ETV Bharat / sports

2028 ರ ಒಲಿಂಪಿಕ್ಸ್‌ನಲ್ಲಿ ಟಾಪ್ -10 ರೊಳಗೆ ಸ್ಥಾನ ಪಡೆಯಲು ಭಾರತದ ಸಿದ್ಧತೆ : ಕ್ರೀಡಾ ಸಚಿವ ಕಿರೆನ್ ರಿಜಿಜು

author img

By

Published : Jun 8, 2020, 5:51 PM IST

2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಕ್ವಾಡ್ರೆನಿಯಲ್ ಕ್ರೀಡಾಕೂಟದಲ್ಲಿ ಗರಿಷ್ಠ ಪದಕಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. 2024 ರಲ್ಲಿ, ನಾವು ಗರಿಷ್ಠ ಪದಕಗಳನ್ನು ಪಡೆಯುವ ಸಂಭಾವ್ಯ ತಂಡವನ್ನು ಹೊಂದಿದ್ದೇವೆ. ಆದರೆ 2028 ರಲ್ಲಿ ನಾವು ಟಾಪ್ -10 ರಲ್ಲಿರಬೇಕು. ಇದಕ್ಕಾಗಿ ನಮ್ಮ ಸಿದ್ಧತೆ ಇದೆ ಪ್ರಾರಂಭವಾಗಿದೆ ಎಂದು ಕ್ರೀಡಾ ಸಚಿವ ಕಿರೆನ್ ರಿಜಿಜು ತಿಳಿಸಿದರು.

ನವದೆಹಲಿ: 2028 ರ ಒಲಿಂಪಿಕ್ಸ್‌ನಲ್ಲಿ ಟಾಪ್ -10 ರೊಳಗೆ ಸ್ಥಾನ ಪಡೆಯಲು ಭಾರತದ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಭಾನುವಾರ ಹೇಳಿದ್ದಾರೆ.

ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಅವರೊಂದಿಗೆ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಕ್ರೀಡಾ ಸಚಿವರು ದೀರ್ಘಾವಧಿಯ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.

"2024 ರ ಕ್ರೀಡಾಕೂಟವು ಮಧ್ಯಕಾಲೀನ ಗುರಿಯಾಗಿದೆ. ಆದರೆ ದೀರ್ಘಾವಧಿಯು 2028. ನಾನು ಕ್ರೀಡಾ ಮಂತ್ರಿಯಾದಾಗ ನಮ್ಮಲ್ಲಿ ಬಹಳ ಸೀಮಿತ ಪ್ರತಿಭೆಗಳು, ಸಂಭಾವ್ಯ ಒಲಿಂಪಿಕ್ ಪದಕ ವಿಜೇತರು ಇದ್ದರು" ಎಂದು ರಿಜಿಜು ಹೇಳಿದರು.

"2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಕ್ವಾಡ್ರೆನಿಯಲ್ ಕ್ರೀಡಾಕೂಟದಲ್ಲಿ ಗರಿಷ್ಠ ಪದಕಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. 2024 ರಲ್ಲಿ, ನಾವು ಗರಿಷ್ಠ ಪದಕಗಳನ್ನು ಪಡೆಯುವ ಸಂಭಾವ್ಯ ತಂಡವನ್ನು ಹೊಂದಿದ್ದೇವೆ. ಆದರೆ 2028 ರಲ್ಲಿ ನಾವು ಟಾಪ್ -10 ರಲ್ಲಿರಬೇಕು. ಇದಕ್ಕಾಗಿ ನಮ್ಮ ಸಿದ್ಧತೆ ಇದೆ ಪ್ರಾರಂಭವಾಗಿದೆ" ಎಂದು ತಿಳಿಸಿದರು.

"ಕಿರಿಯ ಕ್ರೀಡಾಪಟುಗಳು ನಮ್ಮ ಭವಿಷ್ಯದ ಚಾಂಪಿಯನ್​. ನಾವು ನಮ್ಮ ತಯಾರಿಯನ್ನು ದೃಢವಾದ ರೀತಿಯಲ್ಲಿ ಪ್ರಾರಂಭಿಸಿದ್ದೇವೆ. ನಾವು 2024 ರಲ್ಲಿ ಇದರ ಫಲಿತಾಂಶಗಳನ್ನು ನೋಡುತ್ತೇವೆ ಮತ್ತು ಶೀಘ್ರ ಪ್ರಗತಿ ಸಾಧಿಸುತ್ತೇವೆ. ಆದರೆ ನನ್ನ ಮಾತುಗಳನ್ನು ಗುರುತಿಸಿ, ಭಾರತವು 2028 ರಲ್ಲಿ ಅಗ್ರ -10 ರಲ್ಲಿ ಸ್ಥಾನ ಪಡೆಯಲಿದೆ" ಎಂದು ಸಚಿವರು ಮಾಹಿತಿ ನೀಡಿದರು.

ಕಿರಿಯ ಕ್ರೀಡಾಪಟುಗಳ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಮೂಲಕ ಈಗಾಗಲೇ ಅದಕ್ಕೆ ಅಡಿಪಾಯ ಹಾಕಿದ್ದೇನೆ ಎಂದು ರಿಜಿಜು ಹೇಳಿದರು.

"ವಿಶ್ವ ಚಾಂಪಿಯನ್ ಆಗಲು ನಾಲ್ಕರಿಂದ ಎಂಟು ವರ್ಷಗಳು ಬೇಕಾಗುತ್ತದೆ. ನಾನು ಈಗ ಅಡಿಪಾಯ ಹಾಕಿದ್ದೇನೆ. ನಾವು ಜೂನಿಯರ್ ಕೋಚಿಂಗ್ ಅನ್ನು ಬಹಳ ವೃತ್ತಿಪರವಾಗಿ ಪ್ರಾರಂಭಿಸಿದ್ದೇವೆ. ನಾವು ಸಾಧ್ಯವಾದಷ್ಟು ಉತ್ತಮ ತರಬೇತಿ ಮತ್ತು ತಾಂತ್ರಿಕ ಬೆಂಬಲವನ್ನು ನೀಡುತ್ತಿದ್ದೇವೆ. ಚಾಂಪಿಯನ್ ಆಗಲು ನಾಲ್ಕರಿಂದ ಎಂಟು ವರ್ಷಗಳು ಬೇಕಾಗುತ್ತದೆ" ಎಂದರು.

"ನಾವು ಸ್ಟೈಪೆಂಡ್​ಗಳನ್ನು ನಿಲ್ಲಿಸಲಿಲ್ಲ. ಎಲ್ಲಾ ಕಿರಿಯ ಕ್ರೀಡಾಪಟುಗಳಿಗೆ ನಾವು ಹಣವನ್ನು ಬಿಡುಗಡೆ ಮಾಡಿದ್ದೇವೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.