ETV Bharat / sports

ಫ್ರಾನ್ಸ್​​ನಲ್ಲಿ ವ್ಯಾಕ್ಸಿನ್ ರೂಲ್ಸ್ ಸಡಿಲಿಕೆ: ಫ್ರೆಂಚ್​ ಓಪನ್​ನಲ್ಲಿ ಆಡಲಿದ್ದಾರಾ ಜೊಕೊವಿಕ್?

author img

By

Published : Mar 4, 2022, 9:25 AM IST

2022ನೇ ಸಾಲಿನ ಫ್ರೆಂಚ್ ಓಪನ್ ಟೂರ್ನಿ ಮೇ ತಿಂಗಳಲ್ಲಿ ನಡೆಯಲಿದ್ದು, ಕೋವಿಡ್ ನಿಯಮಗಳನ್ನು ಫ್ರಾನ್ಸ್​ ಸಡಿಲಿಕೆ ಮಾಡಿರುವ ಕಾರಣದಿಂದಾಗಿ ಜೊಕೊವಿಕ್ ಈ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ.

new-vaccine-rules-could-allow-djokovic-to-play-french-open
ಫ್ರಾನ್ಸ್​​ನಲ್ಲಿ ವ್ಯಾಕ್ಸಿನ್ ರೂಲ್ಸ್ ಸಡಿಲಿಕೆ: ಫ್ರೆಂಚ್​ ಓಪನ್​ನಲ್ಲಿ ಆಡಲಿದ್ದಾರಾ ಜೊಕೊವಿಕ್?

ಪ್ಯಾರಿಸ್(ಫ್ರಾನ್ಸ್​): ಕೋವಿಡ್ ಲಸಿಕೆ ವಿಚಾರಕ್ಕೆ ಆಸ್ಟ್ರೇಲಿಯನ್ ಓಪನ್​ನಲ್ಲಿ ಭಾಗವಹಿಸಲು ಸಾಧ್ಯವಾಗದ ಸೆರ್ಬಿಯಾದ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್‌ ಫ್ರೆಂಚ್ ಓಪನ್​ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೋವಿಡ್ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಈಗಾಗಲೇ ವ್ಯಾಕ್ಸಿನೇಷನ್​ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಮೇ ತಿಂಗಳಲ್ಲಿ ನಡೆಯುವ ಫ್ರೆಂಚ್ ಓಪನ್​ ಮೂಲಕ ಜೊಕೊವಿಕ್​ಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.

ಮಾರ್ಚ್ 14ರಿಂದ ಕ್ರೀಡಾ ಕ್ರೀಡಾಂಗಣಗಳು ಮತ್ತು ರೆಸ್ಟೋರೆಂಟ್‌ಗಳಂತಹ ಸ್ಥಳಗಳನ್ನು ಪ್ರವೇಶ ಪಡೆಯಲು ಜನರು ಇನ್ನು ಮುಂದೆ ಕೋವಿಡ್​ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ತೋರಿಸಬೇಕಾಗಿಲ್ಲ ಎಂದು ಫ್ರೆಂಚ್ ಪ್ರಧಾನಮಂತ್ರಿ ಜೀನ್ ಕ್ಯಾಸ್ಟೆಕ್ಸ್ ಗುರುವಾರ ಘೋಷಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅಥವಾ ವ್ಯಾಕ್ಸಿನೇಷನ್​ ನಿಯಮಗಳನ್ನು ಬಿಗಿಗೊಳಿಸದೇ ಇದ್ದರೆ, ನೊವಾಕ್ ಜೊಕೊವಿಕ್‌ ಅವರು ಫ್ರೆಂಚ್ ಓಪನ್​ನಲ್ಲಿ ಭಾಗವಹಿಸುವ ಸಾಧ್ಯತೆ ದಟ್ಟವಾಗಿರುತ್ತದೆ.

ಇದನ್ನೂ ಓದಿ:ರಹಾನೆ-ಪೂಜಾರ ಭವಿಷ್ಯದ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್ ಶರ್ಮಾ

ಇನ್ನು ಕೋವಿಡ್ ಲಸಿಕೆಯನ್ನು ಕಡ್ಡಾಯ ಮಾಡಿದರೆ, ಮುಂದಿನ ದಿನಗಳಲ್ಲೂ ಕೂಡಾ ಗ್ರ್ಯಾಂಡ್​​ ಸ್ಲ್ಯಾಮ್​ಗಳಿಂದ ದೂರ ಇರುವುದಾಗಿ ನೊವಾಕ್ ಜೊಕೊವಿಕ್ ಹೇಳಿದ್ದಾರೆಂದು ಬಿಬಿಸಿ ವರದಿ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.