ETV Bharat / sports

Australia Open: ಸೆಮಿಫೈನಲ್​ ತಲುಪಿದ ಪ್ರಣಯ್, ಪ್ರಿಯಾಂಶು; ಕ್ವಾರ್ಟರ್‌ನಲ್ಲಿ ಸಿಂಧುಗೆ ಹಿನ್ನಡೆ

author img

By

Published : Aug 4, 2023, 7:03 PM IST

Australia Open: ಆಸ್ಟ್ರೇಲಿಯನ್​ ಓಪನ್​ನಲ್ಲಿ ಎಚ್.ಎಸ್.ಪ್ರಣಯ್ ಮತ್ತು ಪ್ರಿಯಾಂಶು ರಾಜಾವತ್ ಸೆಮಿಫೈನಲ್​ ತಲುಪಿದ್ದಾರೆ. ಸೆಮಿಯಲ್ಲಿ ಈ ಇಬ್ಬರು ಆಟಗಾರರೇ ಮುಖಾಮುಖಿ ಆಗಲಿದ್ದು, ಗೆದ್ದವರು ಪ್ರಶಸ್ತಿ ಸುತ್ತು ಪ್ರವೇಶಿಸುವರು.

HS Prannoy, Priyanshu Rajawat seal place in semi-finals of Australia Open
HS Prannoy, Priyanshu Rajawat seal place in semi-finals of Australia Open

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಪ್ರಸಕ್ತ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಸ್ಟಾರ್​ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್​ ಆಸ್ಟ್ರೇಲಿಯನ್​ ಓಪನ್​ನಲ್ಲಿ ಸೆಮಿಫೈನಲ್​ ಪ್ರವೇಶ ಪಡೆದಿದ್ದಾರೆ. ವಿಶ್ವದ 9ನೇ ಶ್ರೇಯಾಂಕದ ಪ್ರಣಯ್‌ ಅವರಿಗಿದು ಈ ವರ್ಷದ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್‌ನ 3ನೇ ಸೆಮಿಫೈನಲ್ ಆಗಿದೆ.

ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ 2023ರಲ್ಲಿ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಟೋಕಿಯೊ ಒಲಿಂಪಿಕ್​ನಲ್ಲಿ ಕಂಚಿನ ಪದಕ ಗೆದ್ದ ಇಂಡೋನೇಷ್ಯಾದ ಆಂಥೋನಿ ಗಿಂಟಿಂಗ್ ಅವರನ್ನು 16-21, 21-17, 21-14 ರ ಮೂರು ಸೆಟ್​ನಿಂದ ಸೋಲಿಸಿದರು. ಮೊದಲ ಸೆಟ್​ನಲ್ಲಿ ವಿಫಲತೆ ಕಂಡ ಭಾರತೀಯ ಐದು ಅಂಕಗಳ ಹಿನ್ನಡೆಯ ಸೋಲನುಭವಿಸಿದರು. ನಂತರದ ಸೆಟ್​​ನಲ್ಲಿ ಕಮ್​ಬ್ಯಾಕ್​ ಮಾಡಿ 21-17, ಮತ್ತು 21-14 ರಿಂದ ಗೆದ್ದು ಸೆಮಿಸ್​ಗೆ ಪ್ರವೇಶ ಪಡೆದರು. ನಾಳೆ ನಡೆಯಲಿರುವ ಸೆಮಿಸ್​​ ಫೈಟ್​ನಲ್ಲಿ ಪ್ರಣಯ್ ವಿಶ್ವದ 31ನೇ ಶ್ರೇಯಾಂಕದ ಭಾರತೀಯ ಆಟಗಾರ ಪ್ರಿಯಾಂಶು ರಾಜಾವತ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ, ಪ್ರಿಯಾಂಶು ರಾಜಾವತ್ ದೇಶಿಯ ಆಟಗಾರ ಅನುಭವಿ ಕಿಡಂಬಿ ಶ್ರೀಕಾಂತ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ 21-13, 21-8 ನೇರ ಎರಡು ಗೇಮ್​ಗಳಲ್ಲಿ ಮಣಿಸಿದರು. ಪ್ರಿಯಾಂಶು ರಾಜಾವತ್​ಗೆ ಇದು ಈ ವರ್ಷದ ಮೊದಲ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 500 ಈವೆಂಟ್‌ನ ಸೆಮಿಫೈನಲ್‌ ಆಗಿದೆ.

