ETV Bharat / sports

ಲವ್ಲಿನಾಗೆ 1 ಕೋಟಿ ರೂ ಚೆಕ್​ ವಿತರಿಸಿ, DSP ಹುದ್ದೆ ಸ್ವೀಕರಿಸುವಂತೆ ಆಫರ್​ ಕೊಟ್ಟ ಅಸ್ಸೋಂ ಸಿಎಂ

author img

By

Published : Aug 12, 2021, 8:12 PM IST

69 ಕೆಜಿ ವಿಭಾಗದಲ್ಲಿ ಲವ್ಲಿನಾ ಕಂಚಿನ ಪದಕ ಗೆದ್ದಿದ್ದರು. ಭಾರತಕ್ಕೆ ಪದಕ ದೃಢಪಡುತ್ತಿದ್ದಂತೆ ಹಿಮಂತ ಬಿಸ್ವಾ ಸರ್ಕಾರಿ ನೌಕರಿ ಮತ್ತು ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದರು. ಅದರಂತೆ ಇಂದು ಗುವಾಹಟಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಿದರು.

ಬಾಕ್ಸರ್​ ಲವ್ಲಿನಾ ಬೊರ್ಗೊಹೈನ್​
ಬಾಕ್ಸರ್​ ಲವ್ಲಿನಾ ಬೊರ್ಗೊಹೈನ್​

ಗುವಾಹಟಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದಿರುವ ಬಾಕ್ಸರ್​ ಲವ್ಲಿನಾ ಬೊರ್ಗೊಹೈನ್​ ಅವರಿಗೆ ಹಿಂದೆ ಘೋಷಿಸಿದಂತೆ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಂದು ಕೋಟಿ ರೂ. ಚೆಕ್​ ವಿತರಿಸಿ, ಅಸ್ಸೋಂ ಪೊಲೀಸ್​ ಇಲಾಖೆಯಲ್ಲಿ ಡಿಎಸ್​ಪಿಯಾಗಿ ಸೇರುವಂತೆ ಮನವಿ ಮಾಡಿದ್ದಾರೆ.

69 ಕೆಜಿ ವಿಭಾಗದಲ್ಲಿ ಲವ್ಲಿನಾ ಕಂಚಿನ ಪದಕ ಗೆದ್ದಿದ್ದರು. ಭಾರತದಕ್ಕೆ ಪದಕ ದೃಢಪಡುತ್ತಿದ್ದಂತೆ ಹಿಮಂತ ಬಿಸ್ವಾ ಸರ್ಕಾರಿ ನೌಕರಿ ಮತ್ತು ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದರು. ಅದರಂತೆ ಇಂದು ಗುವಾಹಟಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಿದರು.

ಜೊತೆಗೆ ಲವ್ಲಿನಾಗೆ ಪ್ಯಾರಿಸ್​ ಒಲಿಂಪಿಕ್ಸ್​ವರೆಗೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಹಣಕಾಸಿನ ನೆರವು ನೀಡುವುದಾಗಿ ಘೋಷಿಸಿದರು. ಜೊತೆಗೆ ಲವ್ಲಿನಾ ಬೊರ್ಗೊಹೈನ್​ ಅವರ ಹೆಸರಿನಲ್ಲಿ ಗೋಲಘಟ್​ ಜಿಲ್ಲೆಯ ಸೌಪತರ್​ನಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ನಿರ್ಮಿಸುವುದಾಗಿ ತಿಳಿಸಿದರು.

ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡರು. ನಂತರ ಕಂಚಿನ ಪದಕ ವಿಜೇತೆಯನ್ನು ರಾಜ್ಯ ಸರ್ಕಾರ ಗೌರವಿಸಿತು. ಈ ಸಂದರ್ಭದಲ್ಲಿ ಶರ್ಮಾ ಅವರೊಂದಿಗೆ ಕ್ರೀಡಾ ಸಚಿವ ಬಿಮಲ್ ಬೋರಾ ಕೂಡ ಇದ್ದರು.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ 9 ಬಾಕ್ಸರ್​ಗಳು ಸ್ಪರ್ಧಿಸಿದ್ದರು. ಅವರಲ್ಲಿ ಲವ್ಲಿನಾ ಮಾತ್ರ ಪದಕ ಗೆಲ್ಲುವಲ್ಲಿ ಸಫಲರಾದರು. ಇದು ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತಕ್ಕೆ ಬಾಕ್ಸಿಂಗ್ ವಿಭಾಗದಲ್ಲಿ ಸಂದ 3ನೇ ಪದಕವಾಗಿದೆ. 2008ರಲ್ಲಿ ವಿಜೇಂದರ್​ ಸಿಂಗ್ ಮತ್ತು 2012ರಲ್ಲಿ ಮೇರಿ ಕೋಮ್​ ಕಂಚಿನ ಪದಕಗಳನ್ನು ಗೆದ್ದಿದ್ದರು.

ಇದನ್ನು ಓದಿ: ಕಂಚು ಗೆದ್ದಿದ್ದಕ್ಕೆ ಖುಷಿಯಿದೆ.. ಪ್ಯಾರಿಸ್​ನಲ್ಲಿ ಚಿನ್ನಕ್ಕೆ ಗುರಿ: ಲವ್ಲಿನಾ ಸಂದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.