ಬ್ಯಾಡ್ಮಿಂಟನ್​ ಫೈನಲ್​: ಸೋತ ಭಾರತಕ್ಕೆ ಬೆಳ್ಳಿ, ಚಿನ್ನಕ್ಕೆ ಕೊರಳೊಡ್ಡಿದ ಮಲೇಷ್ಯಾ

author img

By

Published : Aug 3, 2022, 6:53 AM IST

Updated : Aug 3, 2022, 7:07 AM IST

badminton
ಸೋತ ಭಾರತಕ್ಕೆ ಬೆಳ್ಳಿ ()

ಭಾರತ ಅಗ್ರ ಶೆಟ್ಲರ್​ ಕಿದಂಬಿ ಶ್ರೀಕಾಂತ್​ ಮತ್ತು ಡಬಲ್ಸ್​ ತಂಡಗಳ ಸೋಲಿನಿಂದಾಗಿ ಮಲೇಷ್ಯಾ ವಿರುದ್ಧ ನಡೆದ ಗುಂಪು ಹಂತದ ಬ್ಯಾಡ್ಮಿಂಟನ್​ನ ಫೈನಲ್​ನಲ್ಲಿ ಭಾರತ ಬೆಳ್ಳಿ ಜಯಿಸಿತು.

ಬರ್ಮಿಂಗ್‌ಹ್ಯಾಮ್(ಯುಕೆ): ಕಾಮನ್​ವೆಲ್ತ್​ ಗೇಮ್ಸ್​ನ ಗುಂಪು ಹಂತದ ಬ್ಯಾಡ್ಮಿಂಟನ್​ನಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಂಗಳವಾರ ನಡೆದ ಫೈನಲ್ಸ್​ನಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ 1-3 ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟಿತು.

ಭಾರತದ ಅಗ್ರ ಬ್ಯಾಡ್ಮಿಂಟನ್​ ಆಟಗಾರ ಶ್ರೀಕಾಂತ್ ಮಲೇಷ್ಯಾದ ಕೆಳಕ್ರಮಾಂಕದ ಆಟಗಾರ ತ್ಸೆ ಯಾಂಗ್​ ಜಿ ವಿರುದ್ಧ ಸೋಲು ಅನುಭವಿಸಿದರು. ಇದು ತಂಡದ ಸೋಲಿಗೆ ಕಾರಣವಾಯಿತು. ಇದಲ್ಲದೇ, ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದರು. ಇದರಿಂದ ತಂಡ 2-0 ಯಿಂದ ಹಿನ್ನಡೆ ಪಡೆಯಿತು. ಮಹಿಳಾ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ಗೋಹ್ ಜಿನ್ ವೀ ಅವರು, 2 ಬಾರಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧುಗೆ ಸುಲಭ ತುತ್ತಾದರು.

ಮೊದಲು ನಡೆದ ಪುರುಷರ ಡಬಲ್ಸ್​ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ಮಲೇಷ್ಯಾದ ಟೆಂಗ್ ಫಾಂಗ್ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಎದುರಿಸಿತು. ಕಠಿಣ ಸವಾಲು ಒಡ್ಡಿದ ಚಿಯಾ ಸೋಹ್​ ಜೋಡಿ ಭಾರತದ ಎದುರು 21-18, 21-15 ನೇರ ಸೆಟ್​ಗಳಿಂದ ಪಂದ್ಯ ಜಯಿಸಿತು. ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಸಿಂಧುಗೆ ಜಯ: ಬಳಿಕ ನಡೆದ ಮಹಿಳೆಯರ ಸಿಂಗಲ್ಸ್​ನಲ್ಲಿ ಪಿವಿ ಸಿಂಧು, ಗೋಹ್ ಜಿನ್ ವೀ ಸವಾಲು ಎದುರಿಸಿದರು. 22-20, 21-17 ನೇರ ಸೆಟ್​ಗಳಿಂದ ಸಿಂಧು ಜಯಿಸುವ ಮೂಲಕ 1-1 ರಲ್ಲಿ ಸಮಬಲ ಮಾಡಿದರು. ವಿಶ್ವ ಕ್ರಮಾಂದಲ್ಲಿ 40 ನೇ ಸ್ಥಾನದಲ್ಲಿದ್ದ ಮಲೇಷ್ಯಾದ ಗೋಹ್​, 7 ನೇ ಕ್ರಮಾಂಕದಲ್ಲಿರುವ ಸಿಂಧುಗೆ ಕಠಿಣ ಸವಾಲು ಒಡ್ಡಿದರು.

ಶ್ರೀಕಾಂತ್​ಗೆ ಸೋಲು: ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 14 ನೇ ಶ್ರೇಯಾಂಕಿತ, ಭಾರತದ ಅಗ್ರ ಶೆಟ್ಲರ್​ ಕಿಡಂಬಿ ಶ್ರೀಕಾಂತ್ ತ್ಸೆ ಯಾಂಗ್​ ಜಿ ವಿರುದ್ಧ ಸೋತು ಶಾಕ್ ನೀಡಿದರು. 21-19, 6-21, 21-16 ಮೂರು ಸೆಟ್​ಗಳಲ್ಲಿ ನಡೆದ ಆಟದಲ್ಲಿ ಯಾಂಗ್​ ಜಿ ಗೆಲುವು ಸಾಧಿಸಿದರು. ಇದು ಭಾರತದ ಹಿನ್ನಡೆ ಕಾರಣವಾಗಿ 2-1 ರಿಂದ ಮಲೇಷ್ಯಾ ಮುನ್ನಡೆ ಪಡೆಯಿತು.

ನಿರ್ಣಾಯಕ ಪಂದ್ಯವಾದ ಮಹಿಳೆಯರ ಮಿಶ್ರ ಡಬಲ್ಸ್​ನಲ್ಲಿ ವಿಶ್ವದ 11ನೇ ಶ್ರೇಯಾಂಕದ ಮಲೇಷ್ಯಾ ಜೋಡಿಯಾದ ಥಿನಾ ಮುರಳೀಧರನ್ ಮತ್ತು ಕೂಂಗ್ ಲೆ ಪರ್ಲಿ ತಾನ್ ಭಾರತದ ಜೋಡಿಯಾದ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ವಿರುದ್ಧ 21-18, 21-17 ರ ನೇರ ಸೆಟ್​ಗಳಿಂದ ಸುಲಭ ಜಯ ಸಾಧಿಸಿದರು. ಈ ಮೂಲಕ ತಂಡ 1-3 ರ ಅಂತರದಲ್ಲಿ ಚಿನ್ನಕ್ಕೆ ಕೊರಳೊಡ್ಡಿತು.

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತ ಇದುವರೆಗೂ 5 ಚಿನ್ನ, 5 ಬೆಳ್ಳಿ, 3 ಕಂಚು ಸೇರಿ ಒಟ್ಟು 12 ಪದಕ ಜಯಿಸಿ, ಪಟ್ಟಿಯಲ್ಲಿ 6 ಸ್ಥಾನದಲ್ಲಿದೆ.

ಓದಿ: ಅಮ್ಮನ ಹುಟ್ಟುಹಬ್ಬದಂದೇ ಬೆಳ್ಳಿ ಗೆದ್ದ ಪುತ್ರ; ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಹ್ಯಾಟ್ರಿಕ್ ಪದಕ ಸಾಧನೆ

Last Updated :Aug 3, 2022, 7:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.