ETV Bharat / sports

ಖೇಲ್ ​ರತ್ನ ಭವಿಷ್ಯದಲ್ಲಿ ನನಗೆ ದೊಡ್ಡ ಪ್ರೇರಣೆ: 'ಗೋಲ್ಡನ್‌ ಗರ್ಲ್'‌ ರಾಣಿ ರಾಂಪಲ್​

author img

By

Published : Aug 22, 2020, 3:32 PM IST

ಕ್ರೀಡಾ ಸಚಿವಾಲಯ ಶುಕ್ರವಾರ ರಾಣಿ ರಾಂಪಾಲ್​, ಕ್ರಿಕೆಟಿಗ ರೋಹಿತ್ ಶರ್ಮಾ ಸೇರಿದಂತೆ 5 ಮಂದಿ ಕ್ರೀಡಾಪಟುಗಳಿಗೆ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಯನ್ನೂ, ಇಶಾಂತ್​ ಶರ್ಮಾ, ದ್ಯುತಿ ಚಾಂದ್​ ಸೇರಿದಂತೆ 27 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ರಾಣಿ ರಾಂಪಾಲ್​ಗೆ ಖೇಲ್​ ರತ್ನ ಪ್ರಶಸ್ತಿ
ರಾಣಿ ರಾಂಪಾಲ್​ಗೆ ಖೇಲ್​ ರತ್ನ ಪ್ರಶಸ್ತಿ

ನವದೆಹಲಿ: ಭಾರತದ ಹಾಕಿ ತಂಡದ 'ಗೋಲ್ಡನ್​ ಗರ್ಲ್'​ ಎಂದೇ ಖ್ಯಾತಿ ಪಡೆದಿರುವ ತಂಡದ ನಾಯಕಿ ರಾಣಿ ರಾಂಪಾಲ್ ದೇಶದ​ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ 'ರಾಜೀವ್ ಗಾಂಧಿ ಖೇಲ್​ ರತ್ನ' ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಈ ಪ್ರಶಸ್ತಿ ನನಗೆ ದೊಡ್ಡ ಪ್ರೇರಣೆಯಾಗಿ ಕಾರ್ಯನಿರ್ವಹಿಸಲಿದೆ' ಎಂದು ಸಂತಸ ಹಂಚಿಕೊಂಡರು.​

ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಬೆಂಗಳೂರಿನ ತರಬೇತಿ ಶಿಬಿರದಲ್ಲಿ ಪ್ರತಿಕ್ರಿಯಿಸಿರುವ ಅವರು, 'ಇದು ನನಗೆ ಮತ್ತು ವಿಶೇಷವಾಗಿ ನನ್ನ ಕುಟುಂಬಕ್ಕೆ ನಿಜವಾಗಿಯೂ ಹೆಮ್ಮೆಯ ಕ್ಷಣ. ಖೇಲ್‌ ರತ್ನ ದೇಶದಲ್ಲಿ ಕ್ರೀಡಾಪಟುಗಳು ಪಡೆಯಬಹುದಾದ ದೊಡ್ಡ ಪ್ರಶಸ್ತಿಯಾಗಿದೆ. ಪ್ರಶಸ್ತಿ ದೊರೆಯಲು ಬೆಂಬಲಿಸಿದ ನನ್ನ ಕೋಚ್​, ತಂಡದ ಸಹಾ ಆಟಗಾರ್ತಿಯರು ಹಾಗೂ ನನ್ನ ಕುಟುಂಬದವರಿಗೆ ಸದಾ ಋಣಿ' ಎಂದು ಹೇಳಿದ್ದಾರೆ.

'ಕಠಿಣ ಪರಿಶ್ರಮಕ್ಕೆ ಪ್ರಶಸ್ತಿ ದೊರೆತಾಗ ಬಹಳ ಸಂತೋಷವಾಗುತ್ತದೆ. ಈ ಪ್ರಶಸ್ತಿ ನನಗೆ ಮತ್ತು ನನ್ನಂತಹ ಅನೇಕ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗಲಿದೆ. ನನ್ನ ಜೊತೆ ಪ್ರಶಸ್ತಿ ಪಡೆದ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ' ಎಂದು ರಾಣಿ ತಿಳಿಸಿದ್ದಾರೆ.

ರಾಣಿ ರಾಂಪಾಲ್​ ಜೊತೆಗೆ 'ದ್ರೋಣಾಚಾರ್ಯ ಪ್ರಶಸ್ತಿ'ಗೆ ಪಾತ್ರರಾದ ಮಾಜಿ ಆಟಗಾರರಾದ ಜೂಡೆ ಫೆಲಿಕ್ಸ್, ರೊಮೇಶ್​ ಪತಾನಿಯಾ ಹಾಗೂ 'ಧ್ಯಾನ್​ಚಂದ್​ ಪ್ರಶಸ್ತಿ'ಗೆ ಪಾತ್ರರಾಗಿರುವ ಅಜಿತ್ ಸಿಂಗ್​​ ಅವರಿಗೆ ಹಾಕಿ ಇಂಡಿಯಾ ಅಭಿನಂದನೆ ಸಲ್ಲಿಸಿದೆ.

ಮಹಿಳಾ ಹಾಕಿ ತಂಡದ ದೀಪಿಕಾ ಪುರುಷರ ತಂಡದ ಅಕ್ಷ್​ದೀಪ್​ ಸಿಂಗ್​ 'ಅರ್ಜುನ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.