ETV Bharat / sports

ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನ ಪಡೆದ ಶ್ರೀಯಾಂಕಾ ಸಡಂಗಿ: ಒಲಿಂಪಿಕ್ಸ್​ಗೆ ಅರ್ಹತೆ

author img

By ETV Bharat Karnataka Team

Published : Oct 31, 2023, 12:44 PM IST

ಏಷ್ಯನ್​ ಶೂಟಿಂಗ್​ ಚಾಂಪಿಯನ್​ಶಿಪ್​ನಲ್ಲಿ ಶ್ರೀಯಾಂಕಾ ಸಡಂಗಿ 4ನೇ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.

Shooter Shriyanka Sadangi
ಶ್ರೀಯಾಂಕಾ ಸಡಂಗಿ

ನವದೆಹಲಿ: ಕೋರಿಯಾದ ಚಾಂಗ್ವಾನ್​ನಲ್ಲಿ ನಡೆಯುತ್ತಿರುವ ಏಷ್ಯನ್​ ಶೂಟಿಂಗ್​ ಚಾಂಪಿಯನ್​ಶಿಪ್​ನಲ್ಲಿ ಮಹಿಳೆಯರ 50 ಮೀಟರ್​ ರೈಫಲ್​ 3ಪಿ ಈವೆಂಟ್​ನಲ್ಲಿ ಶ್ರೀಯಾಂಕಾ ಸಡಂಗಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.

ಕಠಿಣ ಪೈಪೋಟಿ ನೀಡಿದ ಶ್ರೀಯಾಂಕಾ 440.5 ಅಂಕಗಳೊಂದಿಗೆ ಪದಕದಿಂದ ವಂಚಿತರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಸ್ಪರ್ಧೆಯಲ್ಲಿ ಕೊರಿಯಾದ ಅನುಭವಿ ಶೂಟರ್​ ಲೀ ಯುನ್ಸೆಯೊ ಚಿನ್ನದ ಪದಕ ಪಡೆದಕ್ಕೆ ಮುತ್ತಿಕ್ಕಿದರೆ, ಚೀನಾದ ಹಾನ್​ ಜಿಯಾಯು ಮತ್ತು ಕ್ಸಿಯಾಸಿಯು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಮತ್ತೊಂದೆಡೆ ಒಲಿಂಪಿಕ್​ ಅರ್ಹತೆಗಾಗಿ ನೆಡೆದ ಸ್ಪರ್ಧೆಯಲ್ಲಿ ಭಾರತೀಯ ಮಹಿಳಾ ಶೂಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.​ ಸಿಫ್ಟ್ ಕೌರ್ ಸಮ್ರಾ ಅರ್ಹತಾ ಸುತ್ತಿನಲ್ಲಿ 592 ಅಂಕಗಳನ್ನು ಪಡೆದು ಅಗ್ರಸ್ಥಾನಕ್ಕೆ ಏರಿದರೆ, ಆಶಿ ಚೌಕ್ಸೆ 591 ಅಂಕಗಳಿಸಿ ಎರಡನೇ ಸ್ಥಾನ ಪಡೆದರು. ಶ್ರೀಯಾಂಕಾ ಮತ್ತು ಆಯುಷಿ ಕ್ರಮವಾಗಿ 588 ಮತ್ತು 587 ಅಂಕಗಳೊಂದಿಗೆ ಅಗ್ರ ಎಂಟರಲ್ಲಿ ಸ್ಥಾನ ಪಡೆದರು. ಮಾನಿನಿ ಕೌಶಿಕ್, ಶೂಟಿಂಗ್ 586 ಅಂಕದೊಂದಿಗೆ 10ನೇ ಸ್ಥಾನ ಪಡೆಯುವ ಮೂಲಕ ಮುಂದಿನ ಒಲಿಂಪಿಕ್ಸ್​ಗೆ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡರು.

ಅನೀಶ್​ ಭನ್ವಾಲ್​ಗೆಎ ಕಂಚು: ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್ ಅನೀಶ್ ಭನ್ವಾಲಾ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಆರು ಜನರ ನಡುವೆ ಎಲಿಮಿನೇಷನ್ ವಿಧಾನದಲ್ಲಿ ನಡೆದ ಫೈನಲ್​ನಲ್ಲಿ 21 ವರ್ಷದ ಅನೀಶ್ 28 ಅಂಕಗಳಿಸಿ ಮೂರನೇ ಸ್ಥಾನ ಪಡೆದರು.

ತಮ್ಮ ಈ ಅದ್ಭುತ ಪ್ರದರ್ಶನದ ಮೂಲಕ ಅನೀಶ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ವರೆಗೂ ಭಾರತ ಶೂಟಿಂಗ್‌ನಲ್ಲಿ ಒಲಿಂಪಿಕ್ಸ್​ಗೆ 12 ಸ್ಥಾನಗಳನ್ನು ಪಡೆದುಕೊಂಡಿದೆ. ಮತ್ತೊಂದೆಡೆ, ಪುರುಷರ ಟ್ರ್ಯಾಪ್ ಟೀಮ್ ಇವೆಂಟ್‌ನಲ್ಲಿ ಹೈದರಾಬಾದ್ ಶೂಟರ್ ಕೈನಾನ್ ಶೆಣೈ, ಜೊರಾವರ್ ಸಿಂಗ್ ಸಂಧು ಮತ್ತು ಪೃಥ್ವಿರಾಜ್ ತೊಂಡೈಮಾನ್ ಅವರನ್ನು ಒಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. ಕೈನಾನ್, ಜೊರಾವರ್ ಮತ್ತು ಪೃಥಿವರಾಜ್ ತಂಡ 341 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ಈ ಟೂರ್ನಿಯಲ್ಲಿ ಭಾರತ ಇದುವರೆಗೆ 30 ಪದಕ ಗೆದ್ದು ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ತೋಳ್ಬಲವಿಲ್ಲದೇ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ 3 ಪದಕ ಜಯಿಸಿ ಸಾಧನೆಯ ಶಿಖರವೇರಿದ ಶೀತಲ್​ ದೇವಿ ಯಾರು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.