ETV Bharat / sports

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು ಪ್ರಯತ್ನ: ಹಾಕಿ ತಂಡದ ಉಪನಾಯಕ ಹರ್ಮನ್‌ಪ್ರೀತ್

author img

By

Published : Jul 15, 2022, 4:42 PM IST

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮೊದಲ ಪಂದ್ಯಕ್ಕೆ ಎರಡು ವಾರಗಳಿಗಿಂತ ಸ್ವಲ್ಪ ಹೆಚ್ಚು ಸಮಯವಿದ್ದು, ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಪ್ರತಿಷ್ಠಿತ ಟೂರ್ನಿಗಾಗಿ ರಾಷ್ಟ್ರೀಯ ತಂಡದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು ಪ್ರಯತ್ನ: ಹಾಕಿ ತಂಡದ ಉಪನಾಯಕ ಹರ್ಮನ್‌ಪ್ರೀತ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು ಪ್ರಯತ್ನ: ಹಾಕಿ ತಂಡದ ಉಪನಾಯಕ ಹರ್ಮನ್‌ಪ್ರೀತ್

ಬೆಂಗಳೂರು: ಈ ತಿಂಗಳ ಕೊನೆಯಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಾಗುತ್ತದೆ ಎಂದು ಪುರುಷರ ಹಾಕಿ ತಂಡದ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಕಠಿಣ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ತಂಡದ ಪ್ರದರ್ಶನವು ತಮ್ಮನ್ನು ಉತ್ತಮವಾಗಿರುವಂತೆ ಮಾಡಿದೆ ಎಂದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮೊದಲ ಪಂದ್ಯಕ್ಕೆ ಎರಡು ವಾರಗಳಿಗಿಂತ ಸ್ವಲ್ಪ ಹೆಚ್ಚು ಸಮಯವಿದ್ದು, ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಪ್ರತಿಷ್ಠಿತ ಟೂರ್ನಿಗಾಗಿ ರಾಷ್ಟ್ರೀಯ ತಂಡದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದರ ನಡುವೆ ಉಪನಾಯಕ ಪ್ರತಿಕ್ರಿಯೆ ನೀಡಿದ್ದು, ನಮ್ಮ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ನಾವು ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲೂ ಉತ್ತಮವಾಗಿ ಆಡಿದ್ದೇವೆ.

ಇದರಿಂದ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ನಾವು ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ಅದರಲ್ಲೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು ನಾವು ಖಂಡಿತವಾಗಿಯೂ ಶ್ರಮಪಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚತುರ್ವಾರ್ಷಿಕ ಈವೆಂಟ್‌ಗಾಗಿ ತಂಡದ ಸಿದ್ಧತೆಗಳ ಕುರಿತು ಮಾತನಾಡಿ, ಕಾಮನ್‌ವೆಲ್ತ್ ಗೇಮ್ಸ್ 2022 ಗಾಗಿ ನಮ್ಮ ಸಿದ್ಧತೆಗಳು ಉತ್ತಮವಾಗಿ ನಡೆಯುತ್ತಿದ್ದು, ನಮ್ಮ ತರಬೇತಿ ಅವಧಿಯಲ್ಲಿ ನಾವು ನಮ್ಮ ಆಟದ ನಿರ್ದಿಷ್ಟ ಅಂಶಗಳ ಮೇಲೆ ಕೆಂದ್ರೀಕರಿಸಿದ್ದೇವೆ ಎಂದಿದ್ದಾರೆ.

ನಾವು ನಮ್ಮ ಫಿನಿಶಿಂಗ್ ಮತ್ತು ಡಿಫೆಂಡಿಂಗ್ ಕೌಶಲ್ಯಗಳ ಮೇಲೆ ನಿರ್ದಿಷ್ಟವಾಗಿ ತರಬೇತಿ ಪಡೆಯುತ್ತಿದ್ದೇವೆ. ನಾವು ದಿನದಿಂದ ದಿನಕ್ಕೆ ಉತ್ತಮಗೊಳ್ಳಲು ಪ್ರಯತ್ನಿಸುತ್ತೇವೆ. ತರಬೇತಿ ಸಮಯದಲ್ಲಿ ತಂಡವು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಸೋಮವಾರದಿಂದ ನಾವು ಪ್ರತಿ ದಿನವೂ ಪಂದ್ಯವನ್ನು ಆಡಿದ್ದೇವೆ.

ಅಭ್ಯಾಸ ಪಂದ್ಯಗಳು ನಮ್ಮ ಸುಧಾರಣೆಗೆ ಸಹಾಯ ಮಾಡಿದೆ. ಕ್ಷೇತ್ರ ಸಮನ್ವಯ ಮತ್ತು ನಮ್ಮ ಕಾರ್ಯತಂತ್ರಗಳನ್ನು ಪರೀಕ್ಷಿಸಲು ನಮಗೆ ಅವಕಾಶವನ್ನು ಈ ಮೂಲಕ ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ. ಜುಲೈ 31 ರಂದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಘಾನಾವನ್ನು ಎದುರಿಸಲಿದೆ.

ಇದನ್ನೂ ಓದಿ: ಮದುವೆಗೆ ಅಡ್ಡಿ ಆಗಲೇ ಇಲ್ಲ ಪ್ರವಾಹ: ಜೀವ ಪಣಕ್ಕಿಟ್ಟು ಜೀವನ ಸಂಗಾತಿಗಾಗಿ ಥರ್ಮಾಕೋಲ್​ನಲ್ಲೇ ವಧುವಿನ ಮನೆ ತಲುಪಿದ ವರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.