ETV Bharat / sports

ಜುಗ್ರಾಜ್‌ ಹ್ಯಾಟ್ರಿಕ್‌ ಗೋಲು: 10-2 ರಿಂದ ದ.ಆಫ್ರಿಕಾ ಮಣಿಸಿದ ಭಾರತ ಹಾಕಿ ತಂಡ

author img

By

Published : Feb 10, 2022, 12:53 PM IST

ಎಫ್‌ಐಎಚ್ ಪ್ರೊ ಹಾಕಿ ಪ್ರೊ ಲೀಗ್‌ನಲ್ಲಿ ಭಾರತದ ಪುರುಷರ ಹಾಕಿ ತಂಡವು ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 10-2 ಗೋಲುಗಳಿಂದ ಸೋಲುಣಿಸಿದೆ. ಮೂರು ಗೋಲು ಸಿಡಿಸಿದ ಜುಗ್ರಾಜ್​​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ.

Young Jugraj slams hat-trick as India beat South Africa 10-2 in FIH Pro League hockey
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಹಾಕಿ ತಂಡಕ್ಕೆ ಜಯ

ದಕ್ಷಿಣ ಆಫ್ರಿಕಾ: ಬುಧವಾರ ನಡೆದ ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ ಭಾರತದ ಪುರುಷರ ಹಾಕಿ ತಂಡವು ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 10-2 ಗೋಲುಗಳಿಂದ ಸೋಲುಣಿಸಿತು.

ಯುವ ಡ್ರ್ಯಾಗ್-ಫ್ಲಿಕ್ಕರ್ ಜುಗ್ರಾಜ್ ಸಿಂಗ್ ಅವರು ನಾಲ್ಕು, ಆರು ಮತ್ತು 23ನೇ ನಿಮಿಷದಲ್ಲಿ ಮೂರು ಅದ್ಭುತ ಗೋಲುಗಳನ್ನು ನೀಡಿರುವುದು ಭಾರತ ತಂಡದ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿತು. ಹೀಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂತು. ಇನ್ನು ಭಾರತದ ಹರ್ಮನ್‌ಪ್ರೀತ್ ಸಿಂಗ್, ಅಭಿಷೇಕ್, ಮನ್‌ದೀಪ್ ಸಿಂಗ್ ತಲಾ ಒಂದು ಗೋಲು, ಗುರ್ಸಾಹಿಬ್ಜಿತ್ ಸಿಂಗ್ ಮತ್ತು ದಿಲ್‌ಪ್ರೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.

ಇದನ್ನೂ ಓದಿ: ಮಿಂಚಿದ ಸೂರ್ಯ, ಕನ್ನಡಿಗ ಪ್ರಸಿಧ್: ವೆಸ್ಟ್​ ಇಂಡೀಸ್​ ವಿರುದ್ಧ 2-0ಯಲ್ಲಿ ಸರಣಿ ಗೆದ್ದ ಭಾರತ ತಂಡ

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ 5-0 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಶನಿವಾರ ಮತ್ತೊಮ್ಮೆ ಫ್ರಾನ್ಸ್‌ ಜೊತೆ ಭಾರತ ಮುಖಾಮುಖಿಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.