ETV Bharat / sports

ಒಲಿಂಪಿಕ್ಸ್‌ಗೆ ತಂಡವು ಉತ್ತಮವಾಗಿ ರೂಪುಗೊಳ್ಳುತ್ತಿದೆ: ಮನ್​ದೀಪ್ ಸಿಂಗ್

author img

By

Published : Feb 3, 2021, 5:33 PM IST

ಕಳೆದ ಮೂರು ವಾರಗಳಿಂದ ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸಹಭಾಗಿತ್ವದಲ್ಲಿ ತರಬೇತಿ ಪಡೆಯುತ್ತಿರುವ ಭಾರತ ಹಾಕಿ ತಂಡದ ಸಂಭಾವ್ಯ ಆಟಗಾರರು, ಒಲಿಂಪಿಕ್ಸ್​ನಲ್ಲಿ ಗೆಲ್ಲುವ ಏಕೈಕ ಗುರಿಯೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದಾರೆ.

Team shaping up very well for Olympics, says Mandeep Singh
ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ ಸಜ್ಜು

ಬೆಂಗಳೂರು : ಈ ವರ್ಷದ ಜುಲೈನಲ್ಲಿ ಪ್ರಾರಂಭವಾಗಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ತಂಡವು ಉತ್ತಮವಾಗಿ ಸಜ್ಜಾಗಿದೆ ಎಂದು ಭಾರತೀಯ ಪುರುಷರ ಹಾಕಿ ತಂಡದ ಆಟಗಾರ ಮನ್​ದೀಪ್ ಸಿಂಗ್ ತಿಳಿಸಿದ್ದಾರೆ.

ಕಳೆದ ವರ್ಷ ಜುಲೈ - ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಅನ್ನು ಕೋವಿಡ್ -19 ಕಾರಣದಿಂದಾಗಿ 2021 ರ ಬೇಸಿಗೆಗೆ ಮುಂದೂಡಲಾಗಿದೆ. ಕಳೆದ ಮೂರು ವಾರಗಳಿಂದ ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸಹಭಾಗಿತ್ವದಲ್ಲಿ ತರಬೇತಿ ಪಡೆಯುತ್ತಿರುವ ಸಂಭಾವ್ಯ ತಂಡದ ಆಟಗಾರರು, ಒಲಿಂಪಿಕ್ಸ್​ನಲ್ಲಿ ಗೆಲ್ಲುವ ಏಕೈಕ ಗುರಿಯೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದಾರೆ.

ಓದಿ : ಪಾಕ್​ ವಿರುದ್ಧ ಟಿ-20 ಸರಣಿ: ಲಾಹೋರ್​ಗೆ ಬಂದಿಳಿದ ದಕ್ಷಿಣ ಆಫ್ರಿಕಾ ತಂಡ!

"ರಾಷ್ಟ್ರೀಯ ಕೋಚಿಂಗ್ ಕ್ಯಾಂಪ್‌ನಲ್ಲಿನ ತರಬೇತಿ ಅವಧಿಯಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಗುರಿಯಿಡಲು ನಮಗೆ ಸದ್ಯ ಪಂದ್ಯಾವಳಿ ಇಲ್ಲವಾದರೂ, ನಾವು ನಮ್ಮ ಉತ್ಸಾಹವನ್ನು ಕಡಿಮೆಗೊಳಿಸಿಲ್ಲ. ಪ್ರತಿ ತರಬೇತಿ ಅವಧಿಯಲ್ಲಿ ಶೇ. 100 ಶ್ರಮ ಹಾಕುತ್ತಿದ್ದೇವೆ" ಎಂದು ಭಾರತದ ಪರ 157 ಪಂದ್ಯಗಳನ್ನು ಆಡಿರುವ ಮನ್​ದೀಪ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.