ETV Bharat / sports

ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ ಮುಕ್ತಾಯ: ಹಂಗೇರಿಗೆ ಫಿಡೆ ಧ್ವಜ ಹಸ್ತಾಂತರ

author img

By

Published : Aug 10, 2022, 11:57 AM IST

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭದಲ್ಲಿ ಮುಂದಿನ ಚೆಸ್ ಒಲಿಂಪಿಯಾಡ್‌ನ ಆತಿಥೇಯ ಹಂಗೇರಿಗೆ FIDE ಧ್ವಜ ಹಸ್ತಾಂತರಿಸಲಾಯಿತು.

Chess Olympiad
Etv Bharat, ಚೆಸ್ ಒಲಿಂಪಿಯಾಡ್

ಚೆನ್ನೈ: 44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ 2022 ಕ್ರೀಡಾಕೂಟ ಕಳೆದ ತಿಂಗಳ 28 ರಂದು ಚೆನ್ನೈ ಸಮೀಪದ ಮಾಮಲ್ಲಪುರಂನಲ್ಲಿ ಆರಂಭವಾಗಿ ನಿನ್ನೆ ಮುಕ್ತಾಯಗೊಂಡಿದೆ. ಈ ಸ್ಪರ್ಧೆಯಲ್ಲಿ 186 ದೇಶಗಳ ಆಟಗಾರರು ಭಾಗವಹಿಸಿದ್ದು, ಭಾರತದ ಪರ 30 ಮಂದಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Chess Olympiad closing ceremony
ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭ

44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ, ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಾದ ಬಳಿಕ 44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್​ನ ಜ್ವಾಲೆಯನ್ನು ನಂದಿಸಿ, 45ನೇ ಚೆಸ್ ಒಲಿಂಪಿಯಾಡ್ ನಡೆಯಲಿರುವ ಹಂಗೇರಿಗೆ ಫಿಡೆ ಧ್ವಜವನ್ನು ಹಸ್ತಾಂತರಿಸಲಾಯಿತು.

Chess Olympiad closing ceremony
ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭ
Chess Olympiad closing ceremony
ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭ

ಇದನ್ನೂ ಓದಿ: ವಿಡಿಯೋ : ಈಜುಕೊಳದಲ್ಲಿ ಚೆಸ್ ಆಡಿ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.