  • In 14 BWF World Tour tournaments that Sindhu has played this year, her stats:
    ➡️ No title
    ➡️ Has reached Semis thrice | Final once
    ➡️ 7 R1 losses https://t.co/9zLtgpA13b

    — India_AllSports (@India_AllSports) August 4, 2023 " class="align-text-top noRightClick twitterSection" data=" ">

ಸಿಂಧುಗೆ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು: ವಿಶ್ವದ 17ನೇ ಶ್ರೇಯಾಂಕದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 12ನೇ ರ್‍ಯಾಂಕಿಂಗ್​ನ ಚೀನಾ ಮೂಲದ ಅಮೆರಿಕದ ಬ್ಯಾಡ್ಮಿಂಟನ್ ಆಟಗಾರ್ತಿ ಬೀವೆನ್ ಜಾಂಗ್ ವಿರುದ್ಧ 21-12, 21-17 ಸೆಟ್‌ಗಳಿಂದ ಸೋಲನುಭವಿಸಿದರು. ಸಿಂಧು 32ನೇ ಸುತ್ತಿನಲ್ಲಿ ದೇಶೀಯ ಆಟಗಾರ್ತಿ ಅಶ್ಮಿತಾ ಚಲಿಹಾ ವಿರುದ್ಧ 21-18, 21-13 ರಲ್ಲಿ ಗೆದ್ದಿದ್ದರು. 16ರ ಸುತ್ತಿನಲ್ಲಿ ಮತ್ತೊಬ್ಬ ದೇಶೀಯ ಆಟಗಾರ್ತಿ ಆಕರ್ಷಿ ಕಶ್ಯಪ್ ಅವರನ್ನು 21-14, 21-10 ರಿಂದ ಪರಾಭವಗೊಳಿಸಿದ್ದರು.

ಈ ವರ್ಷ ಪಿ.ವಿ.ಸಿಂಧು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಗಾಯಕ್ಕೆ ತುತ್ತಾಗಿದ್ದ ಆಟಗಾರ್ತಿ ಕಮ್​ಬ್ಯಾಕ್​ ಮಾಡಿದ ನಂತರ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಎಡವುತ್ತಿದ್ದಾರೆ. ಕಳೆದ ಯಶಸ್ವಿ ಪ್ರವಾಸಗಳಲ್ಲಿ ಅವರೊಂದಿಗಿದ್ದ ಕೋಚ್ ಪಾರ್ಕ್ ಟೈ ಸ್ಯಾಂಗ್ ಕೂಡಾ ಬಿಟ್ಟು ಹೋಗಿದ್ದು, ಹೊಸ ತರಬೇತುದಾರ ಮುಹಮ್ಮದ್ ಹಫೀಜ್ ಹಶೀಮ್ ಅವರನ್ನು ನೇಮಿಸಲಾಗಿದೆ.

ಸಿಂಧು 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಸೇರಿದಂತೆ ಒಲಿಂಪಿಕ್ಸ್ ಮತ್ತು ಬಿಡಬ್ಲ್ಯೂಎಫ್​ ವರ್ಲ್ಡ್​ ಟೂರ್​ನಲ್ಲಿ ಯಶಸ್ಸು ಕಂಡಿದ್ದರು. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆದ ಮೊದಲ ಮತ್ತು ಏಕೈಕ ಭಾರತೀಯ ಆಟಗಾರ್ತಿ ಆಗಿದ್ದರು. ಅಲ್ಲದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸತತ ಎರಡು ಪದಕಗಳನ್ನು ಗೆದ್ದ ಭಾರತದ ಎರಡನೇ ವೈಯಕ್ತಿಕ ಕ್ರೀಡಾಪಟು ಕೂಡಾ ಹೌದು. ಸಿಂಧು, ಏಪ್ರಿಲ್ 2017ರಲ್ಲಿ ವೃತ್ತಿಜೀವನದ ಉನ್ನತ ವಿಶ್ವ ಶ್ರೇಯಾಂಕದಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Deodhar Trophy: ಮಯಾಂಕ್​ ತಂಡಕ್ಕೆ ದೇವಧರ್ ಟ್ರೋಫಿ: ದೇಸಿ ಟೂರ್ನಿಯಲ್ಲಿ ಮಿಂಚಿದ ಪ್ರತಿಭೆಗಳಿವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.