ETV Bharat / sports

ಪ್ರೋ ಕಬಡ್ಡಿ ಲೀಗ್‌: ಪುಣೇರಿ ಪಲ್ಟನ್‌, ಹರಿಯಾಣ ಸ್ಟೀಲರ್ಸ್‌ ತಂಡಗಳಿಗೆ ಭರ್ಜರಿ ಗೆಲುವು

author img

By

Published : Oct 26, 2022, 7:48 AM IST

ಕನ್ನಡಿಗ ಬಿಸಿ ರಮೇಶ್‌ ಗರಡಿಯಲ್ಲಿ ಪಳಗಿದ ಪುಣೇರಿ ಪಲ್ಟನ್‌ ತಂಡವು ಜೈಪುರ ಪಿಂಕ್​ ಪ್ಯಾಂಥರ್ಸ್‌ ವಿರುದ್ಧದ ಪಂದ್ಯದಲ್ಲಿ 32 - 28 ಅಂತರದಲ್ಲಿ ಜಯ ಗಳಿಸಿ ಪ್ರೋ ಕಬಡ್ಡಿ ಲೀಗ್‌ನ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

pro-kabaddi-league-puneri-paltan-haryana-steelers-secured-win
ಪ್ರೋ ಕಬಡ್ಡಿ ಲೀಗ್‌

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೋ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಪುಣೇರಿ ಪಲ್ಟನ್‌ ಹಾಗೂ ಹರಿಯಾಣ ಸ್ಟೀಲರ್ಸ್‌ ತಂಡಗಳು ಜಯಭೇರಿ ಬಾರಿಸಿವೆ. ಪುಣೇರಿ ಪಲ್ಟನ್‌ ಪಡೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 32-28 ಅಂತರದಲ್ಲಿ ಜಯ ಗಳಿಸಿದರೆ, ಹರಿಯಾಣ ಸ್ಟೀಲರ್ಸ್‌ ತಂಡವು ತೆಲುಗು ಟೈಟಾನ್ಸ್‌ ವಿರುದ್ಧ 43-24 ಅಂತರದ ಗೆಲುವಿನ ನಗೆ ಬೀರಿದೆ.

ಹರಿಯಾಣ ಸ್ಟೀಲರ್ಸ್‌ ಪರ ಮೀತು ಶರ್ಮಾ ರೈಡಿಂಗ್‌ ಸೂಪರ್‌ ಟೆನ್‌ (13) ಸಾಧನೆ ಮಾಡಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಮಂಜಿತ್‌ 7 ಅಂಕ ಗಳಿಸಿ ಬೃಹತ್‌ ಜಯಕ್ಕೆ ನೆರವಾದರು. ಸ್ಟೀಲರ್ಸ್‌ ಪಡೆಯಲ್ಲಿ ಪ್ರತಿಯೊಬ್ಬ ಆಟಗಾರರೂ ಅಂಕ ಗಳಿಸಿದ್ದು ವಿಶೇಷವಾಗಿತ್ತು. ತೆಲುಗು ಟೈಟಾನ್ಸ್‌ ಪರ ಅದರ್ಶ್‌ ಟಿ ಹಾಗೂ ವಿಜಯ ಕುಮಾರ್‌ ಟ್ಯಾಕಲ್‌ನಲ್ಲಿ ತಲಾ 4 ಅಂಕ ಕಬಳಿಸಿದ್ದು ವಿಶೇಷವಾಗಿತ್ತು.

