ETV Bharat / sports

Rubik's cube: ಕೇವಲ 3.13 ಸೆಕೆಂಡುಗಳಲ್ಲಿ ರೂಬಿಕ್ಸ್ ಕ್ಯೂಬ್ ಬಗೆಹರಿಸಿ ಗಿನ್ನೆಸ್ ದಾಖಲೆ ಬರೆದ ಆಟಿಸಂ ಪೀಡಿತ ಹುಡುಗ!

author img

By

Published : Jun 15, 2023, 4:01 PM IST

ಅಮೆರಿಕದ ಮ್ಯಾಕ್ಸ್ ಪಾರ್ಕ್ ಅವರು 3x3x3 ರೂಬಿಕ್ಸ್ ಕ್ಯೂಬ್ ಅನ್ನು ಅತ್ಯಂತ ವೇಗವಾಗಿ ಪರಿಹರಿಸುವ ಮೂಲಕ ಹೊಸ ದಾಖಲೆ ಸ್ಥಾಪಿಸಿದ್ದಾರೆ.

21 year old breaks Guinness World Record
21 year old breaks Guinness World Record

ಕ್ಯಾಲಿಫೋರ್ನಿಯಾ (ಅಮೆರಿಕ) : ಸ್ಪೀಡ್‌ಕ್ಯೂಬಿಂಗ್ ಲೆಜೆಂಡ್ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಾಲ್ ಆಫ್ ಫೇಮರ್ ಆಗಿರುವ ಅಮೆರಿಕದ ಮ್ಯಾಕ್ಸ್ ಪಾರ್ಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಜೂನ್ 11, 2023 ರಂದು ನಡೆದ ಪ್ರೈಡ್ ಇನ್ ಲಾಂಗ್ ಬೀಚ್ 2023 ಈವೆಂಟ್‌ನಲ್ಲಿ 3x3x3 ರೂಬಿಕ್ಸ್ ಕ್ಯೂಬ್ ಅನ್ನು ವೇಗವಾಗಿ ಪರಿಹರಿಸುವ ದಾಖಲೆಯನ್ನು ಮುರಿದರು.

ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ 21 ವರ್ಷ ವಯಸ್ಸಿನ ಮ್ಯಾಕ್ಸ್ ಪಾರ್ಕ್ 3.13 ಸೆಕೆಂಡುಗಳಲ್ಲಿ ರೂಬಿಕ್ಸ್ ಕ್ಯೂಬ್ ಪರಿಹರಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ಈ ಮೂಲಕ ಹಿಂದಿನ ದಾಖಲೆಯನ್ನು 0.34 ಸೆಕೆಂಡುಗಳಷ್ಟು ವೇಗವಾಗಿ ಮುರಿದರು. ಇದನ್ನು 2018 ರಲ್ಲಿ ಚೀನಾದ ಯುಶೆಂಗ್ ಡು ಸ್ಥಾಪಿಸಿದ್ದರು. ಇದಕ್ಕೂ ಮೊದಲು ಮ್ಯಾಕ್ಸ್‌ ಅವರ ಅತಿ ವೇಗದ ಸಿಂಗಲ್ ಸಾಲ್ವ್ 3.63 ಸೆಕೆಂಡ್‌ಗಳಾಗಿದೆ. ಯುಶೆಂಗ್ ಡು ಅವರ 3.47 ರ ನಂತರ ಮ್ಯಾಕ್ಸ್​ ಎರಡನೇ ಸ್ಥಾನವನ್ನು ಪಡೆದರು.

ಮ್ಯಾಕ್ಸ್ ಪಾರ್ಕ್ ದಾಖಲೆಯನ್ನು ಮುರಿಯುವ ಹಲವಾರು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಅವರ ಸಹವರ್ತಿ ಕ್ಯೂಬ್ ಸಂಗಾತಿಗಳು ಅವರನ್ನು ಹುರಿದುಂಬಿಸುವುದನ್ನು ವೀಡಿಯೊಗಳಲ್ಲಿ ಕಾಣಬಹುದು. ಮ್ಯಾಕ್ಸ್ ಇತರ ಹಲವಾರು ಸ್ಪೀಡ್‌ಕ್ಯೂಬಿಂಗ್ ದಾಖಲೆಗಳನ್ನು ಸಹ ಹೊಂದಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ 4x4x4 ಕ್ಯೂಬ್, 5x5x5 ಕ್ಯೂಬ್, 6x6x6 ಕ್ಯೂಬ್ ಮತ್ತು 7x7x7 ಕ್ಯೂಬ್‌ಗಾಗಿ ಸಿಂಗಲ್ ಸಾಲ್ವ್ ಮತ್ತು ಎವರೇಜ್ ಸಾಲ್ವ್ ವಿಶ್ವ ದಾಖಲೆಗಳನ್ನು ಅವರು ಹೊಂದಿದ್ದಾರೆ.

