ETV Bharat / sports

ಮಹಿಳೆಯರ FIH ಪ್ರೊ ಲೀಗ್: ಭಾರತ ವನಿತೆಯರಿಗೆ ಚೀನಾ ವಿರುದ್ಧ 7-1ರ ಭಾರಿ ವಿಜಯ

author img

By

Published : Jan 31, 2022, 10:21 PM IST

ಸೋಮವಾರ ನಡೆದ ಪಂದ್ಯದಲ್ಲಿ ಪಂದ್ಯ ಆರಂಭವಾದ 5 ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲು ಬಾರಿಸಿ ಅದ್ಭುತ ಆರಂಭ ಒದಗಿಸಿಕೊಟ್ಟರು. ನಂತರ 12 ನೇ ನಿಮಿಷದಲ್ಲಿ ನೇಹಾ ಫೀಲ್ಡ್ ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣ ಬಾರಿಸಿದರು. 2ನೇ ಕ್ವಾರ್ಟರ್​ನಲ್ಲಿ ಭಾರತ ಹಲವು ಅವಕಾಶಗಳನ್ನು ಪಡೆದರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.

India women thrash China 7-1
ಭಾರತ ಮಹಿಳಾ ಹಾಕಿ ತಂಡಕ್ಕೆ ಚೀನಾ ವಿರುದ್ಧ ಜಯ

ಮಸ್ಕಾಟ್​: ಎಫ್​ಐಹೆಚ್​ ಫ್ರೋ ಲೀಗ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ 7-1ರ ರಲ್ಲಿ ಚೀನಾ ವಿರುದ್ಧ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಪಂದ್ಯ ಆರಂಭವಾದ 5 ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲು ಬಾರಿಸಿ ಅದ್ಭುತ ಆರಂಭ ಒದಗಿಸಿಕೊಟ್ಟರು. ನಂತರ 12 ನೇ ನಿಮಿಷದಲ್ಲಿ ನೇಹಾ ಫೀಲ್ಡ್ ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣ ಬಾರಿಸಿದರು. 2ನೇ ಕ್ವಾರ್ಟರ್​ನಲ್ಲಿ ಭಾರತ ಹಲವು ಅವಕಾಶಗಳನ್ನು ಪಡೆದರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.

ಆದರೆ 3ನೇ ಕ್ವಾರ್ಟರ್​ನ 40ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಫೀಲ್ಡ್ ಗೋಲು ಬಾರಿಸಿ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರೆ, ಚೀನಾ ಪರ 43ನೇ ನಿಮಿಷದಲ್ಲಿ ಡೆಂಗ್ ಕ್ಸೂ ಏಕೈಕ ಗೋಲು ಬಾರಿಸಿ ಮುನ್ನಡೆಯನ್ನು 1-3ಕ್ಕೆ ತಗ್ಗಿಸಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನಾಲ್ಕನೇ ಕ್ವಾರ್ಟರ್​​ನಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. 47 ನೇ ನಿಮಿಷದಲ್ಲಿ ಸುಶೀಲಾ ಚಾನು ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲ್ ಮಾಡಿದರೆ. 48 ನೇ ನಿಮಿಷದಲ್ಲಿ ಶರ್ಮಿಳಾ ದೇವಿ 5ನೇ ಗೋಲು, 50 ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಸ್ಟ್ರೋಕ್ ಮೂಲಕ 6ನೇ ಗೋಲು ಮತ್ತು, 52 ನೇ ನಿಮಿಷದಲ್ಲಿ ಸುಶೀಲಾ ಚಾನು ಪೆನಾಲ್ಟಿ ಸ್ಟ್ರೋಕ್ ಮೂಲಕ ತಮ್ಮ 2ನೇ ಹಾಗೂ ತಂಡದ 7ನೇ ಗೋಲು ಸಿಡಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಈ ಗೆಲುವಿನ ಮೂಲಕ ಭಾರತ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮಂಗಳವಾರ ಮತ್ತೆ ಭಾರತ ತಂಡ ಚೀನಾ ವಿರುದ್ಧವೇ ಕಣಕ್ಕಿಳಿಯಲಿದೆ.

ಇದನ್ನೂ ಓದಿ: 2021 ವರ್ಷದ ಕ್ರೀಡಾಪಟು ಪ್ರಶಸ್ತಿ ಪಡೆದ ಭಾರತ ಹಾಕಿ ತಂಡದ ಗೋಲ್​ ಕೀಪರ್​ ಶ್ರೀಜೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.