ETV Bharat / sports

ಜರ್ಮನ್ ಓಪನ್ ಬ್ಯಾಡ್ಮಿಂಟನ್‌: ಸಿಂಧುಗೆ ಸೋಲು, ಕ್ವಾರ್ಟರ್ ಫೈನಲ್‌ಗೆ ಶ್ರೀಕಾಂತ್

author img

By

Published : Mar 10, 2022, 6:00 PM IST

ಟೂರ್ನಿಯಲ್ಲಿ 8ನೇ ಶ್ರೇಯಾಂಕ ಪಡೆದಿರುವ ವಿಶ್ವದ ಮಾಜಿ ನಂಬರ್ 1 ಬ್ಯಾಡ್ಮಿಂಟನ್‌ ಆಟಗಾರ ಶ್ರೀಕಾಂತ್ 21-16,21-23, 21-18ರ ಅಂತರದಲ್ಲಿ ಚೀನಾದ ಲು ಗುವಾಂಗ್ ಜು ವಿರುದ್ಧ ಗೆದ್ದು ಪುರುಷರ ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

Sindhu bows out of German Open
ಜರ್ಮನ್ ಓಪನ್​ನಲ್ಲಿ ಸಿಂಧುಗೆ ಸೋಲು

ಮುಲ್ಹೆಮ್‌ ಆ್ಯನ್ ಡರ್‌ ರುಹ್ರ್‌ (ಜರ್ಮನಿ): ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು 2ನೇ ಸುತ್ತಿನಲ್ಲಿ ಆಘಾತಕಾರಿ ಸೋಲು ಕಂಡು ಜರ್ಮನ್​ ಓಪನ್​ ಸೂಪರ್​ 300 ಬ್ಯಾಡ್ಮಿಂಟನ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ವಿಶ್ವ ಚಾಂಪಿಯನ್​ಶಿಪ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ.

ಟೂರ್ನಿಯಲ್ಲಿ 7ನೇ ಶ್ರೇಯಾಂಕ ಪಡೆದಿದ್ದ 2019ರ ವಿಶ್ವಚಾಂಪಿಯನ್​ ಚೀನಾದ ಜಾಂಗ್ ಯಿ ಮನ್​ ವಿರುದ್ಧ 14-21, 21-15, 14-21ರಲ್ಲಿ ಸೋಲುಂಡರು. ವಿಶ್ವದ 34ನೇ ಶ್ರೇಯಾಂಕದ ಶಟ್ಲರ್ ವಿರುದ್ಧ ಮೊದಲ ಗೇಮ್​ ಸೋತರೂ 2ನೇ ಗೇಮ್​ನಲ್ಲಿ ಗೆಲುವು ಸಾಧಿಸಿ ಕಮ್​ಬ್ಯಾಕ್ ಮಾಡಿದರಾದರೂ ನಿರ್ಣಾಯಕ ಗೇಮ್​​ನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

ಪಿ.ವಿ.ಸಿಂಧುಗೆ ಈ ಸೋಲು ಯುರೋಪಿಯನ್​ ಲೆಗ್​ನ ಆರಂಭದಲ್ಲೇ ಭಾರಿ ಹಿನ್ನಡೆ ಉಂಟು ಮಾಡಿದೆ. ಏಕೆಂದರೆ ಮುಂದಿನ ವಾರದಿಂದ ಶುರುವಾಗಲಿರುವ ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​ ಗೆಲ್ಲುವ ನೆಚ್ಚಿನ ಶಟ್ಲರ್​ಗಳಲ್ಲಿ ಪಿ.ವಿ.ಸಿಂಧು ಕೂಡ ಪ್ರಮುಖ ಸ್ಪರ್ಧಿಯಾಗಿದ್ದರು.

ಕ್ವಾರ್ಟರ್‌ಫೈನಲ್‌ಗೆ ಶ್ರೀಕಾಂತ್‌: ಟೂರ್ನಿಯಲ್ಲಿ 8ನೇ ಶ್ರೇಯಾಂಕ ಪಡೆದಿರುವ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಶ್ರೀಕಾಂತ್ 21-16,21-23, 21-18ರ ಅಂತರದಲ್ಲಿ ಚೀನಾದ ಲು ಗುವಾಂಗ್ ಜು ವಿರುದ್ಧ ಗೆದ್ದು ಪುರುಷರ ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಇದನ್ನೂ ಓದಿ:ಕಿವೀಸ್​ ವಿರುದ್ಧ ಎದುರಿಸಿದ 280 ಎಸೆತಗಳಲ್ಲಿ 149 ಡಾಟ್ ಮಾಡಿದ 'ಮಿಥಾಲಿ' ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.