ETV Bharat / sports

ಹೈದರಾಬಾದಿನಲ್ಲಿ ಮತ್ತೊಮ್ಮೆ ಫಾರ್ಮುಲಾ ಇ ರೇಸ್.. ಯಾವಾಗ ಗೊತ್ತಾ?

author img

By ETV Bharat Karnataka Team

Published : Oct 20, 2023, 2:13 PM IST

ಹೈದರಾಬಾದ್ ನಗರವು ಮತ್ತೊಮ್ಮೆ ಫಾರ್ಮುಲಾ ಇ ರೇಸ್‌ಗೆ ವೇದಿಕೆಯಾಗಲಿದೆ. ಮುಂದಿನ ವರ್ಷ ನಗರದಲ್ಲಿ ಈ ಓಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ರೇಸ್ 10ನೇ ಫೆಬ್ರವರಿ 2024 ರಂದು ನಡೆಯಲಿದೆ ಎಂದು ಘೋಷಿಸಲಾಗಿದೆ.

Formula E will return to Hyderabad  Formula E will return to Hyderabad in season 2024  ABB FIA Formula E World Championship  Formula E race in Hyderabad 2024  ಹೈದರಾಬಾದಿನಲ್ಲಿ ಮತ್ತೊಮ್ಮೆ ಫಾರ್ಮುಲಾ ಇ ರೇಸ್  ಫಾರ್ಮುಲಾ ಇ ರೇಸ್‌ಗೆ ವೇದಿಕೆ  ರೇಸ್ 10ನೇ ಫೆಬ್ರವರಿ 2024 ರಂದು ನಡೆಯಲಿದೆ  ಫಾರ್ಮುಲಾ ಇ ರೇಸ್  ಎಫ್‌ಐಎ ವರ್ಲ್ಡ್ ಮೋಟಾರ್ ಸ್ಪೋರ್ಟ್ ಕೌನ್ಸಿಲ್  ಫಾರ್ಮುಲಾ ಇ ರೇಸ್​ಗೆ ಹೈದರಾಬಾದ್‌ ವೇದಿಕೆ  ಫಾರ್ಮುಲಾ ಇ ರೇಸ್ ಹೈದರಾಬಾದ್‌ನಲ್ಲಿ  ಮುಂದಿನ ವರ್ಷದ ಫಾರ್ಮುಲಾ ಇ ರೇಸ್ ವೇಳಾಪಟ್ಟಿ
ಹೈದರಾಬಾದಿನಲ್ಲಿ ಮತ್ತೊಮ್ಮೆ ಫಾರ್ಮುಲಾ ಇ ರೇಸ್

ಹೈದರಾಬಾದ್​, ತೆಲಂಗಾಣ: ವಿಶ್ವದ ಎಲ್ಲಾ ರೇಸರ್‌ಗಳು ಕುತೂಹಲದಿಂದ ಕಾಯುತ್ತಿರುವ ಫಾರ್ಮುಲಾ ಇ ರೇಸ್ ಮುಂದಿನ ವರ್ಷವೂ ಮನರಂಜನೆ ನೀಡಲು ಹೈದರಾಬಾದ್​ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎಫ್‌ಐಎ ವರ್ಲ್ಡ್ ಮೋಟಾರ್ ಸ್ಪೋರ್ಟ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಫಾರ್ಮುಲಾ ಇ ವಿಶ್ವ ಚಾಂಪಿಯನ್‌ಶಿಪ್‌ನ ಸೀಸನ್ 10 ಅನ್ನು ಹೈದರಾಬಾದ್​ನಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಫಾರ್ಮುಲಾ ಇ ರೇಸ್​ಗೆ ಹೈದರಾಬಾದ್‌ ವೇದಿಕೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಫಾರ್ಮುಲಾ ಇ ರೇಸ್ ಹೈದರಾಬಾದ್‌ನಲ್ಲಿ ನಡೆದಿರುವುದು ತಿಳಿದಿದೆ. ಇದೀಗ ಮತ್ತೊಮ್ಮೆ ಭಾಗ್ಯನಗರ ಈ ರೇಸ್​ಗೆ ಆತಿಥ್ಯ ವಹಿಸುತ್ತಿರುವುದಕ್ಕೆ ರೇಸರ್​ಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವರ್ಷ ಫೆಬ್ರವರಿ 10 ರಂದು ಹೈದರಾಬಾದ್‌ನಲ್ಲಿ ರೇಸ್​ ನಡೆಯಲಿದೆ ಎಂದು ಸಂಘಟಕರು ಘೋಷಿಸಿದ್ದಾರೆ.

