ETV Bharat / sports

ಏಷ್ಯನ್ ರೆಸ್ಲಿಂಗ್​​ ಚಾಂಪಿಯನ್‌ಶಿಪ್​ಗೆ ಭಾರತೀಯ ಮಹಿಳಾ ಕುಸ್ತಿ ತಂಡ ಆಯ್ಕೆ

author img

By

Published : Mar 23, 2021, 8:38 AM IST

ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ ಮತ್ತು ಹಿರಿಯ ಏಷ್ಯನ್ ರೆಸ್ಲಿಂಗ್​​ ಚಾಂಪಿಯನ್‌ಶಿಪ್​ನಲ್ಲಿ ಭಾರತೀಯ ಮಹಿಳಾ ಈ ಕುಸ್ತಿ ತಂಡ ಭಾಗವಹಿಸಲಿದೆ. 50 ಕೆಜಿ ವಿಭಾಗದಲ್ಲಿ ಸೀಮಾ, 57 ಕೆಜಿ - ಅನ್ಶುಲ್, 62 ಕೆಜಿ - ಸೋನಮ್, 68 ಕೆಜಿ - ನಿಶಾ, 76 ಕೆಜಿ - ಪೂಜಾ ಆಯ್ಕೆಯಾಗಿದ್ದಾರೆ.

ಭಾರತೀಯ ಮಹಿಳಾ ಕುಸ್ತಿ ತಂಡ ಆಯ್ಕೆ
ಭಾರತೀಯ ಮಹಿಳಾ ಕುಸ್ತಿ ತಂಡ ಆಯ್ಕೆ

ಲಖನೌ : ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಭಾರತದ ಹಿರಿಯ ಮಹಿಳಾ ಕುಸ್ತಿ ತಂಡದ ಟ್ರಯಲ್ ಪಂದ್ಯದಲ್ಲಿ, ಕುಸ್ತಿಪಟು ಸೋನಮ್ ಅವರ ವಿರುದ್ಧ ಪರಾಭವಗೊಂಡಿದ್ದಾರೆ.

ಭಾರತೀಯ ಮಹಿಳಾ ಕುಸ್ತಿ ತಂಡ
ಭಾರತೀಯ ಮಹಿಳಾ ಕುಸ್ತಿ ತಂಡ

ಇದೇ ವೇಳೆ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ದಿವ್ಯಾ ಕಕ್ರನ್ ಕೂಡಾ ಸೋಲನುಭವಿಸಿದ್ದಾರೆ. ಈ ಗೆಲುವಿನೊಂದಿಗೆ ಮುಂಬರುವ ಏಷ್ಯಾ ಒಲಿಂಪಿಕ್ ಕ್ವಾಲಿಫೈಯರ್ ಮತ್ತು ಹಿರಿಯ ಏಷ್ಯನ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ಗಾಗಿ ಸೋನಮ್ ಅವರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಲಖನೌದ ಸಾಯಿ ಕೇಂದ್ರದಲ್ಲಿ ನಡೆದ ಟ್ರಯಲ್ ಪಂದ್ಯದಲ್ಲಿ ಸೋನಮ್ 62 ಕೆಜಿ ತೂಕದ ವಿಭಾಗದಲ್ಲಿ ಸಾಕ್ಷಿ ಮಲಿಕ್ ಅವರನ್ನು 8-7 ಅಂಕಗಳಿಂದ ಸೋಲಿಸಿದರು.

ಭಾರತೀಯ ಮಹಿಳಾ ಕುಸ್ತಿ ತಂಡ
ಭಾರತೀಯ ಮಹಿಳಾ ಕುಸ್ತಿ ತಂಡ

ಅಂದಹಾಗೆ, ಕಳೆದ ಎರಡು ವರ್ಷಗಳಲ್ಲಿ ಸೋನಮ್​ ವಿರುದ್ಧ ಸಾಕ್ಷಿ ನಾಲ್ಕನೇ ಭಾರಿ ಸೋಲು ಕಂಡಿದ್ದಾರೆ. 68 ಕೆಜಿ ತೂಕ ವಿಭಾಗದ ಪ್ರಯೋಗಗಳಲ್ಲಿ, ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ದಿವ್ಯಾ ಕಕ್ರನ್ ಅವರನ್ನು ಮೊದಲ ಸುತ್ತಿನಲ್ಲಿ ರಿತು ಮಲಿಕ್ ಸೋಲಿಸಿದರು. ಆದರೆ, ಫೈನಲ್‌ನಲ್ಲಿ ನಿಶಾ 3-2ರಿಂದ ರಿತು ಮಲಿಕ್ ಅವರನ್ನು ಮಣಿಸಿದರು.

ಭಾರತೀಯ ಮಹಿಳಾ ಕುಸ್ತಿ ತಂಡ
ಭಾರತೀಯ ಮಹಿಳಾ ಕುಸ್ತಿ ತಂಡ

ಅಗ್ರ ಎರಡು ಕುಸ್ತಿಪಟುಗಳಿಗೆ ಒಲಿಂಪಿಕ್ ಟಿಕೆಟ್ :

ಅಲ್ಮಾಟಿ (ಕಜಕಿಸ್ತಾನ್) ನಲ್ಲಿ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ ಏಪ್ರಿಲ್ 9 ರಿಂದ 11 ರವರೆಗೆ ಮತ್ತು ಹಿರಿಯ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ ಏಪ್ರಿಲ್ 12 ರಿಂದ 18 ರವರೆಗೆ ನಡೆಯಲಿದೆ. ಭಾರತೀಯ ಕುಸ್ತಿಪಟುಗಳಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸ್ಪರ್ಧೆ ಇದಾಗಿದೆ. ಇಲ್ಲಿಯವರೆಗೆ ವಿನೇಶ್ ಫೋಗಾಟ್ ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ವಿಶ್ವ ಚಾಂಪಿಯನ್‌ಶಿಪ್ -2019 ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಈಗ ಏಷ್ಯನ್ ಅರ್ಹತಾ ವಿಭಾಗದ ಪ್ರತಿ ತೂಕದ ವಿಭಾಗದಲ್ಲಿ ಅಗ್ರ ಎರಡು ಕುಸ್ತಿಪಟುಗಳಿಗೆ ಒಲಿಂಪಿಕ್ ಟಿಕೆಟ್ ಸಿಗಲಿದೆ.

ಓದಿ : ರಾಷ್ಟ್ರೀಯ ಜೂನಿಯರ್ ಕಬಡ್ಡಿ: ಕರ್ನಾಟಕ ತಂಡ ಪ್ರತಿನಿಧಿಸಲಿರುವ ಪುತ್ತೂರಿನ ಬಲ್ನಾಡ್​ನ ವಿನುಶ್ರೀ

ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ ಮತ್ತು ಹಿರಿಯ ಏಷ್ಯನ್ ರೆಸ್ಲಿಂಗ್ ಚಾಂಪಿಯನ್‌ಶಿಪ್​ನಲ್ಲಿ ಭಾರತೀಯ ಮಹಿಳಾ ಈ ಕುಸ್ತಿ ತಂಡ ಭಾಗವಹಿಸಲಿದೆ. 50 ಕೆಜಿ ವಿಭಾಗದಲ್ಲಿ ಸೀಮಾ, 57 ಕೆಜಿ - ಅನ್ಶುಲ್, 62 ಕೆಜಿ - ಸೋನಮ್, 68 ಕೆಜಿ - ನಿಶಾ, 76 ಕೆಜಿ - ಪೂಜಾ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.