ETV Bharat / sports

ಐತಿಹಾಸಿಕ ಟೋಕಿಯೋ ಒಲಿಂಪಿಕ್ಸ್​ ಮುಗಿಸಿ ತವರಿಗೆ ಮರಳಿದ ಭಾರತೀಯ ಅಥ್ಲೆಟಿಕ್ಸ್​ ತಂಡ

author img

By

Published : Aug 9, 2021, 5:58 PM IST

ಭಾರತ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗರಿಷ್ಠ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದೆ. 2012ರಲ್ಲಿ 6 ಪದಕ ಗೆದ್ದಿದ್ದ ಭಾರತ ಈ ಬಾರಿ 7 ಪದಕ ಜಯಿಸಿದೆ. ಅದರಲ್ಲೂ ನೀರಜ್​ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನದ ಪಕದ ಗೆಲ್ಲುವ ಮೂಲಕ ಭಾರತದ 100 ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.

ಭಾರತೀಯ ಅಥ್ಲೆಟಿಕ್ಸ್​ ತಂಡ
ಭಾರತೀಯ ಅಥ್ಲೆಟಿಕ್ಸ್​ ತಂಡ

ಟೋಕಿಯೋ: ಭಾರತದ ಒಲಿಂಪಿಕ್ಸ್​ ಕ್ರೀಡಾಪಟುಗಳ ತಂಡ ಐತಿಹಾಸಿಕ ಟೋಕಿಯೋ ಗೇಮ್ಸ್​ ಯಶಸ್ವಿಯಾಗಿ ಮುಗಿಸಿ ಸೋಮವಾರ ನವದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಅಥ್ಲೀಟ್ಸ್​ಗಳ ತಂಡ ಸೋಮವಾರ ತವರಿಗೆ ಮರಳಿದೆ.

" ಅಥ್ಲೆಟಿಕ್ಸ್ ತಂಡ ಟೋಕಿಯೋದಿಂದ ತವರಿಗೆ ಮರಳಿದೆ. ಅವರನ್ನು ಚಿಯರ್​ ಫಾರ್​ ಇಂಡಿಯಾ ಸಂದೇಶದ ಮೂಲಕ ಸ್ವಾಗತ ಕೋರೋಣ ಮತ್ತು ಮುಂದಿನ ಸ್ಪರ್ಧೆಗಳಿಗೆ ಬೆಂಬಲಿಸೋಣ" ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(BAI) ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದೆ.

ಭಾರತ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗರಿಷ್ಠ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದೆ. 2012ರಲ್ಲಿ 6 ಪದಕ ಗೆದ್ದಿದ್ದ ಭಾರತ ಈ ಬಾರಿ 7 ಪದಕ ಜಯಿಸಿದೆ. ಅದರಲ್ಲೂ ನೀರಜ್​ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನದ ಪಕದ ಗೆಲ್ಲುವ ಮೂಲಕ ಭಾರತದ 100 ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.

ಬಾಕ್ಸಿಂಗ್​ನಲ್ಲಿ ಲವ್ಲಿನಾ ಬೊರ್ಗೊಹೈನ್, ಬ್ಯಾಡ್ಮಿಂಟನ್​ನಲ್ಲಿ ಪಿವಿ ಸಿಂಧು, ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕ ಪಡೆದರೆ, ವೇಟ್​ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚನು ಮತ್ತು ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.