ETV Bharat / sports

FIH Pro League : ಗುರ್ಜೀತ್ ಡಬಲ್​ ಗೋಲ್​ ; ಸತತ 2ನೇ ಪಂದ್ಯದಲ್ಲಿ ಚೀನಾ ಬಗ್ಗು ಬಡಿದು ಅಗ್ರಸ್ಥಾನಕ್ಕೇರಿದ ಭಾರತ

author img

By

Published : Feb 1, 2022, 7:19 PM IST

3 ಕ್ವಾರ್ಟರ್​ನಲ್ಲಿ ಎರಡೂ ತಂಡಗಳೂ ತಲಾ ಒಂದು ಗೋಲು ಸಿಡಿಸಿದರೆ, ಕೊನೆಯ ಕ್ವಾರ್ಟರ್​ನ 49ನೇ ನಿಮಿಷದಲ್ಲಿ ಗುರ್ಜೀತ್ ಕೌರ್​ ಮತ್ತೊಂದು ಪೆನಾಲ್ಟಿ ಕಾರ್ನರ್​ ಅನ್ನು ಗೋಲಾಗಿ ಪರಿವರ್ತಿಸಿ ಜಯ ತಂದುಕೊಟ್ಟರು..

Women's FIH Pro League 2021-22
ಚೀನಾ ವಿರುದ್ಧ ಭಾರತ ಮಹಿಳೆಯರಿಗೆ ಜಯ

ಮಸ್ಕಾಟ್​(ಒಮಾನ್): FIH ಪ್ರೋ ಹಾಕಿ ಲೀಗ್​ನ ತನ್ನ 2ನೇ ಪಂದ್ಯದಲ್ಲಿ ಚೀನಾ ಮಹಿಳಾ ತಂಡದ ವಿರುದ್ಧ 2-1 ಗೋಲುಗಳ ಅಂತರದಿಂದ ಭಾರತ ಮಹಿಳಾ ತಂಡ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಗುರ್ಜೀತ್​ ಕೌರ್​ ತಮಗೆ ಸಿಕ್ಕ 2 ಪೆನಾಲ್ಟಿ ಅವಕಾಶಗಳನ್ನು ಗೋಲುಗಳಾಗಿ ಪರಿವರ್ತಿಸಿ ಭಾರತ ವನಿತಾ ತಂಡ ಟೂರ್ನಿಯಲ್ಲಿ 2ನೇ ಜಯ ತಂದುಕೊಟ್ಟರು. ಚೀನಾ ಪರ ವಾಂಗ್ ಶುಮಿನ್​ ಫೀಲ್ಡ್​ ಗೋಲು ಸಿಡಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೌರ್ ಪೆನಾಲ್ಟಿ ಮೂಲಕ 3ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಗೋಲು ಸಿಡಿಸಿ ಮುನ್ನಡೆ ಒದಗಿಸಿಕೊಟ್ಟರು. ಆದರೆ, 39ನೇ ನಿಮಿಷದಲ್ಲಿ ವಾಂಗ್​ ಫೀಲ್ಡ್​​ ಗೋಲಿನ ಮೂಲಕ 1-1ರಲ್ಲಿ ಸಮಬಲಕ್ಕೆ ತಂದರು.

3 ಕ್ವಾರ್ಟರ್​ನಲ್ಲಿ ಎರಡೂ ತಂಡಗಳೂ ತಲಾ ಒಂದು ಗೋಲು ಸಿಡಿಸಿದರೆ, ಕೊನೆಯ ಕ್ವಾರ್ಟರ್​ನ 49ನೇ ನಿಮಿಷದಲ್ಲಿ ಗುರ್ಜೀತ್ ಕೌರ್​ ಮತ್ತೊಂದು ಪೆನಾಲ್ಟಿ ಕಾರ್ನರ್​ ಅನ್ನು ಗೋಲಾಗಿ ಪರಿವರ್ತಿಸಿ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ಭಾರತ ತಂಡ ನೆದರ್ಲೆಂಡ್ಸ್​ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿತು. ನೆದರ್ಲೆಂಡ್ಸ್​ ಕೂಡ 2 ಪಂದ್ಯಗಳನ್ನು ಗೆದ್ದಿದೆಯಾದರೂ ಅಧಿಕ ಗೋಲುಗಳನ್ನು ಸಿಡಿಸಿರುವ ಆಧಾರದ ಮೇಲೆ ಭಾರತ ತಂಡ ಅಗ್ರಸ್ಥಾನವನ್ನು ಅಲಂಕರಿಸಿದೆ.

ನಿರ್ಮಲಾ ಬಜೆಟ್​ನಲ್ಲಿ ಕ್ರೀಡಾಕ್ಷೇತ್ರಕ್ಕೂ ಬಲ​.. ಕಳೆದ ವರ್ಷಕ್ಕಿಂತ 305 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.