಾ ಶ್ರೇಯಾಂಕದ ಅಂಕ ಕಡಿತ ಮಾಡಲಾಗಿದೆ..

Zverev fined $40K, loses prize money, points for outburst
ಅಂಪೈರ್‌ ಕುಳಿತಿದ್ದ ಕುರ್ಚಿಗೆ ರಾಕೆಟ್‌ನಿಂದ ಹೊಡೆತ; ವಿಶ್ವದ ನಂ.3 ಟೆನಿಸಿಗ ಜ್ವೆರೆವ್‌ಗೆ $40 ಸಾವಿರ ದಂಡ

ಅಕಾಪುಲ್ಕೊ(ಮೆಕ್ಸಿಕೋ): ಮೆಕ್ಸಿಕನ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೋತ ಸಿಟ್ಟಿನಲ್ಲಿ ಅಂಪೈರ್‌ ಕುಳಿತಿದ್ದ ಕುರ್ಚಿಗೆ ರಾಕೆಟ್‌ನಿಂದ ಸತತವಾಗಿ ಬಡಿದಿದ್ದ ವಿಶ್ವದ ನಂ.3 ಟೆನಿಸ್‌ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ಗೆ 40 ಸಾವಿರ ಡಾಲರ್‌ ದಂಡ ವಿಧಿಸಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಅಲೆಕ್ಸಾಂಡರ್ ಜ್ವೆರೆವ್‌, ಡಬಲ್ಸ್‌ನಲ್ಲಿ ಸೋತ ನಂತರ ಚೇರ್ ಅಂಪೈರ್‌ನ ಸ್ಟ್ಯಾಂಡ್‌ಗೆ ಹೊಡೆದ ನಂತರ ಮೆಕ್ಸಿಕನ್ ಓಪನ್‌ನಿಂದ ಬಂದಿದ್ದ 30 ಸಾವಿರ ಡಾಲರ್‌ಗಿಂತ ಹೆಚ್ಚು ಮೊತ್ತದ ಬಹುಮಾನದ ಹಣ ಹಾಗೂ ಎಲ್ಲಾ ಶ್ರೇಯಾಂಕದ ಅಂಕಗಳನ್ನು ಕಳೆದುಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಮತ್ತಷ್ಟು ಪರಿಶೀಲನೆಯನ್ನು ಕೈಗೊಳ್ಳುವುದಾಗಿ ಟೆನಿಸ್ ವೃತ್ತಿಪರರ ಸಂಘ-ಎಟಿಪಿ ನಿನ್ನೆಯಷ್ಟೇ ಘೋಷಿಸಿತ್ತು. ಕಳೆದ ಬುಧವಾರ ನಡೆದಿದ್ದ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಸೋತ ಬಳಿಕ ವಿಶ್ವ ನಂ.3 ಟೆನಿಸಿಗ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅಂಪೈರ್‌ ಮೇಲೆ ದಾಳಿಗೆ ಯತ್ನಿಸಿದ್ದರು.

  • Alexander Zverev has been THROWN OUT of the Mexican Open for attacking the umpire's chair at the end of his doubles match 😮😮😮 pic.twitter.com/CWhQ1r6kwj

    — Amazon Prime Video Sport (@primevideosport) February 23, 2022 " class="align-text-top noRightClick twitterSection" data=" ">

ಜ್ವೆರೆವ್‌ ಹಾಗೂ ಬ್ರೆಜಿಲ್‌ನ ಮಾರ್ಸೆಲೋ ಮೆಲೊ ಜೋಡಿ ಬ್ರಿಟನ್‌ನ ಲಾಯ್ಡ್‌ ಗ್ಲಾಸ್‌ಪೂಲ್‌, ಫಿನ್‌ಲ್ಯಾಂಡ್‌ನ ಹ್ಯಾರಿ ಜೋಡಿ ವಿರುದ್ಧ ಸೋಲುನುಭವಿಸಿತು. ಇದರಿಂದ ತಾಳ್ಮೆ ಕಳೆದುಕೊಂಡ ಜ್ವೆರೆವ್‌, ಅಂಪೈರ್‌ ಕುಳಿತಿದ್ದ ಕುರ್ಚಿಗೆ ರಾಕೆಟ್‌ನಿಂದ ಸತತವಾಗಿ ಬಡಿದಿದ್ದಾರೆ.

ಅಲ್ಲದೇ, ಅಂಪೈರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ವಿಡಿಯೋ ವೈರಲ್‌ ಆಗಿತ್ತಲ್ಲದೆ, ವಿಶ್ವದ ಅಗ್ರ ಆಟಗಾರನ ಅನುಚಿತ ವರ್ತನೆಗೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು.

ಇದನ್ನೂ ಓದಿ: ಟೆನಿಸ್​​ ಆಟಗಾರ ಲಿಯಾಂಡರ್ ಪೇಸ್ ವಿರುದ್ಧದ ಕೌಟುಂಬಿಕ ದೌರ್ಜನ್ಯ ಸಾಬೀತು : ಪರಿಹಾರ ನೀಡಲು ಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.