ಫಾರ್ಮುಲಾ ಇ ವಿಶ್ವ ಚಾಂಪಿಯನ್‌ಶಿಪ್ ಸೀಸನ್ 10: ಮತ್ತೊಂದೆಡೆ ಸಚಿವ ಕೆಟಿಆರ್ (ಕೆಟಿಆರ್) ಗುರುವಾರ ಎಕ್ಸ್ (ಟ್ವಿಟ್ಟರ್) ವೇದಿಕೆಯಲ್ಲಿ ಫಾರ್ಮುಲಾ ಇ ರೇಸ್‌ನ ಸೀಸನ್ 10 ದಿನಾಂಕವನ್ನು ಹಂಚಿಕೊಂಡರು. ಈ ಮೂಲಕ ಮುಂದಿನ ವರ್ಷ ಜನವರಿ 13ರಿಂದ ಜುಲೈ 21ರವರೆಗೆ ಈ ರೇಸ್​​ ನಡೆಯಲಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಈ ತಿಂಗಳ 19 ರಂದು ನಡೆದ ಎಫ್ಐಎ ಇಂಟರ್ನ್ಯಾಷನಲ್ ಮೋಟಾರ್ ಸ್ಪೋರ್ಟ್ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೂರು ಪ್ರಮುಖ ದೇಶಗಳಾದ ಭಾರತ, ಚೀನಾ ಮತ್ತು ಅಮೆರಿಕ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಈ ರೇಸಿಂಗ್ ನಡೆಯಲಿದೆ ಎಂದು ಕೆಟಿಆರ್ ವಿವರಿಸಿದರು.

ಮುಂದಿನ ವರ್ಷದ ಫಾರ್ಮುಲಾ ಇ ರೇಸ್ ವೇಳಾಪಟ್ಟಿ..

  • ಜನವರಿ 13 ರಂದು - ಮೆಕ್ಸಿಕೋ
  • ಜನವರಿ 26, 27- ಸೌದಿ ಅರೇಬಿಯಾ
  • ಫೆಬ್ರವರಿ 10 ರಂದು - ಹೈದರಾಬಾದ್
  • ಮಾರ್ಚ್ 16 ರಂದು - ಬ್ರೆಜಿಲ್​
  • ಮಾರ್ಚ್ 30 ರಂದು - ಜಪಾನ್
  • ಏಪ್ರಿಲ್ 13 ರಂದು - ಇಟಲಿ
  • ಏಪ್ರಿಲ್ 27 ರಂದು - ಮೊನಾಕೊ
  • ಮೇ 11, 12- ಜರ್ಮನಿ
  • ಮೇ 25, 26- ಚೀನಾ
  • ಜೂನ್ 29 ರಂದು - ಯುಎಸ್ಎ
  • ಜುಲೈ 20, 21 - ಯುಕೆ

ಫಾರ್ಮುಲಾ ಇ ರೇಸ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಫೆಬ್ರವರಿಯಲ್ಲಿ ನಡೆದಿತ್ತು. ನೆಕ್ಲೇಸ್ ರೋಡ್​ನಲ್ಲಿ ಸ್ಥಾಪಿಸಲಾದ ರೇಸಿಂಗ್ ಸರ್ಕ್ಯೂಟ್‌ನಲ್ಲಿ ಈ ಸ್ಪರ್ಧೆ ನಡೆಯಿತು. ವಿವಿಧ ದೇಶಗಳ ರೇಸರ್‌ಗಳು ಮಿಂಚಿನ ವೇಗದಲ್ಲಿ ಕಾರುಗಳಲ್ಲಿ ಓಡಿಸಿದ್ದರು. ಮಹೀಂದ್ರಾ, ಜಾಗ್ವಾರ್, ನಿಸ್ಸಾನ್, ಕಾಪ್ರಾ, ಅವಲಾಂಚೆ ಕಾರುಗಳು ಟ್ರ್ಯಾಕ್ ಮೇಲೆ ಧೂಳು ಎಬ್ಬಿಸಿದ್ದವು. 2.8 ಕಿಮೀ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ 11 ಪ್ರಮುಖ ಆಟೋಮೊಬೈಲ್ ಕಂಪನಿಗಳ 22 ರೇಸರ್‌ಗಳು ಭಾಗವಹಿಸಿದ್ದರು. ಜಾ ಎರಿಕ್ ವಾ ಮುಖ್ಯ ಓಟದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಎರಿಕ್​ ಅವರಿಗೆ ಟ್ರೋಫಿಯನ್ನು ಪ್ರದಾನ ಮಾಡಿದರು. ಈ ಫಾರ್ಮುಲಾ ಕಾರ್ ರೇಸ್ ವೀಕ್ಷಿಸಲು ಹೈದರಾಬಾದ್​ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಓದಿ: 2023ರ ವಿಶ್ವಕಪ್ ಮೊದಲ ಶತಕ ಬಾರಿಸಿದ ಕೊಹ್ಲಿ.. ವಿರಾಟ್ ಸಾಧನೆ​ ಹಿಂದೆ ಇದೆ ಕನ್ನಡಿಗನ ಕೊಡುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.