ETV Bharat / sports

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ: 74 ಕ್ರೀಡಾಪಟುಗಳಿಗೆ ರಾಷ್ಟ್ರಪತಿಗಳಿಂದ ಗೌರವ

author img

By

Published : Aug 29, 2020, 1:27 PM IST

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ದಿನವಾದ ಇಂದು 2020ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆಯ್ಕೆಯಾಗಿರುವ 74 ಕ್ರೀಡಾಪಟುಗಳಿಗೆ ವರ್ಚುವಲ್​ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ರಾಷ್ಟ್ರಪತಿಗಳು ಗೌರವಿಸಲಿದ್ದಾರೆ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ

ಹೈದರಾಬಾದ್​: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭ ಇದೇ ಮೊದಲ ಬಾರಿಗೆ ವರ್ಚುವಲ್​ ಮಾದರಿಯಲ್ಲಿ ಜರಗುತ್ತಿದೆ.

ಕೋವಿಡ್​-19 ಭೀತಿಯಿಂದ ರಾಷ್ಟ್ರಪತಿ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಇದೇ ಮೊದಲ ಬಾರಿಗೆ ವರ್ಚುವಲ್​ ಕಾರ್ಯಕ್ರಮದಲ್ಲಿ ನಡೆಯುತ್ತಿದೆ. ಈ ವೇಳೆ 5 ರಾಜೀವ್​ ಗಾಂಧಿ ಖೇಲ್​ ರತ್ನ ಸಹಿತ ಅರ್ಜುನ ಪ್ರಶಸ್ತಿ, ಧ್ಯಾನ್​​ಚಂದ್​ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.

ಭಾರತ ಕ್ರೀಡಾ ಇಲಾಖೆ ನೀಡುವ ಈ ಅತ್ಯುನ್ನತ ಪ್ರಶಸ್ತಿಗಳಿಗೆ 74 ಮಂದಿ ಭಾಜನರಾಗಿದ್ದಾರೆ. ಎಲ್ಲರಿಗೂ ಇಂದು ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ವರ್ಚುವಲ್​ ಆಗಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಆದರೆ ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದ 14 ಮಂದಿ ಕ್ರೀಡಾಪಟುಗಳು ಪ್ರಶಸ್ತಿ ಸಮಾರಂಭದಿಂದ ಹೊರಗುಳಿದಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಶಸ್ತಿ ವಿಜೇತರು
ಪ್ರಶಸ್ತಿ ವಿಜೇತರು

ಹಾಕಿ ದಂತಕತೆ ಧ್ಯಾನ್​ಚಂದ್​ ಅವರ ಜನ್ಮದಿನದಂದು ರಾಷ್ಟ್ರಪತಿ ಭವನದಲ್ಲಿ ಕ್ರೀಡಾಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಂಪ್ರಾಯದಂತೆ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್​ 19 ಭೀತಿಯಿಂದ ಈ ಪ್ರಶಸ್ತಿ ಸಮಾರಂಭವನ್ನು ಆನ್​ಲೈನ್​ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತಿದೆ.

ಇದಕ್ಕಾಗಿ ಬೆಂಗಳೂರು, ಪುಣೆ, ಸೋನೆಪೇಟ್​, ಚಂಡೀಗಡ್​, ಕೋಲ್ಕತ್ತಾ, ಲಕ್ನೋ, ದೆಹಲಿ, ಮುಂಬೈ, ಭೂಪಾಲ್​, ಹೈದರಾಬಾದ್​ ಮತ್ತು ಇಟಾನಗರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಎಲ್ಲಾ ಕ್ರೀಡಾಪಟುಗಳು ತಮ್ಮ ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ಈ ಸ್ಥಳಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವೀಕರಿಸಿಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.