Pro Kabaddi League: Puneri Paltan, Haryana Steelers secured win
ಪ್ರೋ ಕಬಡ್ಡಿ ಲೀಗ್‌

ಪ್ರಥಮಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್‌ 24-11 ಅಂತರದಲ್ಲಿ ಬೃಹತ್‌ ಮುನ್ನಡೆ ಕಾಯ್ದುಕೊಂಡಿತ್ತು. ಸ್ಟೀಲರ್ಸ್‌ ಆಲ್ರೌಂಡ್‌ ಪ್ರದರ್ಶನ ತೋರಿ ಎರಡು ಬಾರಿ ತೆಲುಗು ಟೈಟಾನ್ಸ್‌ ಪಡೆಯನ್ನು ಆಲೌಟ್‌ ಮಾಡಿತು. ರೈಡಿಂಗ್‌ನಲ್ಲಿ 12-7 ಅಂತರದಲ್ಲಿ ಮುನ್ನಡೆ ಕಂಡಿತು, ಟ್ಯಾಕಲ್‌ನಲ್ಲಿ 7-4 ರಲ್ಲಿ ಮೇಲುಗೈ ಸಾಧಿಸಿತು. 36 ರೈಡ್‌ಗಳಲ್ಲಿ 14 ಯಶಸ್ವಿ ರೈಡ್‌ ಸ್ಟೀಲರ್ಸ್‌ ಪಾಲಾಯಿತು.

ಪುಣೇರಿ ಪಲ್ಟನ್‌ಗೆ ಜಯ: ಕನ್ನಡಿಗ ಬಿಸಿ ರಮೇಶ್‌ ಗರಡಿಯಲ್ಲಿ ಪಳಗಿದ ಪುಣೇರಿ ಪಲ್ಟನ್‌ ಪಡೆ ಜೈಪುರ ಪಿಂಕ್​ ಪ್ಯಾಂಥರ್ಸ್‌ ವಿರುದ್ಧದ ಪಂದ್ಯದಲ್ಲಿ 32-28 ಅಂತರದಲ್ಲಿ ಜಯ ಗಳಿಸಿ ಪ್ರೋ ಕಬಡ್ಡಿ ಲೀಗ್‌ನ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಅಸ್ಲಾಮ್‌ ಇನಾಂದಾರ್‌ ರೈಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಮೋಹಿತ್‌ ಗೊಯತ್‌ 6 ಅಂಕಗಳನ್ನು ಗಳಿಸಿ ಜಯಕ್ಕೆ ತಮ್ಮದೇ ಅದ ನೆರವು ನೀಡಿದರು.

ಜೈಪುರ ಪಿಂಕ್‌ ಪ್ಯಾಂಥರ್ಸ್‌ ದ್ವಿತೀಯಾರ್ಧದ ಆರಂಭದಲ್ಲಿ ಉತ್ತಮ ಪೈಪೋಟಿ ನೀಡಿದರೂ ಕೊನೆಯ ಮುನ್ನಡೆ ಕಾಣಲು ವಿಫಲವಾಯಿತು. ಅರ್ಜುನ್‌ ದೇಶ್ವಾಲ್‌ 7 ಮತ್ತು ರಾಹುಲ್‌ ಚೌಧರಿ 5 ಅಂಕ ಗಳಿಸಿ ಸೋಲಿನ ಅಂತರ ಕಡಿಮೆ ಮಾಡಿದರು. ಪ್ರಥಮಾರ್ಧದಲ್ಲಿ ಪುಣೇರಿ ಪಲ್ಟನ್‌ ಪಡೆ 17-11 ಅಂತರದಲ್ಲಿ ಮೇಲುಗೈ ಸಾಧಿಸಿತ್ತು. ರೈಡಿಂಗ್‌ನಲ್ಲಿ ಪುಣೇರಿ ಪಲ್ಟನ್‌ 11 ಅಂಕಗಳನ್ನು ಗಳಿಸಿದರೆ, ಪುಣೇರಿ ಪಲ್ಟನ್‌ 8 ಅಂಕ ಗಳಿಸಿತ್ತು.

ಇದನ್ನೂ ಓದಿ: 18 ಎಸೆತಗಳಲ್ಲಿ ದಾಖಲೆಯ 58 ರನ್ ಸಿಡಿಸಿದ ಸ್ಟೊಯಿನಿಸ್!​ ಶ್ರೀಲಂಕಾ ವಿರುದ್ಧ ಆಸೀಸ್‌ಗೆ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.