ETV Bharat / sports

Wimbledon: ವಿಂಬಲ್ಡನ್ ಟೆನಿಸ್- ಜೊಕೊವಿಕ್, ಸ್ವಿಯಾಟೆಕ್ ಶುಭಾರಂಭ; ವೀನಸ್‌​ಗೆ ಸೋಲು

author img

By

Published : Jul 4, 2023, 8:13 AM IST

ವಿಂಬಲ್ಡನ್​ ಟೆನಿಸ್‌ನ ಮೊದಲ ದಿನ ಫ್ರೆಂಚ್​ ಚಾಂಪಿಯನ್​ಗಳಾದ ನೊವಾಕ್​ ಜೊಕೊವಿಕ್​ ಮತ್ತು ಇಗಾ ಸ್ವಿಯಾಟೆಕ್​ ಗೆಲುವಿನ ಸಿಹಿ ಅನುಭವಿಸಿದ್ದು, 2ನೇ ಸುತ್ತಿಗೇರಿದ್ದಾರೆ.

Wimbledon
ವಿಂಬಲ್ಡನ್​

ವಿಂಬಲ್ಡನ್: ದಾಖಲೆಯ 24ನೇ ಗ್ರ್ಯಾಂಡ್​ಸ್ಲಾಂ ಮೇಲೆ ಕಣ್ಣಿಟ್ಟಿರುವ ನೊವಾಕ್​ ಜೊಕೊವಿಕ್​ ಮತ್ತು ಫ್ರೆಂಚ್​ ಓಪನ್​ ಚಾಂಪಿಯನ್​ ಹಾಗು ವಿಶ್ವದ ನಂಬರ್​ 1 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರು​ ಪ್ರತಿಷ್ಟಿತ ವಿಂಬಲ್ಡನ್ ಟೆನಿಸ್​ ಟೂರ್ನಿಯ ಮೊದಲ ಸುತ್ತಿನಲ್ಲಿ ನೇರ ಸೆಟ್​ಗಳಿಂದ ಗೆದ್ದು ಶುಭಾರಂಭ ಮಾಡಿದ್ದಾರೆ. ಇಬ್ಬರ ಸೊಗಸಾದ ಆಟಕ್ಕೆ ಮಳೆ ಅಡ್ಡಿಪಡಿಸಿದ್ದು, ಕೊಂಚ ನಿರಾಸೆ ತಂದಿತು.

ಮಳೆ ಅಡ್ಡಿ ಮಧ್ಯೆಯೇ ವಿಶ್ವದ 2ನೇ ಶ್ರೇಯಾಂಕಿತ ಸರ್ಬಿಯಾದ ಜೊಕೊವಿಕ್ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮ್ಯಾರಥಾನ್​ನಲ್ಲಿ ಪೆಡ್ರೊ ಕ್ಯಾಚಿನ್​​ರನ್ನು 6-3, 6-3, 7-6 (4) ಸೆಟ್​ಗಳಿಂದ ಸೋಲಿಸಿದರು. ಮೊದಲೆರಡು ಸೆಟ್​ಗಳನ್ನು ನಿರಾಯಾಸವಾಗಿ ಗೆದ್ದ ನೊವಾಕ್​ಗೆ ಮೂರನೇ ಸೆಟ್​ನಲ್ಲಿ ಸವಾಲು ಎದುರಾಯಿತು. ಸುಲಭವಾಗಿ ಸೋಲೊಪ್ಪದೆ ತಿರುಗೇಟು ನೀಡಿದ ಪೆಡ್ರೊ ಮೂರನೇ ಸೆಟ್​ನಲ್ಲಿ 6-6ರಲ್ಲಿ ಸಮಬಲ ಸಾಧಿಸಿದರು. ಇದರಿಂದ ಟೈ ಬ್ರೇಕರ್​ ನಡೆಸಲಾಯಿತು.

