ETV Bharat / sports

ಜನವರಿ 5 ರಿಂದ ಭಾರತೀಯ ಪುರುಷರ ಹಾಕಿ ತಂಡದ ರಾಷ್ಟ್ರೀಯ ಶಿಬಿರ ಆರಂಭ

author img

By

Published : Jan 2, 2021, 8:48 PM IST

ಈ ಶಿಬಿರ ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ​(SAI)ದ ಕ್ಯಾಂಪಸ್​ನಲ್ಲಿ ಆಯೋಜನೆಯಾಗಿದೆ.

ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ಹೈದರಾಬಾದ್​: ಮೂರು ವಾರಗಳ ಬಿಡುವಿನ ನಂತರ ನಾಯಕ ಮನ್​ಪ್ರೀತ್ ಸಿಂಗ್​ ಹಾಗೂ ಗೋಲ್ ಕೀಪರ್​ ಪಿ.ಆರ್.ಶ್ರೀಜೇಶ್​ ಸೇರಿದಂತೆ 33 ಮಂದಿಯ ಸಂಭಾವ್ಯ ಹಾಕಿ ತಂಡ ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ಈ ಶಿಬಿರ ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ​(SAI)ದ ಕ್ಯಾಂಪಸ್​ನಲ್ಲಿ ಆಯೋಜನೆಯಾಗಿದೆ. ಸಾಯ್ ಮತ್ತು ಹಾಕಿ ಇಂಡಿಯಾದ ಎಸ್​ಒಪಿಗಳ ಸ್ಟ್ಯಾಂಡರ್ಡ್​ ಆಪರೇಟಿಂಗ್​ ಪ್ರೊಸೀಜರ್‌ಗಳ ಪ್ರಕಾರ ತಂಡ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಲಿದೆ.

ಮೂರು ವಾರಗಳ ವಿರಾಮದ ನಂತರ ಎಲ್ಲಾ ಆಟಗಾರರು ಮಾನಸಿಕ ಮತ್ತು ದೈಹಿಕವಾಗಿ ಉತ್ತಮ ಭಾವನೆಯೊಂದಿಗೆ ಮರಳುತ್ತಿದ್ದಾರೆ ಎಂದು ಭಾವಿಸಿದ್ದೇನೆ. ಮುಂಬರುವ ಸ್ಪರ್ಧೆಗಳಿಗೆ ಸಿದ್ಧರಾಗುವುದೇ ನಮ್ಮ ಈ ಶಿಬಿರದ ಪ್ರಮುಖ ಗುರಿ ಎಂದು ಕೋಚ್​ ಗ್ರಹಂ ರೀಡ್​ ಹೇಳಿದ್ದಾರೆ.

ಭಾರತೀಯ ಪುರುಷರ ತಂಡ ಕಳೆದ ವರ್ಷ ಫೆಬ್ರವರಿ 22 ರಂದು ಎಫ್‌ಐಹೆಚ್ ಹಾಕಿ ಪ್ರೊ ಲೀಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿತ್ತು.

ಓದಿ: 2020ರ ಐಪಿಎಲ್​ನಿಂದ ಹೊರಬಂದಿದ್ದಕ್ಕೆ ಕಾರಣ ಬಹಿರಂಗಗೊಳಿಸಿದ ರೈನಾ.. ಮತ್ತೇನಿಲ್ಲ ಆಗಿದ್ದಿಷ್ಟೇ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.