ETV Bharat / sports

ಇಂಡಿಯಾ ಓಪನ್​ ನಾನು ಗೆದ್ದ ಮೊದಲ ದೊಡ್ಡ ಟೂರ್ನಮೆಂಟ್​: ಲಕ್ಷ್ಯ ಸೇನ್ ಸಂತಸ

author img

By

Published : Jan 17, 2022, 7:44 PM IST

ಭಾನುವಾರ ನವದೆಹಲಿಯ ಕೆಡಿ ಜಾಧವ್ ಸ್ಟೇಡಿಯಂನಲ್ಲಿ ನಡೆದ ಯುನೆಕ್ಸ್ ಇಂಡಿಯಾ ಓಪನ್ ಫೈನಲ್​​ನಲ್ಲಿ 20 ವರ್ಷದ ಲಕ್ಷ್ಯ ಹಾಲಿ ವಿಶ್ವಚಾಂಪಿಯನ್ ಆಗಿರುವ ಸಿಂಗಾಪುರದ ​ಲೋಹ್ ಕೀನ್ ಯಿವ್ ವಿರುದ್ಧ 24-22, 21-17 ಗೇಮ್​ಗಳ ರೋಚಕ ಜಯ ಸಾಧಿಸಿ ವೃತ್ತಿ ಜೀವನದ ಮೊದಲ ಸೂಪರ್ 500 ಪ್ರಶಸ್ತಿ ಜಯಿಸಿದ್ದರು.

Lakshya Sen after India Open triumph
ಇಂಡಿಯಾ ಓಪನ್​ ಲಕ್ಷ್ಯ ಸೇನ್

ನವದೆಹಲಿ: 2022ರ ಇಂಡಿಯಾ ಓಪನ್​ ಗೆದ್ದಿರುವುದು ವೃತ್ತಿಜೀವನದ ದೊಡ್ಡ ವರ್ಲ್ಡ್​ ಟೂರ್​ ಟೂರ್ನಮೆಂಟ್​ ಎಂದು ಸಂತಸ ವ್ಯಕ್ತಪಡಿಸಿರುವ ಭಾರತೀಯ ಯುವ ಶಟ್ಲರ್​ ಲಕ್ಷ್ಯ ಸೇನ್​, ಪಂದ್ಯದ ಕೊನೆಯಲ್ಲಿ ಸ್ವಲ್ಪ ಒತ್ತಡ ಮತ್ತು ಆತಂಕ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಭಾನುವಾರ ನವದೆಹಲಿಯ ಕೆಡಿ ಜಾಧವ್ ಸ್ಟೇಡಿಯಂನಲ್ಲಿ ನಡೆದ ಯುನೆಕ್ಸ್ ಇಂಡಿಯಾ ಓಪನ್ ಫೈನಲ್​​ನಲ್ಲಿ 20 ವರ್ಷದ ಲಕ್ಷ್ಯ ಹಾಲಿ ವಿಶ್ವಚಾಂಪಿಯನ್ ಆಗಿರುವ ಸಿಂಗಾಪುರದ ​ಲೋಹ್ ಕೀನ್ ಯಿವ್ ವಿರುದ್ಧ 24-22, 21-17 ಗೇಮ್​ಗಳ ರೋಚಕ ಜಯ ಸಾಧಿಸಿ ವೃತ್ತಿ ಜೀವನದ ಮೊದಲ ಸೂಪರ್ 500 ಪ್ರಶಸ್ತಿ ಜಯಿಸಿದ್ದರು.

"ಇದು ನಾನು ಗೆಲ್ಲುವಲ್ಲಿ ಯಶಸ್ವಿಯಾದ ಅತಿದೊಡ್ಡ ವಿಶ್ವ ಟೂರ್ ಟೂರ್ನಮೆಂಟ್. ಗೆಲುವಿನ ಈ ಭಾವನೆ ಉತ್ತಮವಾಗಿದೆ. ಆದರೆ ಪಂದ್ಯ ಮುಕ್ತಾಯದ ಹಂತದಲ್ಲಿ ಗೇಮ್​ ಮುಗಿಸುವುದಕ್ಕೆ ನಾನು ಸ್ವಲ್ಪ ಆತಂಕ ಮತ್ತು ಒತ್ತಡಕ್ಕೆ ಒಳಗಾಗಿದ್ದೆ. ಏಕೆಂದರೆ, ಇದು ನನಗೆ ದೊಡ್ಡ ಪಂದ್ಯಾವಳಿಯಾಗಿತ್ತು. ಅದರಲ್ಲೂ ನಾನು ಫೈನಲ್‌ನಲ್ಲಿ ಆಡುತ್ತಿದ್ದೆ. ಅಂತಿಮವಾಗಿ ನಾನು ಪಾಯಿಂಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದೆ. ಈ ಗೆಲುವು ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ " ಎಂದು ವರ್ಚುವಲ್ ಮಾಧ್ಯಮಗೋಷ್ಟಿಯಲ್ಲಿ ಸೇನ್ ಹೇಳಿದ್ದಾರೆ.

ಲೋಹ್ ಕೀನ್ ಯೂ ಅವರೊಂದಿಗಿನ ಅವರ ಸಮೀಕರಣದ ಬಗ್ಗೆ ಬಗ್ಗೆ ಮಾತನಾಡಿ, "ಆತನೊಬ್ಬ ಮೋಜಿನ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ, ಅವರು ಕೋರ್ಟ್​ನಲ್ಲಿ ಅತ್ಯಂತ ತಮಾಷೆಯಾಗಿರುತ್ತಾರೆ. ನಾವಿಬ್ಬರು ಕೋರ್ಟ್‌ನ ಹೊರಗೂ ಉತ್ತಮ ಸ್ನೇಹಿತರು ಮತ್ತು ನಾವು ಪರಸ್ಪರ ವಿರುದ್ಧವಾಗಿ ಆಡುವ ಸಂದರ್ಭದಲ್ಲಿ ಪ್ರಬಲ ಸ್ಪರ್ಧೆಯಿರುತ್ತದೆ. ಸೆಮಿಫೈನಲ್‌ ಮುಗಿದ ನಂತರ ನಾವು ಪರಸ್ಪರ ಮಾತನಾಡಿದ್ದೆವು ಎಂದು ಲಕ್ಷ್ಯ ಸೇನ್​ ವಿಶ್ವ ಚಾಂಪಿಯನ್​ ಜೊತೆಗಿನ ತಮ್ಮ ಗೆಳೆತನದ ಬಗ್ಗೆ ಹೇಳಿದ್ದಾರೆ.

ಇದೇ 20 ವರ್ಷದ ಯುವಕ ಕಳೆದ ತಿಂಗಳು ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪರ ಈ ಸಾಧನೆ ಮಾಡಿದ 3ನೇ ಭಾರತೀಯ ಶಟ್ಲರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಇದೀಗ ವರ್ಷದ ಮೊದಲ ಪ್ರಮುಖ ಟೂರ್ನಿಯನ್ನು ಗೆಲ್ಲುವ ಮೂಲಕ 2022ರ ಆವೃತ್ತಿಯನ್ನು ಉತ್ತಮವಾಗಿ ಆರಂಭಿಸಿದ್ದಾರೆ.

ಇದನ್ನೂ ಓದಿ:'ನೋ ವ್ಯಾಕ್ಸಿನ್​, ನೋ ಫ್ರೆಂಚ್ ಓಪನ್'​: ಜೊಕೊವಿಕ್​ಗೆ ಫ್ರಾನ್ಸ್ ಸರ್ಕಾರದ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.