ETV Bharat / sports

ಟೋಕಿಯೋ ಒಲಿಂಪಿಕ್ಸ್​ಗೆ 16 ಸದಸ್ಯರುಳ್ಳ ಮಹಿಳಾ ಹಾಕಿ ತಂಡ ಪ್ರಕಟ

author img

By

Published : Jun 17, 2021, 6:33 PM IST

ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟಕ್ಕಾಗಿ ಭಾರತ ತನ್ನ 16 ಸದಸ್ಯರ ಮಹಿಳಾ ಹಾಕಿ ತಂಡವನ್ನು ಘೋಷಣೆ ಮಾಡಿದೆ.

India name 8 debutants in women's hockey squad for Tokyo Olympics
ಟೋಕಿಯೋ ಒಲಿಂಪಿಕ್ಸ್​ಗೆ 16 ಸದಸ್ಯರುಳ್ಳ ಮಹಿಳಾ ಹಾಕಿ ತಂಡ ಪ್ರಕಟ

ಬೆಂಗಳೂರು: ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಟೋಕಿಯೋ ಕ್ರೀಡಾಕೂಟಕ್ಕಾಗಿ ಭಾರತ ತನ್ನ 16 ಸದಸ್ಯರ ಮಹಿಳಾ ಹಾಕಿ ತಂಡವನ್ನು ಘೋಷಣೆ ಮಾಡಿದೆ. ಇದರಲ್ಲಿ 8 ಆಟಗಾರರಿಗೆ ಒಲಿಂಪಿಕ್ಸ್​ ಆಡುವ ಮೊದಲ ಅವಕಾಶ ಸಿಕ್ಕಿದೆ.

ಈ ತಂಡವು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಭಾಗವಹಿಸಿದ್ದ 8 ಅನುಭವಿ ಆಟಗಾರರನ್ನು ಒಳಗೊಂಡಿದೆ. ಡ್ರ್ಯಾಗ್ ಫ್ಲಿಕರ್ ಗುರ್ಜಿತ್ ಕೌರ್, ಉದಿತಾ, ನಿಶಾ, ನೇಹಾ, ನವನೀತ್ ಕೌರ್, ಶರ್ಮಿಳಾ ದೇವಿ, ಲಾಲ್ರೆಮ್ಸಿಯಾಮಿ ಮತ್ತು ಸಲೀಮಾ ಟೆಟೆ ಈ ತಂಡದಲ್ಲಿದ್ದಾರೆ. ಒಲಿಂಪಿಕ್ಸ್​​ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಮೂರನೇ ಬಾರಿಗೆ ಕಾಣಿಸಿಕೊಳ್ಳಲಿದೆ. ಈ ಹಿಂದೆ 1980 ಮತ್ತು 2016ರಲ್ಲಿ ಭಾಗವಹಿಸಿತ್ತು.

ಸಂಪೂರ್ಣ ತಂಡದ ಮಾಹಿತಿ:

  • ಗೋಲ್​ಕೀಪರ್​: ಸವಿತಾ
  • ಡಿಫೆಂಡರ್​​: ಡೀಪ್ ಗ್ರೇಸ್ ಎಕ್ಕಾ, ನಿಕ್ಕಿ ಪ್ರಧಾನ್, ಗುರ್ಜಿತ್ ಕೌರ್, ಉದಿತಾ.
  • ಮಿಡ್‌ ಫೀಲ್ಡರ್‌ಗಳು: ನಿಶಾ, ನೇಹಾ, ಸುಶೀಲಾ ಚಾನು ಪುಖ್ರಾಂಬಂ, ಮೋನಿಕಾ, ನಂಜೋತ್ ಕೌರ್, ಸಲೀಮಾ ಟೆಟೆ.
  • ಫಾರ್ವರ್ಡ್​ಗಳು: ರಾಣಿ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ವಂದನಾ ಕಟಾರಿಯಾ, ಶರ್ಮಿಳಾ, ದೇವಿ.

ಇದನ್ನೂ ಓದಿ: ಹಾಕಿ : ಟೋಕಿಯೋದಲ್ಲಿ ಪದಕ ಗೆಲ್ಲಬಲ್ಲ 5 ತಂಡಗಳಲ್ಲಿ ಭಾರತವೂ ಒಂದು : ಮಾಜಿ ಕೋಚ್ ಓಲ್ಟ್​ಮನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.