ETV Bharat / sports

ಟಿಟಿ ಮಾಂತ್ರಿಕ ಶರತ್ ಕಮಲ್​ 'ಖೇಲ್ ರತ್ನ'; 25 ಕ್ರೀಡಾಪಟುಗಳಿಗೆ 'ಅರ್ಜುನ' ಪ್ರಶಸ್ತಿ

author img

By

Published : Nov 15, 2022, 8:56 AM IST

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗಾಗಿ ಭಾರತ ಸರ್ಕಾರ ನೀಡುವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಟೆಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅಚಂತ್ ಆಯ್ಕೆಯಾಗಿದ್ದಾರೆ.

Sharath Kamal gets Khel Ratna Award
ಟೆನಿಸ್ ಆಟಗಾರ ಶರತ್ ಕಮಲ್ ಅಚಂತ್

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗಾಗಿ ಭಾರತ ಸರ್ಕಾರ ನೀಡುವ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ'ಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅಚಂತ್ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ.30ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡುವರು. ಕ್ರೀಡೆಯಲ್ಲಿನ ಅತ್ಯುತ್ತಮ ಸಾಧನೆಗಾಗಿ 25 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ತಿಳಿಸಿದೆ.

ಚೆಸ್ ಆಟಗಾರ ಆರ್. ಪ್ರಜ್ಞಾನಂದ, ಒಡಿಶಾ ಹಾಕಿ ತಾರೆ ದೀಪ್ ಗ್ರೇಸ್ ಎಕ್ಕಾ, ಶಟ್ಲರ್‌ಗಳಾದ ಲಕ್ಷ್ಯ ಸೇನ್, ಹೆಚ್‌.ಎಸ್ ಪ್ರಣಯ್, ಮಹಿಳಾ ಬಾಕ್ಸರ್ ನಿಖತ್ ಜರೀನ್, ಅಥ್ಲೀಟ್‌ಗಳಾದ ಎಲ್ದೋಸ್ ಪಾಲ್, ಅವಿನಾಶ್ ಸೇಬಲ್ ಸೇರಿದಂತೆ ಒಟ್ಟು 25 ಕ್ರೀಡಾಪಟುಗಳು ಈ ವರ್ಷ ಅರ್ಜುನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಬಾರಿ ಯಾವುದೇ ಕ್ರಿಕೆಟಿಗರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿಲ್ಲ.

ಭಾರತೀಯ ಟೇಬಲ್ ಟೆನಿಸ್ ದಿಗ್ಗಜ ಶರತ್​ ಕಮಲ್: ಶರತ್ ಕಮಲ್ ಈ ಬಾರಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಏಕೈಕ ಆಟಗಾರರಾಗಿದ್ದಾರೆ. ಟೇಬಲ್‌ ಟೆನ್ನಿಸ್‌ನಲ್ಲಿ 10 ಬಾರಿ ಹಿರಿಯ ರಾಷ್ಟ್ರೀಯ ಚಾಂಪಿಯನ್ ಆದ ಮೊದಲ ಭಾರತೀಯ ಎಂಬ ಹಿರಿಮೆ ಇವರದ್ದು. 2019ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಒಲಿದುಬಂದಿತ್ತು.

ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳ ಪಟ್ಟಿ:

  • ಸೀಮಾ ಪುನಿಯಾ (ಅಥ್ಲೆಟಿಕ್ಸ್)
  • ಎಲ್ದೋಸ್ ಪಾಲ್ (ಅಥ್ಲೆಟಿಕ್ಸ್)
  • ಅವಿನಾಶ್ ಮುಕುಂದ್ ಸೇಬಲ್ (ಅಥ್ಲೆಟಿಕ್ಸ್)
  • ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್)
  • ಹೆಚ್.ಎಸ್ ಪ್ರಣಯ್ (ಬ್ಯಾಡ್ಮಿಂಟನ್)
  • ಅಮಿತ್ (ಬಾಕ್ಸಿಂಗ್)
  • ನಿಖತ್ ಜರೀನ್ (ಬಾಕ್ಸಿಂಗ್)
  • ಭಕ್ತಿ ಪ್ರದೀಪ್ ಕುಲಕರ್ಣಿ (ಚೆಸ್)
  • ಆರ್. ಪ್ರಗ್ನಾನಂದಾ (ಚೆಸ್)
  • ಡೀಪ್ ಗ್ರೇಸ್ ಎಕ್ಕಾ (ಹಾಕಿ)
  • ಶುಶೀಲಾ ದೇವಿ (ಜೂಡೋ)
  • ಸಾಕ್ಷಿ ಕುಮಾರಿ (ಕಬಡ್ಡಿ)
  • ನಯನ್ ಮೋನಿ ಸೈಕಿಯಾ (ಲಾನ್ ಬೌಲ್)
  • ಸಾಗರ್ ಕೈಲಾಸ್ ಓವಲ್ಕರ್ (ಮಲ್ಲಖಾಂಬ್)
  • ಎಲವೆನಿಲ್ ವಲರಿವನ್ (ಶೂಟಿಂಗ್)
  • ಓಂಪ್ರಕಾಶ್ ಮಿಥರ್ವಾಲ್ (ಶೂಟಿಂಗ್)
  • ಶ್ರೀಜಾ ಅಕುಲಾ (ಟೇಬಲ್ ಟೆನಿಸ್)
  • ವಿಕಾಸ್ ಠಾಕೂರ್ (ವೇಟ್‌ಲಿಫ್ಟಿಂಗ್)
  • ಅಂಶು (ಕುಸ್ತಿ)
  • ಸರಿತಾ (ಕುಸ್ತಿ)
  • ಪರ್ವೀನ್ (ವುಶು)
  • ಮಾನಸಿ ಗಿರೀಶ್ಚಂದ್ರ ಜೋಶಿ (ಪ್ಯಾರಾ ಬ್ಯಾಡ್ಮಿಂಟನ್)
  • ತರುಣ್ ಧಿಲ್ಲೋನ್ (ಪ್ಯಾರಾ ಬ್ಯಾಡ್ಮಿಂಟನ್)
  • ಸ್ವಪ್ನಿಲ್ ಸಂಜಯ್ ಪಾಟೀಲ್ (ಪ್ಯಾರಾ ಸ್ವಿಮ್ಮಿಂಗ್)
  • ಜೆರ್ಲಿನ್ ಅನಿಕಾ ಜೆ (ಡೆಫ್ ಬ್ಯಾಡ್ಮಿಂಟನ್).

