ETV Bharat / sports

Tokyo Olympics: ಕಂಚಿನ ಪದಕದ ಪಂದ್ಯದಲ್ಲೂ ಸೋತ ದೀಪಕ್ ಪೂನಿಯಾ

author img

By

Published : Aug 5, 2021, 5:25 PM IST

ಭಾರತದ ಉದಯೋನ್ಮುಖ ಕುಸ್ತಿಪಟು ಕಂಚಿನ ಪದಕ್ಕಕಾಗಿ ನಡೆದ ಪಂದ್ಯದಲ್ಲಿ ಮೈಲ್ಸ್ ಅಮಿನ್ ವಿರುದ್ಧ 2-4ರಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

Tokyo Olympics
ದೀಪಕ್​ ಪೂನಿಯಾಗೆ ಸೋಲು

ಟೋಕಿಯೋ: ಯುವ ಕುಸ್ತಿಪಟು ದೀಪಕ್ ಪೂನಿಯಾ ತಮ್ಮ ಚೊಚ್ಚಲ ಒಲಿಂಪಿಕ್ಸ್​ನಲ್ಲಿ ಸೋಲು ಕಾಣುವ ಮೂಲಕ ನಿರಾಸೆಯನುಭವಿಸಿದ್ದಾರೆ. ಅವರು ಕಂಚಿನ ಪದಕದ ಪಂದ್ಯದಲ್ಲಿ ಸ್ಯಾನ್ ಮರಿಯೋದ ಮೈಲ್ಸ್​ ನಜೆಮ್​ ಅಮಿನ್​ ವಿರುದ್ಧ 4-2ರಲ್ಲಿ ಸೋಲು ಕಂಡರು.​

22 ವರ್ಷದ ದೀಪಕ್ 86 ಕೆಜಿ ವಿಭಾಗದಲ್ಲಿ ಬುಧವಾರ ಸೆಮಿಫೈನಲ್​ ಪಂದ್ಯದಲ್ಲಿ ಅಮೆರಿಕದ ಡೇವಿಡ್​ ಟೇಲರ್​ ವಿರುದ್ಧ 10-0ಯಲ್ಲಿ ಸೋಲು ಕಂಡಿದ್ದರು. ಟೇಲರ್​ ಫೈನಲ್​ ಪ್ರವೇಶಿಸಿದ್ದರಿಂದ ಅವರಿಂದ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡಿದ್ದ ಅಮಿನ್​ ರೆಪ್​ಚೇಜ್​ ಪಂದ್ಯದಲ್ಲಿ ಗೆದ್ದು ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ಇಂದು ದೀಪಕ್​ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 4-2ರಲ್ಲಿ ಗೆಲ್ಲುವ ಮೂಲಕ ಪದಕ ಸ್ಯಾನ್​ ಮರಿನೋಗೆ ಕುಸ್ತಿಯಲ್ಲಿ ಮೊದಲ ಪದಕ ತಂದುಕೊಟ್ಟರು.

ದೀಪಕ್​ ಮೊದಲ ಪಂದ್ಯದಲ್ಲಿ ನೈಜೀರಿಯಾದ ಎಕೆರೆಕೆಮೆ ಅಜಿಯೋಮೋರ್ ಮತ್ತು ಎರಡನೇ ಪಂದ್ಯದಲ್ಲಿ ಚೀನಾದ ಲಿನ್ ಜುಶೆನ್ ಅವರನ್ನು 6-3 ಅಂಕಗಳಿಂದ ಸೋಲಿಸಿದ ಪೂನಿಯಾ ಸೆಮಿಫೈನಲ್​ಗೆ ಅರ್ಹತೆ ಪಡೆದಿದ್ದರು.

ಇದನ್ನು ಓದಿ:Tokyo Olympics: ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಹಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.