ಅವರು 4.86 ಸೆಕೆಂಡುಗಳ ಸಮಯದೊಂದಿಗೆ ಟೈಮನ್ ಕೊಲಾಸಿನ್ಸ್ಕಿ (ಪೋಲೆಂಡ್) ಜೊತೆಗೆ 3x3x3 ಸರಾಸರಿ ದಾಖಲೆಯನ್ನು ಜಂಟಿಯಾಗಿ ಹೊಂದಿದ್ದರು, ಅದನ್ನು 12 ಮಾರ್ಚ್ 2023 ರಂದು 9 ವರ್ಷದ ಯಿಹೆಂಗ್ ವಾಂಗ್ (ಚೀನಾ) ಮುರಿದರು. ಈ ದಾಖಲೆಯನ್ನು ವಾಂಗ್ 4.69 ಸೆಕೆಂಡುಗಳಷ್ಟು ವೇಗವಾಗಿ ಮುರಿದರು. ಅಸಾಧ್ಯವೆಂದು ತೋರುವ ದಾಖಲೆಗಳನ್ನು ಮುರಿಯುವುದು ಮ್ಯಾಕ್ಸ್​ಗೆ ಹೊಸದೇನಲ್ಲ. ಮ್ಯಾಕ್ಸ್​ ಅವರು 1 ನಿಮಿಷ 40 ಸೆಕೆಂಡ್ಗಳ ಸಮಯದಲ್ಲಿ 7x7x7 ಸಿಂಗಲ್ ರೆಕಾರ್ಡ್ ಅನ್ನು ಮುರಿದದ್ದು ನಾನು ನೋಡಿದ ಅತ್ಯಂತ ಅದ್ಭುತವಾದ ವಿಷಯವಾಗಿದೆ ಎಂದು ಅನುಭವಿ ಕ್ಯೂಬರ್ ಎರಿಕ್ ಅಕ್ಕರ್ಸ್ಡಿಜ್ಕ್ ಹೇಳಿದರು.

ಇದರಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಮ್ಯಾಕ್ಸ್​ ಪಾರ್ಕ್ ಅವರು ಆಟಿಸಮ್​ನಿಂದ ಬಳಲುತ್ತಿದ್ದಾರೆ. ಆದರೆ ಕ್ಯೂಬಿಂಗ್ ಆಟವು ಆತನ ಆಟಿಸಮ್​ಗೆ ಔಷಧದಂತೆ ಕೆಲಸ ಮಾಡುತ್ತಿದೆ ಎಂದು ಅವರ ತಂದೆ ಶಾನ್ ಮತ್ತು ತಾಯಿ ಮಿಕಿ ಹೇಳಿದ್ದಾರೆ. ಒಂದು ಸಮಯದಲ್ಲಿ ಮ್ಯಾಕ್ಸ್​ಗೆ ಒಂದು ನೀರಿನ ಬಾಟಲಿಯ ಮುಚ್ಚಳವನ್ನು ಕೂಡ ತೆಗೆಯಲಾಗುತ್ತಿರಲಿಲ್ಲ. ಆದರೆ ಆತ ಕ್ಯೂಬಿಕ್​ನಲ್ಲಿ ತುಂಬಾ ಆಸಕ್ತಿ ಬೆಳೆಸಿಕೊಂಡ ಎಂದು ಅವರು ಹೇಳಿದರು.

ಸ್ಪೀಡ್‌ಕ್ಯೂಬಿಂಗ್ ಎನ್ನುವುದು ರೂಬಿಕ್ಸ್ ಕ್ಯೂಬ್ ಮತ್ತು ಇತರ ವಿವಿಧ ಸಂಯೋಜನೆಗಳು ಮತ್ತು ತಿರುಚಿದ ಒಗಟುಗಳನ್ನು ಸಾಧ್ಯವಾದಷ್ಟು ವೇಗವಾಗಿ ಪರಿಹರಿಸುವ ಆಟವಾಗಿದೆ. ಇದನ್ನು ಕಲೆ, ವಿಜ್ಞಾನ ಮತ್ತು ಕ್ರೀಡೆ ಎಂದು ವಿವರಿಸಲಾಗಿದೆ ಮತ್ತು ಇದನ್ನು ಕೆಲವೊಮ್ಮೆ ಸ್ಪೀಡ್ ಸಾಲ್ವಿಂಗ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : Pakistan politics: ISI ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಬಂಧನವಾಗಿಲ್ಲ: ಪಾಕ್ ಮಾಧ್ಯಮ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.