ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ನಿಧನ

author img

By

Published : May 15, 2022, 6:24 AM IST

Updated : May 15, 2022, 6:56 AM IST

Andrew SymondsAndrew Symonds

ಆಸೀಸ್ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಸ್ಫೋಟಕ ಆಲ್‌ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಳೆದ ಮಾರ್ಚ್‌ನಲ್ಲಿ ಕ್ರಿಕೆಟ್‌ ದಂತಕಥೆ ಶೇನ್‌ ವಾರ್ನ್‌ ಹಾಗು ರಾಡ್‌ ಮಾರ್ಷ್‌ ನಿಧನದ ನಂತರ ಆಸೀಸ್‌ ಕ್ರಿಕೆಟ್‌ಗಿದು ಮತ್ತೊಂದು ಬೇಸರದ ಸುದ್ದಿಯಾಗಿದೆ.

46 ವರ್ಷದ ಕ್ರಿಕೆಟಿಗ ಸೈಮಂಡ್ಸ್‌ 26 ಟೆಸ್ಟ್‌, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ಮೂಲಗಳ ಪ್ರಕಾರ, ದುರಂತದ ವೇಳೆ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿದ್ದರು. ದುರ್ಘಟನೆ ನಡೆದ ತಕ್ಷಣ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ ಅವರು ಗಂಭೀರವಾಗಿ ಗಾಯಗೊಂಡ ಪರಿಣಾಮ ಕೊನೆಯುಸಿರೆಳೆದರು ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.

  • Vale Andrew Symonds.

    We are shocked and saddened by the loss of the loveable Queenslander, who has tragically passed away at the age of 46. pic.twitter.com/ZAn8lllskK

    — Cricket Australia (@CricketAus) May 15, 2022 " class="align-text-top noRightClick twitterSection" data=" ">

'ಇದು ಅಂತ್ಯಂತ ದಿಗಿಲು ಹುಟ್ಟಿಸುವ ಸುದ್ದಿ, ನಾವು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇವೆ' ಎಂದು ಆಸೀಸ್ ಮಾಜಿ ಕ್ರಿಕೆಟಿಗ ಜೇಸನ್‌ ಗಿಲ್ಲೆಸ್ಪಿ ಬೇಸರ ವ್ಯಕ್ತಪಡಿಸಿದ್ದಾರೆ.

'ಈ ಸುದ್ದಿ ನಿಜವಾಗಿಯೂ ಅತೀವ ಬೇಸರ ಹುಟ್ಟಿಸುತ್ತದೆ' ಎಂದು ಆಸೀಸ್‌ ಹಿರಿಯ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್‌ ತಿಳಿಸಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ ನಿಧನಕ್ಕೆ ಭಾರತೀಯ ಕ್ರಿಕೆಟಿಗರೂ ಸೇರಿದಂತೆ ವಿಶ್ವಾದ್ಯಂತ ಕಂಬನಿ ವ್ಯಕ್ತವಾಗುತ್ತಿದೆ.

ಆಂಡ್ರ್ಯೂ ಸೈಮಂಡ್ಸ್‌ ಸಾಧನೆ: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಅತ್ಯಂತ ಕೌಶಲ ಹೊಂದಿದ ಆಲ್‌ರೌಂಡರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 2003 ರಿಂದ 2007ರವರೆಗೆ ಆಸ್ಟ್ರೇಲಿಯಾ ಗೆದ್ದಿರುವ ಸತತ ಎರಡು ಏಕದಿನ ವಿಶ್ವಕಪ್‌ ತಂಡದ ಭಾಗವಾಗಿದ್ದರು. 1999 ಮತ್ತು 2007ರ ನಡುವೆ ವಿಶ್ವದಲ್ಲೇ ಹೆಚ್ಚು ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡಗಳ ಅವಿಭಾಜ್ಯ ಅಂಗವಾಗಿದ್ದರು.

'ಮಂಕಿಗೇಟ್‌' ವಿವಾದ: ಆಂಡ್ರ್ಯೂ ಸೈಮಂಡ್ಸ್‌ ಕ್ರಿಕೆಟ್‌ನಲ್ಲಿ ಪ್ರಖ್ಯಾತಿ ಗಳಿಸಿದಷ್ಟೇ ವಿವಾದಗಳಿಂದಲೂ ಗಮನ ಸೆಳೆದಿದ್ದರು. ಅದಕ್ಕೊಂದು ಉದಾಹರಣೆ ಮಂಕಿಗೇಟ್‌ ಹಗರಣ. 2008ರ ಹೊಸ ವರ್ಷದ ಹೊಸ್ತಿಲಲ್ಲಿ ಸಿಡ್ನಿಯಲ್ಲಿ ಭಾರತ ಮತ್ತು ಆಸೀಸ್‌ ನಡುವೆ ಟೆಸ್ಟ್‌ ಪಂದ್ಯ ನಡೆಯುತ್ತಿದ್ದ ವೇಳೆ ಹರ್ಭಜನ್‌ ಸಿಂಗ್ ಅವರನ್ನು ಮಂಕಿ (ಮಂಗ) ಎಂದು ಕರೆದಿದ್ದರು.

Last Updated :May 15, 2022, 6:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.