ಡೋಪಿಂಗ್​ನಲ್ಲಿ ಫೇಲ್​: ಹಿರಿಯ ಅಥ್ಲೀಟ್​ ಪೂವಮ್ಮಗೆ 2 ವರ್ಷ ನಿಷೇಧ ಶಿಕ್ಷೆ

author img

By

Published : Sep 19, 2022, 11:04 PM IST

asiad-medallist-poovamma

ಭಾರತದ ಹಿರಿಯ ಅಥ್ಲೀಟ್​, ಏಷ್ಯನ್ ಗೇಮ್ಸ್ ಪದಕ ವಿಜೇತೆ ಎಂಆರ್ ಪೂವಮ್ಮ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ.

ನವದೆಹಲಿ: ಭಾರತದ ಹಿರಿಯ ಅಥ್ಲೀಟ್​, ಏಷ್ಯನ್ ಗೇಮ್ಸ್ ಪದಕ ವಿಜೇತೆ ಎಂಆರ್ ಪೂವಮ್ಮ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಅವರು 3 ತಿಂಗಳವರೆಗೆ ನಿಷೇಧಕ್ಕೆ ಒಳಗಾಗಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ನಾಡಾ ಈಗ 2 ವರ್ಷ ಶಿಕ್ಷೆಯನ್ನು ವಿಸ್ತರಿಸಿದೆ.

ಕಳೆದ ವರ್ಷ ಫೆಬ್ರವರಿ 18 ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಸಮಯದಲ್ಲಿ 32 ವರ್ಷದ ಪೂವಮ್ಮ ಅವರ ಡೋಪ್ ಮಾದರಿಯನ್ನು ಸಂಗ್ರಹಿಸಲಾಗಿದ್ದು, ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ರದ್ದು ಮಾಡಿದ್ದ ಉತ್ತೇಜಕ ಮೀಥೈಲ್‌ಹೆಕ್ಸಾನಿಯಮೈನ್‌ಗೆ ತೆಗೆದುಕೊಂಡಿದ್ದು ಪಾಸಿಟಿವ್​ ಬಂದ ಅವರನ್ನು ಮೂರು ತಿಂಗಳ ಅಮಾನತುಗೊಳಿಸಿತ್ತು.

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯ (ನಾಡಾ) ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ನಾಡಾದ ಡೋಪಿಂಗ್ ವಿರೋಧಿ ಮೇಲ್ಮನವಿ ಶಿಸ್ತು ಸಮಿತಿ ವಿಚಾರಣೆ ಮೇಲ್ಮನವಿ ಅಂಗೀಕರಿಸಿ ಬಳಿಕ, ಡೋಪಿಂಗ್​ ಋಜುವಾತಾದ ಕಾರಣ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧವನ್ನು ನೀಡಿದೆ.

ಓದಿ: ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ: ಮಧ್ಯಮ ಕ್ರಮಾಂಕ, ಬೌಲಿಂಗ್​ ಪಡೆಗೆ ಬೇಕು ಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.