ETV Bharat / sports

ಐಪಿಎಲ್​ ದಾರಿಯಲ್ಲೇ ಐಎಸ್​ಎಲ್:​ 82 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ ಇಂಡಿಯನ್​ ಸೂಪರ್​ ಲೀಗ್

author img

By

Published : Nov 19, 2020, 8:14 PM IST

ಕೊರೊನಾ ಮಧ್ಯೆಯೂ ಶುಕ್ರವಾರದಿಂದ ಆರಂಭಗೊಳ್ಳುತ್ತಿರುವ ಬಹು ನಿರೀಕ್ಷಿತ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಕ್ರಿಕೆಟ್​​ಗಿಂತ ಕಮ್ಮಿಯಿಲ್ಲ ಎಂಬುದನ್ನು ಸಾಬೀತುಪಡಿಸಲಿದೆ. ಕೋವಿಡ್ ಕಾರಣ ಗೋವಾದಲ್ಲಿ ನಡೆಯಲಿರುವ ಟೂರ್ನಿ ಬರೋಬ್ಬರಿ 82 ಪ್ರದೇಶಗಳಲ್ಲಿ ನೇರಪ್ರಸಾರಗೊಳ್ಳಲಿದೆ.

82 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ ಇಂಡಿಯನ್​ ಸೂಪರ್​ ಲೀಗ್
82 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ ಇಂಡಿಯನ್​ ಸೂಪರ್​ ಲೀಗ್

ಮುಂಬೈ: ಇದೇ ತಿಂಗಳು ದುಬೈನಲ್ಲಿ ಮುಗಿದಿದ್ದ ಇಂಡಿಯನ್​ ಪ್ರೀಮಿಯರ್ ಲೀಗ್​ ಬರೋಬ್ಬರಿ 120 ರಾಷ್ಟ್ರಗಳಲ್ಲಿ ಪ್ರಸಾರವಾಗುವ ಮೂಲಕ ದಾಖಲೆ ಬರೆದಿತ್ತು. ಇದೀಗ ಭಾರತದ ಬಹುದೊಡ್ಡ ಫುಟ್​ಬಾಲ್​ ಲೀಗ್​ ಆಗಿರುವ ಇಂಡಿಯನ್ ಸೂಪರ್ ಲೀಗ್ ಕೂಡ 82 ರಾಷ್ಟ್ರಗಳಲ್ಲಿ ಪ್ರಸಾರ ಕಾಣಲಿದೆ.

ಕೊರೊನಾ ಮಧ್ಯೆಯೂ ಶುಕ್ರವಾರದಿಂದ ಆರಂಭಗೊಳ್ಳುತ್ತಿರುವ ಬಹು ನಿರೀಕ್ಷಿತ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಕ್ರಿಕೆಟ್​ಗಿಂತ ಕಮ್ಮಿಯಿಲ್ಲ ಎಂಬುದನ್ನು ಸಾಬೀತುಪಡಿಸಲಿದೆ. ಕೋವಿಡ್ ಕಾರಣ ಗೋವಾದಲ್ಲಿ ನಡೆಯಲಿರುವ ಟೂರ್ನಿ ಬರೋಬ್ಬರಿ 82 ಪ್ರದೇಶಗಳಲ್ಲಿ ನೇರಪ್ರಸಾರಗೊಳ್ಳಲಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಫುಟ್​ಬಾಲ್​ ಕ್ರೀಡೆ ಹೊಂದಿರುವುದರಿಂದ ಟಿವಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಐದು ಪಾಲುದಾರರ ಮೂಲಕ ವಿಶ್ವದಾದ್ಯಂತ 82 ದೇಶಗಳಲ್ಲಿ ಪಂದ್ಯವನ್ನು ನೇರಪ್ರಸಾರ ನೀಡಲು ಮುಂದಾಗಿವೆ.

7ನೇ ಆವತ್ತಿಯ ಐಎಸ್‌ಎಲ್​ ಯುಎಸ್‌ಎ, ಆಸ್ಟ್ರೇಲಿಯಾ, ಯುರೋಪ್, ಸೆಂಟ್ರಲ್ ಏಷ್ಯಾ, ಸೌತ್ ಈಸ್ಟ್ ಏಷ್ಯಾ, ಏಷ್ಯಾ ಪೆಸಿಫಿಕ್ ದೇಶಗಳಲ್ಲಿ ಲೈವ್ ಕಾಣಲಿದೆ.

2020-21ರ ಐಎಸ್‌ಎಲ್ ಆವೃತ್ತಿಯಲ್ಲಿ 11 ತಂಡಗಳಿದ್ದು, ಒಟ್ಟು 115 ಪಂದ್ಯಗಳು ನಡೆಯಲಿವೆ. ಈ ಆವೃತ್ತಿಯಲ್ಲಿ ನೂರು ವರ್ಷಗಳ ಇತಿಹಾಸವಿರುದ ಎಟಿಕೆ ಮೋಹನ್ ಬಗಾನ್ ಮತ್ತು ಎಸ್‌ಇ ಈಸ್ಟ್ ಬೆಂಗಾಲ್ ತಂಡಗಳೂ ಸೇರಿಕೊಂಡಿರುವುದು ಐಎಸ್​ಎಲ್​ಗೆ ಮತ್ತಷ್ಟು ಬೆಂಬಲ ದೊರೆತಂಗಾಗಿದೆ. ನಾಳೆ ಉದ್ಘಾಟನೆಗೊಳ್ಳುವ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ಮತ್ತು ಕೇರಳ ಬ್ಲಾಸ್ಟರ್ಸ್​ ತಂಡಗಳು ಮುಖಾಮುಖಿಯಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.