ETV Bharat / sports

ಆಲ್​ ಇಂಗ್ಲೆಂಡ್ ಓಪನ್​​: ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ಪಿವಿ ಸಿಂಧು, ಲಕ್ಷ್ಯ ಸೇನ್

author img

By

Published : Mar 19, 2021, 4:56 AM IST

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ​ಕ್ರಿಸ್ಟೋಫರ್ಸನ್ ಅವರನ್ನು 21-8, 21-8ರ ನೇರ ಗೇಮ್​ಗಳ ಅಂತರದಲ್ಲಿ ಮಣಿಸಿದರು. ಈ ಪಂದ್ಯವನ್ನು ಭಾರತೀಯ ಆಟಗಾರ್ತಿ ಕೇವಲ 25 ನಿಮಿಷಗಳಲ್ಲಿ ಗೆದ್ದುಕೊಂಡರು.

ಆಲ್​ ಇಂಗ್ಲೆಂಡ್ ಓಪನ್
ಪಿವಿ ಸಿಂಧು

ಬರ್ಮಿಂಗ್​ಹ್ಯಾಮ್​: ವಿಶ್ವಚಾಂಪಿಯನ್​ ಪಿವಿ ಸಿಂಧು ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನಲ್ಲಿ ಡೆನ್ಮಾರ್ಕ್​ನ ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ಅವರನ್ನು ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ​ಕ್ರಿಸ್ಟೋಫರ್ಸನ್ ಅವರನ್ನು 21-8, 21-8ರ ನೇರ ಗೇಮ್​ಗಳ ಅಂತರದಲ್ಲಿ ಮಣಿಸಿದರು. ಈ ಪಂದ್ಯವನ್ನು ಭಾರತೀಯ ಆಟಗಾರ್ತಿ ಕೇವಲ 25 ನಿಮಿಷಗಳಲ್ಲಿ ಗೆದ್ದುಕೊಂಡರು.

ಆದರೆ ಪುರುಷರ ವಿಭಾಗದಲ್ಲಿ ಸಾಯ್ ಪ್ರಣೀತ್ ಡೆನ್ಮಾರ್ಕ್​ನ ವಿಕ್ಟರ್​ ಅಕ್ಸೆಲ್ಸನ್​ ವಿರುದ್ಧ 21-15, 12-21,12-21ರ ಅಂತರದಲ್ಲಿ ಸೋಲುಕಂಡರೆ, ಪ್ರಣಯ್​ 15-21, 14-21ರ ಅಂತರದಲ್ಲಿ ವಿಶ್ವದ ನಂಬರ್ ಒನ್ ಶಟ್ಲರ್​ ಕೆಂಟೊ ಮೊಮೊಟ ವಿರುದ್ಧ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು.

ಯುವ ಆಟಗಾರ ಲಕ್ಷ್ಯ ಸೇನ್​ ಫ್ರಾನ್ಸ್​ನ ಥಾಮಸ್​ ರೌಕ್ಸೆಲ್​ರನ್ನು 21-18, 21-17ರಲ್ಲಿ ಗೆಲುವು ಸಾಧಿಸಿ ಅಂತಿಮ 8ರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.