ದ್ರೋಣಾಚಾರ್ಯ ಪ್ರಶಸ್ತಿ: ಒಜಿವಾನ್‌ಜೋತ್ ಸಿಂಗ್ ತೇಜಾ (ಆರ್ಚರಿ), ಮೊಹಮ್ಮದ್ ಅಲಿ ಕಮರ್ (ಬಾಕ್ಸಿಂಗ್), ಸುಮಾ ಸಿದ್ಧಾರ್ಥ್ ಶಿರೂರ್ (ಪ್ಯಾರಾ ಶೂಟಿಂಗ್) ಮತ್ತು ಸುಜೀತ್ ಮಾನ್ (ಕುಸ್ತಿ) ಸಾಮಾನ್ಯ ವಿಭಾಗದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪಡೆಯಲಿದ್ದಾರೆ.

ಜೀವಮಾನ ಶ್ರೇಷ್ಠ ಸಾಧನೆ: ದಿನೇಶ್ ಜವಾಹರ್ ಲಾಡ್ (ಕ್ರಿಕೆಟ್), ಬಿಮಲ್ ಪ್ರಫುಲ್ಲ ಘೋಷ್ (ಫುಟ್‌ಬಾಲ್) ಮತ್ತು ರಾಜ್ ಸಿಂಗ್ ಜೀವಮಾನ ವಿಭಾಗದಲ್ಲಿ ಮನ್ನಣೆ ಪಡೆಯಲಿದ್ದಾರೆ.

ಜೀವಮಾನ ಶ್ರೇಷ್ಠ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ 2022: ಅಶ್ವಿನಿ ಅಕ್ಕುಂಜಿ ಸಿ (ಅಥ್ಲೆಟಿಕ್ಸ್), ಧರಂವೀರ್ ಸಿಂಗ್ (ಹಾಕಿ), ಬಿ.ಸಿ ಸುರೇಶ್ (ಕಬಡ್ಡಿ) ಮತ್ತು ನಿರ್ ಬಹದ್ದೂರ್ ಗುರುಂಗ್ (ಪ್ಯಾರಾ ಅಥ್ಲೆಟಿಕ್ಸ್) ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ಪಡೆಯಲಿದ್ದಾರೆ.

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ 2022: ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ 2022: ಉದಯೋನ್ಮುಖ ಮತ್ತು ಯುವ ಪ್ರತಿಭೆಗಳ ಗುರುತಿಸುವಿಕೆ ಮತ್ತು ಪೋಷಣೆ -ಟ್ರಾನ್ಸ್‌ಸ್ಟಡಿಯಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಸಾಮಾಜಿಕ ಹೊಣೆಗಾರಿಕೆಯ ಮೂಲಕ ಕ್ರೀಡೆಗೆ ಪ್ರೋತ್ಸಾಹ-ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಅಭಿವೃದ್ಧಿಗಾಗಿ ಕ್ರೀಡೆ-ಲಡಾಖ್ ಸ್ಕೀ ಮತ್ತು ಸ್ನೋಬೋರ್ಡ್ ಅಸೋಸಿಯೇಷನ್ ಅನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಮೂಲಕ ಕ್ರೀಡೆಗಳಿಗೆ ಪ್ರೋತ್ಸಾಹಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ.

ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ: ಇದು ಭಾರತ ಸರ್ಕಾರ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಕೊಡುವ ಪ್ರಶಸ್ತಿ.

ಮೌಲಾನಾ ಅಬುಲ್ ಕಲಾಂ ಆಜಾದ್ (MAKA) ಟ್ರೋಫಿ 2022: ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ.

ಇದನ್ನೂ ಓದಿ: ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರಕಟ ; ನೀರಜ್ ಚೋಪ್ರಾ ಸೇರಿ 11 ಕ್ರೀಡಾಪಟುಗಳ ಹೆಸರು ಘೋಷಣೆ

ರಾಜ್ಯದ ಕ್ರೀಡಾಪಟುಗಳಿಗೆ ಸಂದ ಗೌರವ: ಕರ್ನಾಟಕದ ನಾಲ್ವರು ಮಾಜಿ ಕ್ರೀಡಾಪಟುಗಳಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಸಿಗಲಿದೆ. ಈ ಪೈಕಿ ಮಾಜಿ ಕಬಡ್ಡಿ ಆಟಗಾರ ಬಿ.ಸಿ ಸುರೇಶ್​ ಹಾಗೂ ಅಥ್ಲೀಟ್​ ಅಶ್ವಿನಿ ಅಕ್ಕುಂಜಿ ಇದ್ದಾರೆ. ಒಲಿಂಪಿಯನ್​ ಹಾಗೂ ಖ್ಯಾತ ಕೋಚ್​ ಸುಮಾ ಸಿದ್ಧಾರ್ಥ್ ಶಿರೂರು ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.