ETV Bharat / sports

ಕೋವಿಡ್​ 19 ಟೆಸ್ಟ್​ನಲ್ಲಿ ನೆಗೆಟಿವ್​: ಆಸ್ಪತ್ರೆಯಿಂದ ಎಲ್ಲಾ 6 ಹಾಕಿ ಆಟಗಾರರೂ ಡಿಸ್ಚಾರ್ಜ್​

author img

By

Published : Aug 17, 2020, 6:38 PM IST

ಆಗಸ್ಟ್​ 19ರಿಂದ ರಾಷ್ಟ್ರೀಯ ಹಾಕಿ ಶಿಬಿರ ಆರಂಭವಾಗಲಿದೆ. ಆದರೆ ಈ ಆರು ಆಟಗಾರರಿಗೆ ತಕ್ಷಣ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಡಿಮೆ ಎನ್ನಲಾಗಿದೆ. ಸಾಯ್​ ವೈದ್ಯಕೀಯ ಮಂಡಳಿ ಮತ್ತೊಮ್ಮೆ ಪರೀಕ್ಷೆ ನಡೆಸಿ ನೆಗೆಟಿವ್​ ಬಂದ ನಂತ ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ.

ಭಾರತ ಹಾಕಿ ತಂಡ
ಹಾಕಿ ಆಟಗಾರರೂ ಡಿಸ್ಚಾರ್ಜ್​

ಬೆಂಗಳೂರು: ಕೋವಿಡ್​ 19 ಪಾಸಿಟಿವ್​ ವರದಿ ಬಂದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ಹಾಕಿ ತಂಡದ ಎಲ್ಲಾ ಆಟಗಾರರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ತರಬೇತಿ ಶಿಬಿರಕ್ಕೆಂದು ಬಂದಿದ್ದ ಎಲ್ಲಾ ಹಾಕಿ ಆಟಗಾರರನ್ನು ಕೋವಿಡ್​ 19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 6 ಆಟಗಾರರಿಗೆ ಪಾಸಿಟಿವ್​ ವರದಿ ಬಂದಿತ್ತು. ಮೊದಲು ಸಾಯ್​ ಕ್ಯಾಂಪಸ್​ನಲ್ಲೇ ಕ್ವಾರಂಟೈನ್​ನಲ್ಲಿರಿಸಲಾಗಿತ್ತು. ಆದರೆ ಸ್ಟ್ರೈಕರ್​ ಮಂದೀಪ್​ ಸಿಂಗ್​ಗೆ ರಕ್ತದಲ್ಲಿ ಆಮ್ಲಜನಕ ಕಡಿಮೆಯಾದ ಹಿನ್ನಲೆ ಅವರನ್ನು ಎಸ್​ಎಸ್​ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಮುಂಜಾಗೃತ ಕ್ರಮವಾಗಿ ಪಾಸಿಟಿವ್​ ಬಂದಿದ್ದ ನಾಯಕ ಮನ್‌ಪ್ರೀತ್ ಸಿಂಗ್​, ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ವರುಣ್ ಕುಮಾರ್, ಗೋಲ್ ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ಅವರನ್ನು ಸಹಾ ಆಸ್ಪತ್ರಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಆಗಸ್ಟ್​ 10 ಮತ್ತು 12ರಂದು ಕೋವಿಡ್​ ಪರೀಕ್ಷೆ ನಡೆಸಲಾಗಿತ್ತು.

"ಎಲ್ಲಾ ಹಾಕಿ ಆಟಗಾರರ ಚೇತರಿಸಿಕೊಂಡಿದ್ದು, 2 ಕೋವಿಡ್ -19 ಪರೀಕ್ಷೆಯಲ್ಲೂ ಧನಾತ್ಮಕ ವರದಿ ಪಡೆದಿದ್ದಾರೆ. ಹಾಗಾಗಿ ಇಂದು ಸಂಜೆ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ " ಎಂದು ಶಾಯ್​ ಮೂಲಗಳಿಂದ ತಿಳಿದುಬಂದಿದೆ.

ಆಗಸ್ಟ್​ 19ರಿಂದ ರಾಷ್ಟ್ರೀಯ ಹಾಕಿ ಶಿಬಿರ ಆರಂಭವಾಗಲಿದೆ. ಆದರೆ ಈ ಆರು ಆಟಗಾರರಿಗೆ ತಕ್ಷಣ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಡಿಮೆ ಎನ್ನಲಾಗಿದೆ. ಸಾಯ್​ ವೈದ್ಯಕೀಯ ಮಂಡಳಿ ಮತ್ತೊಮ್ಮೆ ಪರೀಕ್ಷೆ ನಡೆಸಿ ನೆಗೆಟಿವ್​ ಬಂದ ನಂತ ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.