ETV Bharat / sports

ಟೋಕಿಯೋ ಒಲಿಂಪಿಕ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ

author img

By

Published : Jun 21, 2021, 7:49 PM IST

Updated : Jun 22, 2021, 7:49 PM IST

ಜುಲೈ 23ರಿಂದ ಆಗಸ್ಟ್ 8ರ ಟೋಲಿಯೋದಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಕಳೆದ ಭಾನುವಾರ ಹಾಕಿ ಇಂಡಿಯಾ 16 ಸದಸ್ಯರ ಮಹಿಳಾ ತಂಡವನ್ನು ನೇಮಿಸಿತ್ತು. ಆದರೆ, ನಾಯಕಿಯ ಹೆಸರನ್ನು ನಂತರ ಘೋಷಿಸುವುದಾಗಿ ತಿಳಿಸಿದ್ದರು. ಇಂದು ರಾಣಿ ರಾಂಪಾಲ್ ಅವರನ್ನು ನಾಯಕಿಯನ್ನಾಗಿ, ದೀಪ್ ಗ್ರೇಸ್ ಎಕ್ಕಾ ಮತ್ತು ಗೋಲ್​ ಕೀಪರ್ ಸವಿತಾ ಪೂನಿಯಾ ಅವರನ್ನು ಉಪನಾಯಕಿಯರನ್ನಾಗಿ ಆಯ್ಕೆ ಮಾಡಿದೆ.

ರಾಣಿ ರಾಂಪಾಲ್
ರಾಣಿ ರಾಂಪಾಲ್

ನವದೆಹಲಿ: ಮುಂದಿನ ತಿಂಗಳು ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ಅವರನ್ನು ನಾಯಕಿಯಾಗಿ ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ

ಜುಲೈ 23ರಿಂದ ಆಗಸ್ಟ್ 8ರವರೆಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಕಳೆದ ಭಾನುವಾರ ಹಾಕಿ ಇಂಡಿಯಾ 16 ಸದಸ್ಯರ ಮಹಿಳಾ ತಂಡವನ್ನು ಘೋಷಿಸಿತ್ತು. ಆದರೆ, ನಾಯಕಿಯ ಹೆಸರನ್ನು ನಂತರ ಘೋಷಿಸುವುದಾಗಿ ತಿಳಿಸಿದ್ದರು. ಇಂದು ರಾಣಿ ರಾಂಪಾಲ್ ಅವರನ್ನು ನಾಯಕಿಯನ್ನಾಗಿ, ದೀಪ್ ಗ್ರೇಸ್ ಎಕ್ಕಾ ಮತ್ತು ಗೋಲ್​ ಕೀಪರ್ ಸವಿತಾ ಪೂನಿಯಾ ಅವರನ್ನು ಉಪ ನಾಯಕಿಯರನ್ನಾಗಿ ಆಯ್ಕೆ ಮಾಡಿದೆ.

" ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ. ತಂಡದ ಸಹ ಆಟಗಾರ್ತಿಯರು ಹಿರಿಯ ಆಟಗಾರರಂತೆ ಜವಾಬ್ದಾರಿಯನ್ನು ಹಂಚಿಕೊಂಡಿದ್ದರಿಂದ ಕಳೆದ ಕೆಲವು ವರ್ಷಗಳಲ್ಲಿ ನಾಯಕಿಯಾಗಿ ನನ್ನ ಪಾತ್ರವನ್ನು ಸುಲಭಗೊಳಿಸಿತ್ತು" ಎಂದು 26 ವರ್ಷದ ರಾಣಿ ಹೇಳಿದ್ದಾರೆ.

ರಾಣಿ 2016ರ ರಿಯೋ ಒಲಿಂಪಿಕ್ಸ್​ನಲ್ಲೂ ಭಾರತ ತಂಡವನ್ನು ಮುನ್ನಡೆಸಿದ್ದರು. ಹಾಗಾಗಿ ರಾಣಿ ನಮ್ಮ ಈ ತಂಡದ ನಾಯಕತ್ವಕ್ಕೆ ಸಹಜ ಆಯ್ಕೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ಅಲ್ಲದೆ ಅವರಿಗೆ ಯುವ ಆಟಗಾರ್ತಿಯರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವಿದೆ ಎಂದು ತಿಳಿಸಿದೆ.

ಸವಿತಾ ಮತ್ತು ದೀಪ್​ ಕಳೆದ ಒಂದು ದಶಕಗಳಿಂದ ಲೀಡರ್​ಶಿಪ್ ಗ್ರೂಪ್​ನ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೇ ಭಾರತದ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ 2018ರಲ್ಲಿ 9ನೇ ಶ್ರೇಯಾಂಕ ತಲುಪಲು ಅವರಿಬ್ಬರ ಪಾತ್ರ ಮಹತ್ವವಾಗಿತ್ತು ಎಂದು ಬೋರ್ಡ್ ತಿಳಿಸಿದೆ.

ಇದನ್ನು ಓದಿ:ಟೋಕಿಯೋ ಒಲಿಂಪಿಕ್ಸ್​ಗೆ 16 ಸದಸ್ಯರುಳ್ಳ ಮಹಿಳಾ ಹಾಕಿ ತಂಡ ಪ್ರಕಟ

Last Updated : Jun 22, 2021, 7:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.