ETV Bharat / sports

ವಿಂಬಲ್ಡನ್‌ಗೂ ಕೊರೊನಾ ಶಾಕ್! ಕಳೆದ ವರ್ಷದ ರನ್ನರ್​ ಅಪ್​ ಟೂರ್ನಿಯಿಂದ ಔಟ್​

author img

By

Published : Jun 28, 2022, 5:50 PM IST

ಕೊರೊನಾ ದೃಢಪಟ್ಟ ಕಾರಣ ಇಟಲಿ ಟೆನಿಸ್​ ಆಟಗಾರ ಮ್ಯಾಟಿಯೊ ಬೆರೆಟ್ಟಿನಿ ವಿಂಬಲ್ಡನ್​ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಕಳೆದ ವರ್ಷದ ವಿಂಬಲ್ಡನ್​ ರನ್ನರ್​ ಅಪ್​ಗೆ ಕೊರೊನಾ ಶಾಕ್​
ಕಳೆದ ವರ್ಷದ ವಿಂಬಲ್ಡನ್​ ರನ್ನರ್​ ಅಪ್​ಗೆ ಕೊರೊನಾ ಶಾಕ್​

ಇಂಗ್ಲೆಂಡ್: ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ, ಕಳೆದ ವರ್ಷದ ವಿಂಬಲ್ಡನ್‌ ರನ್ನರ್ ಅಪ್ ಮ್ಯಾಟಿಯೊ ಬೆರೆಟ್ಟಿನಿಗೆ ಕೊರೊನಾ ಆಘಾತ ನೀಡಿದೆ. ಇಂದು ಮೊದಲ ಸುತ್ತಿನ ಆಟದ ಮೂಲಕ ಅಭಿಯಾನ ಆರಂಭಿಸಬೇಕಿದ್ದ ಇಟಲಿ ಟೆನಿಸ್ಸಿಗನಿಗೆ ಕೊರೊನಾ ದೃಢಪಟ್ಟಿದ್ದು, ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ.

ಇಂದು ನಡೆಯಬೇಕಿದ್ದ ಮೊದಲ ಸುತ್ತಿನ ಪಂದ್ಯಕ್ಕೂ ಕೆಲವು ಗಂಟೆಗಳ ಮೊದಲು ಮ್ಯಾಟಿಯೋ ಬೆರೆಟ್ಟಿನಿ ಕೊರೊನಾ ಪರೀಕ್ಷೆಗೆ ಒಳಗಾದಾಗ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಆಲ್​ ಇಂಗ್ಲೆಂಡ್​ ಟೆನಿಸ್​ ಕ್ಲಬ್​ ಮಾಹಿತಿ ಹಂಚಿಕೊಂಡಿದ್ದು, ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮ್ಯಾಟಿಯೊ ಬೆರೆಟ್ಟಿನಿ ಪ್ರತ್ಯೇಕವಾಗಿದ್ದರು. ಇಂದು ನಡೆಸಿದ ಕೊರೊನಾ ಟೆಸ್ಟ್​ನಲ್ಲಿ ಪಾಸಿಟಿವ್​ ಬಂದಿದ್ದು, ಅವರು ಪಂದ್ಯಾವಳಿಯಿಂದಲೇ ಹೊರನಡೆಯಬೇಕಾಗಿದೆ. ಇದೊಂದು ಆಘಾತಕಾರಿ ವಿಷಯ ಎಂದು ಹೇಳಿದೆ.

2ನೇ ಆಟಗಾರ: ಎರಡು ದಿನಗಳ ಹಿಂದಷ್ಟೇ ಕೊರೊನಾದಿಂದಾಗಿ 2014 ರ ಅಮೆರಿಕ ಓಪನ್ ಚಾಂಪಿಯನ್ ಮತ್ತು 2017 ರ ವಿಂಬಲ್ಡನ್ ಫೈನಲಿಸ್ಟ್ ಆಗಿದ್ದ ಮರಿನ್ ಸಿಲಿಕ್ ಅವರು ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಮ್ಯಾಟಿಯೋ ಕೂಡ ಟೂರ್ನಿ ತಪ್ಪಿಸಿಕೊಳ್ಳಲಿದ್ದು, ಇಬ್ಬರು ಪ್ರಭಾವಿ ಆಟಗಾರರ ಅಲಭ್ಯತೆ ವಿಂಬಲ್ಡನ್​ಗೆ ಕಾಡಲಿದೆ.

ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಇಂದು ಕೊರೊನಾ ಟೆಸ್ಟ್​ಗೆ ಒಳಗಾದಾಗ ಪಾಸಿಟಿವ್​ ಬಂದಿದೆ. ಕ್ವಾರಂಟೈನ್​ ಆಗಬೇಕಾದ ಕಾರಣ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಲಿದ್ದೇನೆ. ಈ ಬಗ್ಗೆ ಹೇಳಲು ನನಗೆ ಪದಗಳೇ ಬರುತ್ತ್ತಿಲ್ಲ. ಅತೀವ ನೋವಾಗುತ್ತಿದೆ. ಮುಂದಿನ ವರ್ಷ ಮತ್ತೆ ಹೊಸ ಹುರುಪಿನೊಂದಿಗೆ ಬರಲಿದ್ದೇನೆ ಎಂದು ಮ್ಯಾಟಿಯೊ ಬೆರೆಟ್ಟಿನಿ ಹೇಳಿಕೊಂಡಿದ್ದಾರೆ.

8ನೇ ಶ್ರೇಯಾಂಕದ ಇಟಲಿ ಆಟಗಾರ ಮೊದಲ ಸುತ್ತಿನಲ್ಲಿ 44ನೇ ಶ್ರೇಯಾಂಕದ ಕ್ರಿಸ್ಟಿಯನ್ ಗ್ಯಾರಿನ್ ಅವರನ್ನು ಎದುರಿಸಬೇಕಿತ್ತು.

ಇದನ್ನೂ ಓದಿ: ವಿಂಬಲ್ಡನ್​ ಪಂದ್ಯದಲ್ಲಿ ಕ್ವಾನ್​ ಸೂನ್​-ವೂ ವಿರುದ್ಧ ಜೊಕೊವಿಕ್​ಗೆ​ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.