ವಿಂಬಲ್ಡನ್​ನಲ್ಲಿ ಸತತ 28 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನೊವಾಕ್​ ಟೈ ಬ್ರೇಕರ್​ ಅನ್ನು 7-4 ರಲ್ಲಿ ಗೆಲ್ಲುವ ಮೂಲಕ ಗೆಲುವಿನ ಸಂಖ್ಯೆಯನ್ನು 29ಕ್ಕೆ ಹೆಚ್ಚಿಸಿಕೊಂಡರು. ಸಾರ್ವಕಾಲಿಕ ಪ್ರಶಸ್ತಿಗಳ ದಾಖಲೆ ಸೃಷ್ಟಿಸುವ ಹಾದಿಯಲ್ಲಿರುವ ಸರ್ಬಿಯಾ ಆಟಗಾರನ ಮುಂದೆ ಪೆಡ್ರೊ ಆಟ ಸಾಕಾಗಲಿಲ್ಲ. ಈಗಾಗಲೇ ಆಸ್ಟ್ರೇಲಿಯನ್​, ಫ್ರೆಂಚ್​ ಗ್ರ್ಯಾಂಡ್​ಸ್ಲಾಂ ಗೆದ್ದಿರುವ ಜೊಕೊ ವಿಂಬಲ್ಡನ್​ ಗೆದ್ದು ಈ ಋತುವಿನ ಎಲ್ಲ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದಾರೆ.

ಇಗಾ ಚಾಂಪಿಯನ್​ ಆಟ: ಮಹಿಳಾ ವಿಭಾಗದಲ್ಲಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವ ನಂಬರ್​ 1 ಆಟಗಾರ್ತಿ ಇಗಾ ಸ್ವಿಯಾಟೆಕ್​ ಮೊದಲ ಸವಾಲಿನಲ್ಲಿ ಚೀನಾದ ಝ ಲಿನ್ ವಿರುದ್ಧ 6-1, 6-3 ನೇರ ಸೆಟ್​ಗಳಿಂದ ಸುಲಭ ಜಯ ಸಾಧಿಸಿದರು. ಫ್ರೆಂಚ್​ ಓಪನ್​ ಗೆದ್ದು ಟೆನಿಸ್​ ಲೋಕದ ಹೊಸ ಕಣ್ಮಣಿಯಾಗಿರುವ ಇಗಾ ಮೊದಲ ವಿಂಬಲ್ಡನ್​ ಗೆಲ್ಲುವ ಮಹಾದಾಸೆಯಲ್ಲಿದ್ದಾರೆ. ಇವರೆಗೂ ಅವರು ಟೂರ್ನಿಯಲ್ಲಿ 4ನೇ ಹಂತ ತಲುಪಿಲ್ಲ.

ಇದಲ್ಲದೇ, 4ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗುಲಾ, 2019ರ ಸೆಮಿಫೈನಲಿಸ್ಟ್ ಬಾರ್ಬೊರಾ ಸ್ಟ್ರೈಕೋವಾ, ಪುರುಷರ ವಿಭಾಗದಲ್ಲಿ ಏಳನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ಗೆಲುವು ಸಾಧಿಸುವ ಮೂಲಕ 2ನೇ ಸುತ್ತಿಗೇರಿದರು.

ವೀನಸ್​ಗೆ ಸೋಲು: ಟೆನಿಸ್​ನಿಂದ ಕೆಲ ಕಾಲ ದೂರ ಉಳಿದಿದ್ದ 7 ಗ್ರ್ಯಾಂಡ್​ಸ್ಲಾಂಗಳ ಒಡತಿ ವೀನಸ್​ ವಿಲಿಯಮ್ಸ್​ನ ಉಕ್ರೇನ್​ನ ಎಲಿನಾ ಸ್ವಿಟೋಲಿನಾ ಅವರ ವಿರುದ್ಧ 6-4, 6-3 ರಲ್ಲಿ ಸೋಲು ಕಂಡರು. ಅಮೆರಿಕದ ಇನ್ನೊಬ್ಬ ಆಟಗಾರ್ತಿ ಕೊಕೊ ಗೌಫ್ ಅವರು 2020ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಮೆರಿಕದ ಸೋಫಿಯಾ ಕೆನಿನ್ ಅವರ ವಿರುದ್ಧ 6-4, 4-6, 6-2 ಸೆಟ್​ಗಳಿಂದ ಪರಾಜಿತರಾದರು.

ಇದನ್ನೂ ಓದಿ: Wimbledon: ಇಂದಿನಿಂದ ವಿಂಬಲ್ಡನ್​; 24ನೇ ಪ್ರಶಸ್ತಿ ಮೇಲೆ ನೊವಾಕ್​ ಜೊಕೊವಿಕ್​ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.